ಬೆಂಗಳೂರು: ಮಾದೇಗೌಡರ ಬಗ್ಗೆ ಮಾಜಿ ಸಂಸದ ಶಿವರಾಮೇಗೌಡ ಅಸಭ್ಯವಾಗಿ ಮಾತನಾಡಿದ್ದರು. ಅವರನ್ನ ಎಕ್ಕಡದಲ್ಲಿ ಹೊಡೆದಿದ್ದೆ ಅಂತೆಲ್ಲಾ ಏಕವಚನದಲ್ಲಿ ಮಾತನಾಡಿದ್ದರು. ಈ ಆಡಿಯೋ ಎಲ್ಲಡೆ ವೈರಲ್ ಆಗಿ ಆಕ್ರೋಶವೂ ವ್ಯಕ್ತವಾಗಿತ್ತು.
ಜೆಡಿಎಸ್ ನಿಂದ ಅಂತವರನ್ನ ತೆಗೆಯಲು ಒತ್ತಡ ಕೇಳಿ ಬಂದಿತ್ತು. ಇದೀಗ ಅವರನ್ನ ಉಚ್ಛಾಟನೆ ಮಾಡಲಾಗಿದೆ. ಹೆಚ್ ಡಿ ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷ H K ಕುಮಾರಸ್ವಾಮಿ ಅವರಿಗೆ ಉಚ್ಛಾಟನೆ ಮಾಡಲು ಸೂಚಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು, ಒಬ್ಬ ನಮ್ಮ ಸಮಾಜದ ಪ್ರಮುಖ ನಾಯಕರು ದಿವಂಗತರಾಗಿದ್ದಾರೆ. ಅವರ ಹೆಸರನ್ನ ಯಾಕೆ ತಂದ್ರು. ಅವರ ಬದುಕಿನ ಬಗ್ಗೆ, ಹಲ್ಲೆ ನಡೆದದ್ದು, ಏಕವಚನದಲ್ಲಿ ಕೆಟ್ಟ ರೀತಿಯಲ್ಲಿ ಮಾತನಾಡಿದ್ದು ಎಷ್ಟು ಸರಿ. ಈ ಬಗ್ಗೆ ಹಿರಿಯ ನಾಯಕರ ಬಳಿ ಮಾತನಾಡಿ, ಅನುಮತಿಯನ್ನು ಪಡೆದಿದ್ದೇವೆ. ಹೀಗಾಗಿ ರಾಜ್ಯಾಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ. ಶಿಸ್ತು ಕ್ರಮ ತೆಗೆದುಕೊಳ್ಳಲು ಎಂದಿದ್ದಾರೆ.