ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ರಚಿ ಡಿ ಚನ್ನಣ್ಣನವರ್ ಅವರನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಸಿಐಡಿ ಅಧಿಕಾರಿಯಾಗಿದ್ದ ರವಿ ಡಿ ಚನ್ನಣ್ಣನವರ್ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪೊಲೀಸ್ ಇಲಾಖೆಯಿಂದ ತೆಗೆದು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಗೆ ವರ್ಗಾವಣೆ ಮಾಡಿದೆ.
ರವಿ ಡಿ ಚನ್ನಣ್ಣನವರ್ ಜೊತೆಗೆ ಇನ್ನು ಎಂಟು ಅಧಿಕಾರಿಗಳನ್ನ ವರ್ಗಾವಣೆ ಮಾಡಿದೆ. ಭೀಮಾಶಂಕರ್ ಗುಳೇದ್, ಅಬ್ದುಲ್ ಅಹ್ಮದ್, ಟಿ ಶ್ರೀಧರ್, ಟಿ ಪಿ ಶಿವಕುಮಾರ್, ದಿವ್ಯಾಸಾರಾ ಥಾಮಸ್, ಡಿ ಕಿಶೋರ್ ಬಾಬು, ಎ ಗಿರಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.