ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಸಚಿವರು ಸಂಪರ್ಕದಲ್ಲಿದ್ದಾರೆ ಅನ್ನೋ ಮಾತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯ ಅದ್ಯಾವಾಗ ಬಿಜೆಪಿಗರು ನಮ್ಮ ಸಂಪರ್ಕದಲ್ಲಿದ್ದಾರೆ ಅಂತ ಸಿದ್ದರಾಮಯ್ಯ ಹೇಳಿದ್ರೋ ಏನೋ ಆಗಿನಿಂದ ಬಿಜೆಪಿಗರಲ್ಲೂ ಗೊಂದಲ. ಯಾರಿರಬಹುದು ಎಂಬುದೇ ಪ್ರಶ್ನೆ. ಇದು ವಲಸಿಗರೇನಾದ್ರೂ ಮತ್ತೆ ಹೋಗ್ತಾರಾ ಎಂಬ ಅನುಮಾನಗಳು ಮೂಡಿದ್ದವು.
ಇದೀಗ ಇಂದು ನಡೆದ ಸಂಪುಟ ಸಭೆಯಲ್ಲಿ ವಲಸಿಗರೇ ಇದಕ್ಕೆ ಉತ್ತರ ನೀಡಿದ್ದಾರೆ. ನಾವೂ ಮತ್ತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಗೆ ಹೋಗಲ್ಲ. ಬಿಜೆಪಿಯಲ್ಲೇ ಇರುತ್ತೇವೆ. ನಾವೂ ಕಾಂಗ್ರೆಸ್ ಗೆ ಹೋಗ್ತೇವೆ ಅನ್ನೋ ಮಾತಿದೆ. ಆದ್ರೆ ನಾವೂ ಎಲ್ಲಿಯೂ ಹೋಗಲ್ಲ.
ನಮ್ಮನ್ನ ಯಾವಾಗಲೂ ವಲಸಿಗರು ಅಂತಾನೆ ಕರೆಯುತ್ತಾರೆ. ವಲಸಿಗರೆಂದರೆ ನಮಗೂ ಬೇಸರವಾಗುತ್ತೆ. ನಾವು ಎಲ್ಲು ಪಕ್ಷ ಬಿಟ್ಟು ಹೋಗಲ್ಲ. ಎಂದು ನಾರಾಯಣಗೌಡ ಸ್ಪಷ್ಟನೆ ನೀಡಿದ್ದಾರೆ. ನಾವೂ ಪಕ್ಷಕ್ಕೆ ನಿಷ್ಠರಾಗಿರುತ್ತೇವೆ ಎಂದು ವಲಸಿಗ ಸಚಿವರು ಹೇಳಿದ್ದಾರೆ.
ವಲಸಿಗರ ಮಾತು ಕೇಳಿ ಸಿಎಂ ಬೊಮ್ಮಾಯಿ ಅವರು ಫುಲ್ ಖುಷಿಯಾಗಿದ್ದಾರೆ. ನಿಮಗೆ ನಮ್ಮ ಸಪೋರ್ಟ್ ಯಾವಾಗಲೂ ಇರುತ್ತೆ. ಯಾವುದೇ ಆತಂಕ ಬೇಡ. ನಿಮಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತೆ. ನಿಮ್ಮ ಕೆಲಸದ ಬಗ್ಗೆ ವರಿಷ್ಟರಿಗೂ ಮೆಚ್ಚುಗೆ ಇದೆ ಎಂದು ವಲಸಿಗರಿಗೆ ಸಿಎಂ ಬೊಮ್ಮಾಯಿ ಅವರು ಆತ್ಮಸ್ಥೈರ್ಯ ತುಂಬಿದ್ದಾರೆ.