ಭೂಪಾಲ್ : ಲಂಚ ಮುಕ್ತ ಮಾಡೋದಕ್ಕೆ ಸಾಧ್ಯವಾ ಅನ್ನೋ ಪ್ರಶ್ನೆ ಕಾಡದೆ ಇರದು. ಏನೋ ಕಷ್ಟನೋ ಸುಖನೋ, ಸಾಲನೋ ಸೋಲನೋ ಮಾಡಿ ಹಣ ಕೊಟ್ಟು ಕೆಲಸ ಮಾಡಿಸಿಕೊಳ್ತಾರೆ. ಅದು ಸದ್ಯ ನಡೆದುಕೊಂಡು ಬಂದಿರುವ ಪದ್ಧತಿ. ಆದ್ರೆ ಲಂಚ ಬಾಕರಿಗೆ ಮಾನವೀಯತೆ ಮೆರೆಯುವಲ್ಲಿಯೂ ಧನದಾಹಿಗಳಾಗುತ್ತಿರುವುದು ವಿಷಾದಕರ.
ಮಧ್ಯಪ್ರದೇಶದ ಭಿಂಡ್ ನಲ್ಲಿ ತುಂಬು ಗರ್ಭೀಣಿ ಈ ಲಂಚ ಬಾಕತನಕ್ಕೆ ತನ್ನ ಹಸುಗೂಸನ್ನ ಕಳೆದುಕೊಂಡಿದ್ದಾಳೆ. ರಾಜಪುರ ಗ್ರಾಮದ ನಿವಾಸಿ ಕಲ್ಲೋ ಎಂಬಾಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ರಾತ್ರೋ ರಾತ್ರಿ ಆಕೆಯ ಪತಿ ಹೆಂಡತಿಯನ್ನ ಆಸ್ಪತ್ರೆಗೆಂದು ಭಿಂಡ್ ಗೆ ಕರೆದುಕೊಂಡು ಬಂದಿದ್ದಾನೆ.
ಈ ವೇಳೆ ಆಸ್ಪತ್ರೆ ಸಿಬ್ಬಂದಿ 5 ಸಾವಿರ ಹಣ ಕೊಡೋದಕ್ಕೆ ಕೇಳಿದ್ದಾನೆ. ಆದ್ರೆ ಹಣ ಇಲ್ಲ ಎಂದಾಗ ಬೇರೆ ಕಡೆ ಅಲ್ಟ್ರಾಸೌಂಡ್ ಮಾಡಿಸುವಂತೆ ಸೂಚಿಸಿದ್ದಾನೆ. ಹೊರಗಡೆ ಬಂದಾಗ ಮಗು ಜನಿಸಿದೆ. ಆದ್ರೆ ಈ ವೇಳೆ ಮಗು ಸಾವನ್ನಪ್ಪಿದೆ. ಈ ಘಟನೆ ಸಂಬಂಧ ತನಿಖೆ ನಡೆಸಲು ಜಿಲ್ಲಾಡಳಿತ ಸೂಚನೆ ನೀಡಿದೆ.