ಬೆಂಗಳೂರು: ಸದ್ಯ ಕೊರೊನಾ ಕೇಸ್ ಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದೆ. ಸದ್ಯ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಕೊರೊನಾ ಟಫ್ ರೂಲ್ಸ್ ಬೇಡ ಅಂತ ಹಲವು ವ್ಯಾಪಾರಿಗಳು ಮನವಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಸಚಿವ ಸುಧಾಕರ್ ಕೂಡ ಜನರಿಗೆ ಕಷ್ಟ ಕೊಡೋಕೆ ಇಷ್ಟ ಇಲ್ಲ ಎಂದಿದ್ದಾರೆ.
ಈ ಸಂಬಂಧ ಮಾತನಾಡಿದ ಸಚಿವ ಸುಧಾಕರ್, ನಾಳೆ ಈ ಸಂಬಂಧ ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಕೊರೊನಾ ಟಫ್ ರೂಲ್ಸ್ ಬೇಕಾ ಬೇಡ್ವಾ ಎಂಬುದು ನಾಳೆ ನಿರ್ಧಾರವಾಗಲಿದೆ. ಜನರಿಗೆ ತೊಂದರೆ ಕೊಡೋದಕ್ಕೆ ನಮ್ಮ ಸರ್ಕಾರಕ್ಕೂ ಇಷ್ಟವಿಲ್ಲ. ವೈಜ್ಞಾನಿಕ ನೆಲೆಗಟ್ಟಿನಲ್ಲೇ ನಮ್ಮ ಸರ್ಕಾರ ಕ್ರಮ ತೆಗೆದುಕೊಳ್ಳುತ್ತೆ.
ರಾಜ್ಯದಲ್ಲಿ ದಿನಕ್ಕೆ 1.20 ಲಕ್ಷ ಕೇಸ್ ಗಳು ಬರುತ್ತವೆ ಎಂದು ತಜ್ಞರು ಹೇಳಿದ್ದಾರೆ. ಈಗಾಗಲೇ ದಿನಕ್ಕೆ 40 ಸಾವಿರ ಕೇಸ್ ದಾಟಿದೆ. ತಜ್ಞರ ಸಲಹೆಯನ್ನು ಪಡೆದು ನಾಳೆ ನಡೆಯುವ ಸಭೆಯಲ್ಲಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.