ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಮೇಲೆ ಮುನಿಸಿಕೊಂಡಂತೆ ಕಾಣುತ್ತಿದೆ. ತಬ್ಬಲಿ ನೀ ಆದೆಯಾ ಎಂಬಂತಾಗಿದೆ ನನ್ನ ಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ನಿನ್ನೆ ಬಿ ಕೆ ಹರಿಪ್ರಸಾದ್ ಅವರಿಗೆ ವಿಧಾನ ಪರಿಷತ್ ವಿಪಕ್ಷ ನಾಯಕನ ಜವಬ್ದಾರಿ ನೀಡಿದೆ. ಈ ಬಗ್ಗೆ ಮಾತನಾಡಿದ್ದು, ಎಐಸಿಸಿ ತೀರ್ಮಾನ ಸಂತೋಷಕರವಾಗಿದೆ. ಹರಿಪ್ರಸಾದ್, ಶಿವಕುಮಾರ್ ಒಳ್ಳೆಯ ಟೀಮ್. ವಿಚಾರಧಾರೆಗಳು ಒಂದೇ ಆಗಿರೋದ್ರಿಂದ ನೇಮಕ ಮಾಡಿದ್ದಾರೆ. ಇದು ಬಹಳ ಖುಷಿ ಕೊಟ್ಟಿದೆ.
ಆದ್ರೆ ನನ್ನ ಸ್ಥಿತಿ ತಬ್ಬಲಿ ನೀನಾದೆಯಾ ಎಂಬಂತಾಗಿದೆ. ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡ ಅಂಥ ನಾಯಕರನ್ನ ಬಿಟ್ಟು ಬಂದೆ. ರಾತ್ರಿಯಿಂದ ಸಾಕಷ್ಟು ಕರೆಗಳು ಬರ್ತೀವೆ. ಸಿದ್ದರಾಮಯ್ಯ ಅವರನ್ನು ಬಾದಾಮಿಗೆ ಕರೆದುಕೊಂಡು ಹೋಗಿ ನಾಮಿನೇಷನ್ ಮಾಡಿದ್ದೆ. ನನ್ನ ಹಿತೈಶಿಗಳ ಸಭೆ ಕರೆದು ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ನನಗೆ ಮುಗಿದ ಅಧ್ಯಾಯ ಎಂದಿದ್ದಾರೆ.