ಧಾರವಾಡ: ಮೇಕೆದಾಟು ಯೋಜನೆಗಾಗಿ ಆಗ್ರಹಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆಯನ್ನು ಶುರು ಮಾಡಿದ್ರು. ಆದ್ರೂ ಕೊರೊನಾ ರೂಲ್ಸ್ ನಿಂದಾಗಿ ಪಾದಯಾತ್ರೆಯನ್ನ ಸ್ಥಗಿತಗೊಳಿಸಲಾಗಿದೆ. ಇದೀಗ ಮೇಕೆದಾಟು ಯೋಜನೆಗಾಗಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಸರ್ವಪಕ್ಷ ಸಭೆ ಕರೆದಿದ್ದಾರೆ.
ಈ ಸಬಂಧ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದು, ಸರ್ವಪಕ್ಷ ಸಭೆಗೆ ಹೋಗ್ಬೇಕೋ ಬೇಡವೋ ಎಂಬುದನ್ನ ನೋಟೀಸ್ ಬಂದ್ಮೇಲೆ ನಿರ್ಧಾರ ಮಾಡ್ತೇವೆ. ಮೇಕೆದಾಟು ಯೋಜನೆಯನ್ನ ಆರಂಭ ಮಾಡಿದ್ದೆ ನಾವೂ. ಡಿಪಿಆರ್ ಮಾಡಿದ್ದ ಸಿಪಿಸಿ ಕೊಟ್ಟಿದ್ದು ನಮ್ಮ ಕಾಲದಲ್ಲೆ.
ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಬಿಜೆಪಿ ಸರ್ಕಾರವೇ ಇದೆ. ಇವರು ಅದನ್ನ ಡಬಲ್ ಇಂಜಿನ್ ಸರ್ಕಾರ ಅಂತಾರೆ. ಆದ್ರೂ ಅನಗತ್ಯವಾಗಿ ವಿಳಂಬ ಮಾಡ್ತಾರೆ. ಇವತ್ತು ಪೆಂಡಿಂಗ್ ಇರುವುದು, ಅರಣ್ಯ ಹಾಗೂ ಪರಿಸರದ ಅನುಮತಿ ಸಿಗದೆ ಇರುವುದಕ್ಕೆ. ಆದ್ರೆ ಸರ್ಕಾರ ಅದನ್ನು ಮಾಡ್ತಿಲ್ಲ. ಪರಿಸರ ಕ್ಲೆರೆನ್ಸ್ ಕೊಟ್ಟರೆ ಕೆಲಸ ಆರಂಭ ಮಾಡಬಹುದು. ಇವರು ಅಲ್ಲಿ ಗಟ್ಟಿಯಾಗಿ ಕೇಳಿ ತಗೊಂಡಿಲ್ಲ, ಅವರು ಕೊಟ್ಟಿಲ್ಲ. ಕೇಂದ್ರದವರು ರಾಜಕೀಯ ಮಾಡುತ್ತಿದ್ದಾರೆ. ತಮಿಳುನಾಡಿನಲ್ಲಿ ಅವರ ಶಕ್ತಿ ವೃದ್ಧಿ ಮಾಡಿಕೊಳ್ಳಲು ಕೊಡ್ತಾ ಇಲ್ಲ. ಇವರು ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.