ಬೆಳಗಾವಿ : ಕಳೆದ ಕೆಲವು ದಿನಗಳಿಂದ ರಾಜಕೀಯ ವಲಯದಲ್ಲಿ ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಬಿಜೆಪಿ ನಾಯಕರಿದ್ದಾರೆ ಎಂಬ ಮಾತು. ಸಿದ್ದರಾಮಯ್ಯ ಯಾವಾಗ ಈ ಬಗ್ಗೆ ಹೇಳಿದ್ರೋ ಆಗಿನಿಂದಲೂ ಸಾಕಷ್ಟು ಚರ್ಚೆ ಶುರುವಾಗಿತ್ತು. ಯಾರಿರಬಹುದು ಎಂಬ ಪ್ರಶ್ನೆಗಳು ಮೂಡಿದ್ದವು. ಇದಕ್ಕೆಲ್ಲಾ ಇದೀಗ ಲಖನ್ ಜಾರಕಿಹೊಳಿ ಹೆಸರೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಡಿಕೆಎಸ್ ಜೊತೆ ಸೇರಿ ಕುತಂತ್ರ ಹೆಣೆಯುತ್ತಿದ್ದಾರೆ. ಬೆಳಗಾವಿಯಲ್ಲಿ ಸೋತ ನಾಯಕರು ಅಧಿಕಾರ ಅನುಭವಿಸಿದ್ರು. ಅಥಣಿಯಲ್ಲಿ ಸೋತ ನಾಯಕರು ಉನ್ನತ ಹುದ್ದೆ ಪಡೆದರು. ಆದ್ರೆ ಈಗ ಅವರೇ ಕುತಂತ್ರ ರೂಪಿಸುತ್ತಿದ್ದಾರೆ.
ಸೋಲಲು ಕಾರಣರಾದವರಿಗೆ ಉನ್ನತ ಹುದ್ದೆ ನೀಡಲಾಗುತ್ತಿದೆ. ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ ನನ್ನ ಪರವಾಗಿ ಕೆಲಸ ಮಾಡಿದ್ದರೆ ಮೊದಲ ಸುತ್ತಿನಲ್ಲೇ ಗೆಲುವು ಸಾಧಿಸುತ್ತಿದ್ದೆ. ಬಿಜೆಪಿ ಸೋಲಿಗೆ ಅಥಣಿ ನಾಯಕರೇ ನೇರ ಕಾರಣ. ಡಿಕೆಎಸ್ ಹಾಗೂ ಕಾಂಗ್ರೆಸ್ ಜೊತೆ ಅವರೇ ಸಂಪರ್ಕದಲ್ಲಿದ್ದಾರೆ. ಮುಂದೊಂದು ದಿನ ಅವರು ಕಾಂಗ್ರೆಸ್ ಗೆ ಹೋದರು ಹೋಗಬಹುದು ಎಂದು ಕೆಂಡಕಾರಿದ್ದಾರೆ.