Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಡಿ : ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ಜ. 21) :  ಮೂಲ ಭೂತ ಸೌಕರ್ಯದ ಕೊರತೆ ಇದೆ ಎಂದು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಬೇಡಿ ಮುಂದಿನ ವರ್ಷದಿಂದಲೇ ವಿವಿಧ ರೀತಿಯ ಕೋರ್ಸ್‌ಗಳನ್ನು ಪ್ರಾರಂಭ ಮಾಡಿ ಅದಕ್ಕೆ ಬೇಕಾದ ಸೌಕರ್ಯವನ್ನು ಕಲ್ಪಿಸಿಕೊಡುವುದಾಗಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಭರವಸೆ ನೀಡಿದರು.

ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕಾಲೇಜು ಅಭಿವೃದ್ದಿ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ವರ್ಷದಿಂದ ವರ್ಷಕ್ಕೆ ಕಾಲೇಜಿಗೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಈಗ ಇರುವ ಕೋರ್ಸ್ ಜೊತೆಯಲ್ಲಿ ಅಗತ್ಯ ಇರುವ ಇತರೆ ಕೋರ್ಸ್‍ಗಳನ್ನು ಸಹಾ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಿ ಇವುಗಳನ್ನು ಪ್ರಾರಂಭ ಮಾಡಲು ಸೌಕರ್ಯ ಇಲ್ಲ ಎಂದು ಸುಮ್ಮನಾಗಬೇಡಿ ಅದಕ್ಕೆ ಬೇಕಾದ ಸೌಕರ್ಯವನ್ನು ಒದಗಿಸಿ ಕೊಡುವುದಾಗಿ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.

ಖಾಸಗಿ ಕಾಲೇಜಿನವರು ಹೆಚ್ಚಿನ ಹಣವನ್ನು ಪಡೆಯುವುದರ ಮೂಲಕ ವಿವಿಧ ರೀತಿಯ ಕೋರ್ಸ್‍ಗಳನ್ನು  ನೀಡುತ್ತಿದ್ದಾರೆ ಇದರಿಂದ ಬಡ ವಿದ್ಯಾರ್ಥಿಗಳಿಗೆ, ಕಲಿಯ ಬೇಕೇಂಬುವವರಿಗೆ ಅನ್ಯಾಯವಾಗಲಿದೆ. ಇದರಿಂದ ನಮ್ಮ ಸರ್ಕಾರಿ ಕಾಲೇಜಿನಲ್ಲಿ ಈಗಿನ ದಿನಮಾನಕ್ಕೆ ಅಗತ್ಯ ಇರುವ ಕೋರ್ಸ್‍ಗಳನ್ನು ಪ್ರಾರಂಭ ಮಾಡುವಂತೆ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ಕಾಲೇಜಿನಲ್ಲಿ ಉಪನ್ಯಾಸಕರ ಕೂರತೆ ಇದೆ ಎಂದು ಪ್ರಾಂಶುಪಾಲರು ಸಭೆಯ ಗಮನಕ್ಕೆ ತಂದಾಗ ಇದರ ಬಗ್ಗೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುವುದಾಗಿ ತಿಳಿಸಿ ನಮ್ಮ ಕಾಲೇಜಿಗೆ ಅಗತ್ಯವಾಗಿ ಬೇಕಾಗಿರುವ ಉಪನ್ಯಾಸಕರ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ತಿಳಿಸಿದ ಶಾಸಕರು, ಕಾಲೇಜಿನಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡಿ ಕ್ರೀಡಾ ನಿಧಿಯನ್ನು ಉಪಯೋಗ ಮಾಡಿ ಬೇರೆ ಕಡೆಗೆ ಕ್ರೀಡೆಗೆ ಹೋಗುವವರಿಗೆ ಅಗತ್ಯವಾದ ಸಹಾಯವನ್ನು ಮಾಡುವಂತೆ ಶಾಸಕರು ಸಲಹೆ ನೀಡಿದರು.

ಈಗ ಕಾಲೇಜು ಬೇರೆ ಬೇರೆ ಕಡೆಯಲ್ಲಿ ನಡೆಯುತ್ತಿದೆ. ಕಾಲೇಜು ನಿರ್ಮಾಣಕ್ಕಾಗಿ ನಗರದ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ವಿಜ್ಞಾನ ಕಾಲೇಜಿನ ಮಧ್ಯದಲ್ಲಿ ಸುಮಾರು 3 ಎಕರೆ ಜಾಗವನ್ನು ಸರ್ಕಾರದವತಿಯಿಂದ ಕೂಡಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕ್ರಿಯೆ ಸಹಾ ಮುಗಿದಿದ್ದು ಕಾಲೇಜಿನ ಹಸರಿಗೆ ಬಂದಿದೆ. ಮುಂದಿನ ದಿನದಲ್ಲಿ ಉನ್ನತ ಸಚಿವರ ಜೊತೆ ಮಾತನಾಡಿದ್ದೇನೆ ಕಾಲೇಜು ನಿರ್ಮಾಣಕ್ಕೆ 25 ಕೋಟಿ ರೂ.ಗಳನ್ನು ನೀಡಲು ಸಮ್ಮತಿಸಿದ್ದು ಮುಂದಿನ ಆಯವ್ಯಯದಲ್ಲಿ ನೀಡುವ ಭರವಸೆಯನ್ನು ನೀಡಿದ್ದಾರೆ ಎಂದ ಶಾಸಕರು, ಈಗ ಕರೋನಾ ಇದೆ ಇದು ಮುಗಿದ ಮೇಲೆ ಕಾಲೇಜಿನಲ್ಲಿ ಉತ್ತಮವಾದ ಕಾರ್ಯಕ್ರಮವನ್ನು ಮಾಡುವಂತೆ ಪ್ರಾಂಶುಪಾಲರಿಗೆ ಸೂಚಿಸಿದರು.

ಕಾಲೇಜಿಗೆ ಸಾವಿತ್ರಿ ಪುಲೆಯವರ ಹೆಸರನ್ನು ಇಡುವಂತೆ ವಿದ್ಯಾರ್ಥಿನಿ ಸಲಹೆಯಂತೆ ಇಂದು ನಡೆದ ಸಭೆಯಲ್ಲಿ ತೀರ್ಮಾನ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವಂತೆ ಶಾಸಕರು ಸೂಚಿಸಿ, ಕಾಲೇಜಿನ ಶುಚಿತ್ವಕ್ಕೆ ಮತೋರ್ವರನ್ನು ನೇಮಿಸಿಕೊಳ್ಳುವಂತೆ ಸೂಚಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಅನುಕೂಲವಾಗುವಂತೆ ನಗರದ ಗ್ರಂಥಾಲಯದಿಂದ ವಿವಿಧ ರೀತಿಯ ಪುಸ್ತಕಗಳನ್ನು ಪಡೆಯಿರಿ ಹಾಗೂ ಕಾಲೇಜಿನ ನಿಧಿಯಿಂದಲೂ ಸಹಾ ಅಗತ್ಯವಾದ ಪುಸ್ತಕಗಳನ್ನು ಖರೀದಿಸುವಂತೆ ತಿಳಿಸಿ ಕಲಾ, ವಿಜ್ಞಾನ ಮತ್ತು ಮಹಿಳಾ ಕಾಲೇಜು ನಡೆಯುತ್ತಿರುವ ಈ ಆವರಣದಲ್ಲಿ ಮೂರು ಕಾಲೇಜಿಗೆ ಹೊಂದಿಕೊಡಂತೆ ಶುದ್ದ ನೀರಿನ ಘಟಕವನ್ನು ಸ್ಥಾಪಿಸಲಾಗುವುದು ಇದರ ಸದುಪಯೋಗವನ್ನು ಪಡೆಯುವಂತೆ ಹೇಳಿದರು.

ಪ್ರಾಂಶುಪಾಲರಾದ ಡಾ.ಚನ್ನಕೇಶವ ಮಾತನಾಡಿ, 2013-14ರಲ್ಲಿ ಪ್ರಾರಂಭವಾದ ಕಾಲೇಜು ಆರಂಭದಲ್ಲಿ 60 ವಿದ್ಯಾರ್ಥಿಗಳಿದ್ದೂ ಈ ಸಾಲಿನಲ್ಲಿ 742 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇದರಲ್ಲಿ ಎಸ್.ಸಿ.,ಎಸ್.ಟಿ. ವಿವಿಧ ಪ್ರವರ್ಗಗಳ ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮಾಡುತ್ತಿದ್ದಾರೆ. ಕಾಲೇಜಿನಲ್ಲಿಯೂ ಸಹಾ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ. ದಾವಣಗೆರೆ ವಿವಿ ವ್ಯಾಪ್ತಿಗೆ ಬರುವ ನಮ್ಮ ಕಾಲೇಜು ಕಳೆದ ಬಾರಿ 10ನೇ ರ್ಯಾಂಕ್ ಪಡೆದಿದ್ದರೆ ಈ ಬಾರಿ 9ನೇ ರ್ಯಾಂಕ್ ಪಡೆದಿದೆ. ಈ ಭಾರಿಯೂ ರ್ಯಾಂಕ್ ಪಡೆಯುವಲ್ಲಿ ನಮ್ಮ ವಿದ್ಯಾರ್ಥಿನಿಯರು ಬಹಳಷ್ಟು ಶ್ರಮ ಹಾಕುತ್ತಿದ್ದಾರೆ. ಈ ಭಾರಿಯೂ ರ್ಯಾಂಕ್ ಬರುವ ನೀರಿಕ್ಷೆ ಇದೆ ಎಂದರು.

ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ವಿವಿಧ ರೀತಿಯ ಸ್ಕಾಲರ್‍ಶಿಪ್‍ನ್ನು ಕೂಡಿಸಲಾಗಿದೆ. ಎಲ್ಲರಿಗೂ ಹಾಸ್ಟಲ್ ವ್ಯವಸ್ಥೆ ಮಾಡಲಾಗಿದ್ದು 2021-22ನೇ ಸಾಲಿನಲ್ಲಿ 330 ವಿದ್ಯಾರ್ಥಿನಿಯರಿಗೆ ಟ್ಯಾಬ್ ಗಳನ್ನು ಸರ್ಕಾರದವತಿಯಿಂದ ಕೂಡಿಸಲಾಗಿದೆ.
ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇದೆ ಅದನ್ನು ನಿವಾರಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ 2021-2022ರ ಜಮಾ-ಖರ್ಚಿನ ವಿವರವನ್ನು ಸಭೆಯ ಗಮನಕ್ಕೆ ತಂದರು.

ಕಾಲೇಜು ಅಭಿವೃದ್ದಿ ಸಮಿತಿಯ ವಿದ್ಯಾರ್ಥಿನಿಯರ ಪ್ರತಿನಿಧಿಗಳಾದ ಕು.ಸುನೀತಾ ಮತ್ತು ಕು. ಸ್ಪೂರ್ತಿರವರು, ಕಾಲೇಜಿಗೆ ಸಾವಿತ್ರಿಪುಲೆಯ ಹೆಸರನ್ನು ಇಡಿ, ಉನ್ನತ ಶಿಕ್ಷಣಕ್ಕೆ ಮಹತ್ವ ನೀಡುವುದರ ಮೂಲಕ ಕರ್ನಾಟಕವನ್ನು ಶಿಕ್ಷಣದಲ್ಲಿ ಪ್ರಥಮ ಸ್ಥಾನ ಸಿಗುವಂತೆ ಮಾಡಬೇಕಿದೆ. ಸ್ಪರ್ಧಾತ್ಮಕ ಪುಸ್ತಕಗಳನ್ನು ನೀಡಿ ಅದಕ್ಕೆ ಒರ್ವ ಉಪನ್ಯಾಸಕರನ್ನು ನೇಮಕ ಮಾಡಿ, ಕಾಲೇಜಿಗೆ ಸ್ವಂತವಾಧ ಕಟ್ಟಡವನ್ನು ಶೀಘ್ರವಾಗಿ ನಿರ್ಮಾಣ ಮಾಡುವಂತೆ ಶಾಸಕ ತಿಪ್ಪಾರೆಡ್ಡಿಯವರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಕಾಲೇಜಿ ಅಭಿವೃದ್ದಿ ಸಮಿತಿಯ ಸದಸ್ಯರಾದ ನಿವೃತ ಪ್ರಾಂಶುಪಾಲರಾದ ಹೆಚ್.ಲಿಂಗಪ್ಪ, ಪ್ರೊ.ಪರಮಶ್ವರಪ್ಪ, ಎಂ.ಎನ್.ನವೀನ್, ಕೆ.ಬಿ.ಸುರೇಶ್, ಶ್ರೀನಿವಾಸ್, ಹರೀಶ್, ಮಂಜಣ್ಣ, ಪತ್ರಾಂಕಿತ ವ್ಯವಸ್ಥಾಪಕರಾದ ಬಸಣ್ಣಗೌಡ ಭಾಗವಹಿಸಿದ್ದರು.

ಕು.ನಂದಿನಿ ಪ್ರಾರ್ಥಿಸಿದರೆ, ಕೋಮಲ ಮತ್ತು ಸಂಗಡಿಗರು ನಾಡಗೀತೆ ಗಾಯನ ಮಾಡಿದರು. ಪ್ರೊ.ಬಸವರಾಜ್ ಸ್ವಾಗತಿಸಿದರು. ಡಿ.ಓ ಸಿದ್ದಪ್ಪ ವಂದಿಸಿದರು. ಬಿ.ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಭೋಧಕ-ಭೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!