ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕನ ಸ್ಥಾನಕ್ಕೆ ನಿನ್ನೆ ಬಿಕೆ ಹರಿಪ್ರಸಾದ್ ಅವರನ್ನ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಈ ಬೆನ್ನಲ್ಲೇ ಹಿರಿಯ ನಾಯಕ ಸಿ ಎಂ ಇಬ್ರಾಹಿಂ ಅಸಮಾಧಾನ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ಸಿ ಎಂ ಇಬ್ರಾಹಿಂ, ನನಗೆ ಸ್ವಲ್ಪ ಸಾಲ ಇದೆ. ಸಾಲ ತೀರಿಸಿ 8-10 ದಿನದಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕುಮಾರಸ್ವಾಮಿ ಅವರು ಕರೆ ಮಾತನಾಡಿದ್ದಾರೆ. ದೇವೇಗೌಡರನ್ನ ಕೇಳಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ. ನನಗೆ ಅನ್ಯಾಯ ಆಗಿದ್ದಕ್ಕೆ ಸಿದ್ದರಾಮಯ್ಯ ಅವರು ಮಾತನಾಡಬೇಕಿದೆ.
ಎಐಸಿಸಿ ಸಂಕ್ರಾಂತಿ ಹಬ್ಬಕ್ಕೆ ಒಳ್ಳೆಯ ಗಿಫ್ಟ್ ಅನ್ನೇ ನೀಡಿದೆ. ಸೋನಿಯಾ ಗಾಂಧಿ ಅವರು ನನ್ನ ಮೇಲಿದ್ದ ಭಾರ ಕಡಿಮೆ ಮಾಡಿದ್ದಾರೆ. ಈಗ ನಾನು ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು. ಮುಂದಿನ ಚುನಾವಣೆಯಲ್ಲಿ ಎಲ್ಲವೂ ಗೊತ್ತಾಗುತ್ತೆ. ಕಾಂಗ್ರೆಸ್ ಭ್ರಮೆಯಲ್ಲೇ ಇರಲಿ, ಕಾಂಗ್ರೆಸ್ ಎಚ್ಚೆತ್ತುಕೊಳ್ಳೋದು ಬೇಡ.
ನಾನೊಬ್ಬ ವ್ಯಕ್ತಿಯಲ್ಲ ಶಕ್ತಿ. ಸಿದ್ದರಾಮಯ್ಯ ಮೇಲೆ ನನಗೆ ಯವುದೇ ಬೇಸರವಿಲ್ಲ. ಈಗ ನಾವು ಅವರು ಎದುರಾಗಬೇಕಾಗುತ್ತಷ್ಟೇ. ಚುನಾವಣೆಯಲ್ಲಿ ಎದುರಾಗಬೇಕಲ್ಲ ಅನ್ನೋದೆ ಬೇಸರ. ಸಿದ್ದರಾಮಯ್ಯ ಅವರನ್ನು ಭೇಟಿಯಾಗುವುದಿಲ್ಲ. ಮುಂದಿನ ದಿನದಲ್ಲಿ ಭೇಟಿಯಾದರೂ ಆಗಬಹುದು. ಹಾಗಂತ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರಲ್ಲ. ಯಾಕಂದ್ರೆ ನಮ್ಮದು ಬಸವ ತತ್ವ ಅವರದ್ದು ಕೇಶವಾ ಕೃಪಾ ಎಂದು ಬಿಜೆಪಿ ಸೇರುವ ವಿಚಾರಕ್ಕೆ ತೆರೆ ಎಳೆದಿದ್ದಾರೆ.