ಬೆಂಗಳೂರು: ಮುಂದಿನ ವಿಧಾನ ಸಭಾ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಇದೆ. ಈಗಾಗಲೇ ಎಲ್ಲಾ ಪಕ್ಷದವರು ಚುನಾವಣಾ ಪ್ರಿಪರೇಷನ್ ಮಾಡಿಕೊಳ್ಳುತ್ತಿದ್ದಾರೆ. ಈ ಬೆನ್ನಲ್ಲೇ ಮಾಜಿ ಸಿಎಂ ಕುಮಾರಸ್ವಾಮಿ ನಮ್ಮನ್ನ ಬಿಟ್ಟು ಯಾರೂ ಏನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
2023 ರ ಚುನಾವಣೆಗೆ ನಮ್ಮ ಶ್ರಮ ಏನು ಅಂತ ಗೊತ್ತಾಗುತ್ತೆ ಎಂದು ನಿನ್ನೆ ಹೇಳಿದ್ದರು. ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ದೊರೆತ ಬೆನ್ನಲ್ಲೇ ಆ ಹೇಳಿಕೆಗೆ ಉತ್ತರಿಸಿರುವ ಕುಮಾರಸ್ವಾಮಿ, ಜೆಡಿಎಸ್ ಬಿಟ್ಟು ಯಾರು ಏನು ಮಾಡೋಕ್ ಆಗಲ್ಲ. ನಾನು ಯಾವುದೇ ರಾಷ್ಟ್ರೀಯ ಪಕ್ಷದ ಮನೆಗೆ ಹೋಗಿಲ್ಲ. ಮುಂದೆಯೂ ಹೋಗಲ್ಲ. ನಮ್ಮ ಮನೆಗೇನೆ ರಾಷ್ಟ್ರೀಯ ಪಕ್ಷದ ನಾಯಕರು ಬರ್ತಾರೆ ಎಂದಿದ್ದಾರೆ.
2023ಕ್ಕೆ ನಮ್ಮ ಗುರಿ ಏನಿದೆ ಅದನ್ನ ತಲುಪುತ್ತೇವೆ. ಇವರೆಲ್ಲಾ ಪ್ರಾದೇಶಿಕ ಪಕ್ಷದ ಮನೆಗೆ ಬರುವಂತ ರಾಷ್ಟ್ರೀಯ ನಾಯಕರು. ಬಿಜೆಪಿ ನಾಯಕರೇ ಜೆಡಿಎಸ್ ಗೆ ಬರುವಂತೆ ಈ ಮುಂಚೆ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ಯಾವತ್ತು ಅತಂತ್ರವಾಗಲ್ಲ ಎಂದಿದ್ದಾರೆ.