Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಳ್ಳಾರಿ : ಫೆ.02 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ

Facebook
Twitter
Telegram
WhatsApp

 

ಬಳ್ಳಾರಿ,(ಜ.31): ಬಳ್ಳಾರಿ ನಗರ ವ್ಯಾಪ್ತಿಯ 110/11 ಕೆ.ವಿ.ಉತ್ತರ ವಿದ್ಯುತ್ ವಿತರಣಾ ಕೇಂದ್ರದ 20 ಎಂವಿಎ ಪರಿವರ್ತಕ ತೈಲ ಶೋಧನೆ ಕಾರ್ಯದ ನಿಮಿತ್ತ ವಿವಿಧೆಡೆ ಫೀಡರ್‍ಗಳಲ್ಲಿ ಫೆ.2ರಂದು ಬೆಳಗ್ಗೆ 11ರಿಂದ ಮದ್ಯಾಹ್ನ 2ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜೆಸ್ಕಾಂ ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳು: ನಗರದ ಎಫ್-1 ಫೀಡರ್ ಏರಿಯಾಗಳಾದ ಕಪ್ಪಗಲ್ಲು ರಸ್ತೆ, ಸಿದ್ಧಾರ್ಥ ನಗರ ಕಾಲೋನಿ, ಹೌಸಿಂಗ್ ಬೋರ್ಡ್, ಬೀಚಿ ನಗರ, ಕೆ.ಇ.ಬಿ ಕ್ವಾಟರ್ಸ್, ಭಗತ್‍ಸಿಂಗ್ ನಗರ, ಹೆಚ್‍ಡಿಎಫ್‍ಸಿ ಬ್ಯಾಂಕ್, ಎಸಿ ಸ್ಟ್ರೀಟ್, ಬಾಲಾಜಿ ನರ್ಸಿಂಗ್ ಹೋಮ್, ಲಾ ಕಾಲೇಜು, ಮುಲ್ಲಂಗಿ ಲೇಔಟ್, ಕನಕದುರ್ಗ ಲೇಔಟ್.

ಎಫ್-7 ಫೀಡರ್ ಏರಿಯಾಗಳಾದ ಸಂಗನಕಲ್ಲು ರಸ್ತೆ, ಎಸ್.ಎನ್ ಪೇಟೆ 3ನೇ ಕ್ರಾಸ್, ಜಿಲ್ಲಾ ಆಸ್ಪತ್ರೆ, ರಾಘವ ಕಲಾಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಂಪೌಂಡ್, ರೂಪನಗುಡಿ ರಸ್ತೆ, ಮುಬಾರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ. ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಅಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮ ಕಟ್ಟೆ.

ಎಫ್-8 ಫೀಡರ್ ಎರಿಯಾಗಳಾದ ಗಣೇಶ ಕಾಲೋನಿ, ಸಿದ್ಗಿಕಾಲೋನಿ, ಗೊಲ್ಲನರಸಪ್ಪ ಕಾಲೋನಿ, ಎಂಎಂಟಿಸಿ ಕಾಲೋನಿ, ಮಾರುತಿ ನಗರ, ಹುಸೇನ ನಗರ, ರಾಮಯ್ಯ ಕಾಲೋನಿ, ರಾಘವೇಂದ್ರ ಕಾಲೋನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ, ಹದ್ದಿನಗುಂಡು ರಸ್ತೆ, ಎಸ್.ಎನ್.ಪೇಟೆ 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ವಿಶಾಲನಗರ, ದತ್ತಸಾಯಿ ನಗರ, ಹನುಮನ್ ನಗರ, ಎಚ್.ಎಲ್.ಸಿ. ಕಾಲೋನಿ.

ಎಫ್-9 ಫೀಡರ್ ಏರಿಯಾಗಳಾದ ನೆಹರು ಕಾಲೋನಿ, 1ನೇ ಅಡ್ಡರಸ್ತೆ, 2ನೇ ಅಡ್ಡರಸ್ತೆ, ಶಂಕರ್ ಕಾಲೋನಿ, ಎಸ್.ಎನ್. ಪೇಟೆ 6ನೇ, 5ನೇ ಮತ್ತು 4ನೇ, 3ನೇ ಅಡ್ಡರಸ್ತೆ, ಡಿ.ಆರ್. ಗ್ರೌಂಡ್, ಕೂಲ್ ಕಾರ್ನರ್, ಡಬಲ್ ರಸ್ತೆ, ಕೋಲಾಂಚಾಲಂ ಕಂಪೌಂಡ್, ರಾಯಲ್ ಸರ್ಕಲ್, ಗಾಂಧಿ ಭವನ, ಸಿಎಂಸಿ, ಅಂಬಲಿ ಬಾಗ್, ತಾಲ್ಲೂಕ್ ಆಫೀಸ್, ಡಿಸಿ ಆಫೀಸ್.

ಎಫ್-13 ಫೀಡರ್ ಏರಿಯಾಗಳಾದ ದೇವಿನಗರ, ಸಿರುಗುಪ್ಪಾ ರಸ್ತೆ, ಇಂದಿರಾನಗರ, ಸಂಜಯನಗರ, ಶಿವಲಿಂಗ ನಗರ, ಶಾಸ್ತ್ರೀನಗರ, ಬಸವನಕುಂಟೆ, ಎಂ.ಕೆ.ನಗರ, ಹವಂಬಾವಿ, ಅಶೋಕ ನಗರ, ಶ್ರೀನಿವಾಸ ನಗರ, ಕುರಿಹಟ್ಟಿ, ಎಸ್.ಪಿ.ಸರ್ಕಲ್, ವೀರಣ್ಣಗೌಡ ನಗರ, ರಾಜೇಶ್ವರಿ ನಗರ, ಕೆ.ಎಂ.ಎಫ್, ಭುವನಗಿರಿ ಕಾಲೋನಿ, ಎಸ್.ಎಲ್.ವಿ ಕಾಲೋನಿ, ಶಿವಗಿರಿ ಕಾಲೋನಿ, ರಾಮನಗರ, ಶ್ರೀನಿವಾಸ ನಗರ, ಸೂರ್ಯ ಕಾಲೋನಿ.

ಎಫ್-14 ಫೀಡರ್ ಏರಿಯಾಗಳಾದ ಗಣೇಶ ಕಾಲೋನಿ, ಸಿದ್ಗಿಕಾಲೋನಿ, ಗೊಲ್ಲನರಸಪ್ಪ ಕಾಲೋನಿ, ಎಂಎಂಟಿಸಿ ಕಾಲೋನಿ, ಮಾರುತಿ ನಗರ, ಹುಸೇನ ನಗರ, ರಾಮಯ್ಯ ಕಾಲೋನಿ, ರಾಘವೇಂದ್ರ ಕಾಲೋನಿ 1ನೇ ಹಂತ, ಅನಂತಪುರ ರಸ್ತೆ, ಪಟೇಲ್ ನಗರ, ಹದ್ದಿನಗುಂಡುರಸ್ತೆ, ಎಸ್.ಎನ್.ಪೇಟೆ 1ನೇ ಆಡ್ಡರಸ್ತೆ, 2ನೇ ಅಡ್ಡರಸ್ತೆ, ವಿಶಾಲ ನಗರ, ದತ್ತಸಾಯಿ ನಗರ, ಹನುಮನ್ ನಗರ, ಎಚ್.ಎಲ್.ಸಿ ಕಾಲೋನಿ.

ಎಫ್-10 ಫೀಡರ್ ಏರಿಯಾಗಳಾದ ಗಾಂಧಿನಗರ, ವಾಟರ್ ಬೂಸ್ಟರ್ ನಗರ ಮತ್ತು ಗ್ರಾಮೀಣ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.
ಆದ್ದರಿಂದ ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಜ್ಯದ ಗಮನ ಸೆಳೆಯಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ : ಕುಮಾರಸ್ವಾಮಿಗೆ ಡಿಕೆಶಿ ಟಾಂಗ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಓಡಾಡುತ್ತಿದೆ. ಅವರೇ ಪೆನ್ ಡ್ರೈವ್ ಹಂಚಿರುವುದು ಅಂತ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರಿಗೆ

ವಿಶ್ವ ರೆಡ್‍ಕ್ರಾಸ್ ದಿನಾಚರಣೆ | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿತ್ರದುರ್ಗ ಮೇ. 08 :  ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ

ಚಿತ್ರದುರ್ಗ ಜಿಲ್ಲೆಯ ರೈತರಿಗೆ ಉಪಯುಕ್ತ ಮಾಹಿತಿ | ಬೆಳೆ ಪರಿಹಾರ ಪಾವತಿ ಸಂಬಂಧ ಸಹಾಯವಾಣಿ ಆರಂಭ : ಇಲ್ಲಿದೆ ತಾಲ್ಲೂಕುವಾರು ಮಾಹಿತಿ

ಚಿತ್ರದುರ್ಗ. ಮೇ.08:   ಬೆಳೆ ಪರಿಹಾರ ಪಾವತಿ ಸಂಬಂಧ ಮಾಹಿತಿ ಪಡೆದುಕೊಳ್ಳಲು ರೈತರಿಗೆ ಅನುಕೂಲವಾಗುವಂತೆ ಜಿಲ್ಲಾಧಿಕಾರಿ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ  ಹಾಗೂ ಜಿಲ್ಲೆಯ 6 ತಾಲ್ಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

error: Content is protected !!