Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಸಿವಿನಿಂದ ಸಾವನ್ನಪ್ಪಿರುವವರ ವರದಿ ಬೇಕು : ಸರ್ಕಾರಕ್ಕೆ ಸುಪ್ರೀಂ ತರಾಟೆ..!

Facebook
Twitter
Telegram
WhatsApp

ನವದೆಹಲಿ: ದೇಶವನ್ನ ಹಸಿವು ಮುಕ್ತ ಮಾಡಬೇಕು ಅನ್ನೋದೆ ಎಲ್ಲರ ಆಸೆ. ಆದ್ರೆ ಅದು ಸಾಧ್ಯವಾಗಿದೆಯಾ..? ಸುಪ್ರೀಂ ಕೋರ್ಟ್ ಗೆ ಕೂಡ ಈ ಅನುಮಾನ ದಟ್ಟವಾಗಿದೆ. ಹೀಗಾಗಿಯೇ ಈ ಬಗ್ಗೆ ಸರ್ಕಾರಕ್ಕೆ ವರದಿ ಕೇಳಿದೆ.

2015-16 ರಲ್ಲಿ ಹಸಿವಿನಿಂದ ಸಾವನ್ನಪ್ಪಿರುವವರ ವರದಿಯನ್ನು ನೀಡದಿರುವ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಸಿಜೆಐ ಎನ್ ವಿ ರಮಣ ಅವರ ನೇತೃತ್ವದಲ್ಲಿ, ದೇಶದಲ್ಲಿ ಹಸಿವಿನಿಂದ ಸಾವನ್ನಪ್ಪಿದವರ ಇತ್ತೀಚಿನ ದತ್ತಾಂಶವನ್ನ ಒದಗಿಸಿ ಎಂದು ಕೇಳಿದೆ.

ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿಲ್ಲ ಎಂದು ನೀವೂ ಹೇಳುತ್ತೀರಾ..? ನಾವೂ ಆ ಹೇಳಿಕೆಯನ್ನು ನಂಬಬಹುದೇ..? ಹಸಿವಿನಿಂದ ಸಾವನ್ನಪ್ಪಿರುವ ವರದಿಯನ್ನ ರಾಜ್ಯ ಸರ್ಕಾರಗಳು ಕೂಡ ಮಾಡಿಲ್ಲ. ಜನರು ಹಸಿವಿನಿಂದ ಬಳಲಬಾರದು, ಸಾಯಬಾರದು ಎಂಬುದು ನಮ್ಮ ಉದ್ದೇಶ. ನೋಡಲ್ ಯೋಜನೆಯನ್ನು ರೂಪಿಸಲು ನೀವೂ ನಿಮ್ಮ ಅಧಿಕಾರಿಗಳೊಂದಿಗೆ ಚರ್ಚಿಸಬೇಕು.‌ ಪರಿಹಾರದ ಮಾರ್ಗವನ್ನ ಗುರುತಿಸಬೇಕಾಗಿದೆ ಎಂದು ಕೋರ್ಟ್ ಸಲಹೆ ನೀಡಿದೆ.

ವಿಚಾರಣೆಯ ಬಳಿಕ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಎರಡು ವಾರಗಳಿಗೆ ಮುಂದೂಡಿಕೆ ಮಾಡಿದೆ. ಅಲ್ಲಿಯವರೆಗೂ ಅಪೌಷ್ಟಿಕತೆ, ಹಸಿವು ಮತ್ತು ಇತರ ವಿಷಯಗಳು ಕುರಿತು ರಾಜ್ಯಗಳು ಹೆಚ್ಚುವರಿ ಅಫಿಡವಿಟ್‌ಗಳನ್ನು ಸಲ್ಲಿಸಬಹುದು ಎಂದು ತಿಳಿಸಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್ ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 04  : ಕೋಟೆ ರಸ್ತೆಯಲ್ಲಿರುವ ಪಾದಗುಡಿಯಲ್ಲಿ ದುರ್ಗದ ಅದಿ ದೇವತೆ ಏಕನಾಥೇಶ್ವರಿ ಅಮ್ಮನ ಸಿಡಿ ಮಹೋತ್ಸವ

ಚಾಕಲೇಟ್ ಕೊಡಿಸಿ ಅನ್ಯಕೋಮಿನ ಯುವಕನಿಂದ ದಲಿತ ಬಾಲಕಿ ಮೇಲೆ ಅತ್ಯಾಚಾರ: ಹಿರಿಯೂರಿನಲ್ಲಿ ತಡವಾಗಿ ಬೆಳಕಿಗೆ ಬಂದ ಪ್ರಕರಣ..!

ಹಿರಿಯೂರು : ತಂಗಿಯ ಸ್ನೇಹಿತೆಗೆ ಚಾಕಲೇಟ್, ಬಿಸ್ಕೇಟ್ ಕೊಡಿಸಿ, ಅನ್ಯಕೋಮಿನ ಯುವಕ ದಲಿತ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ. ಈ ಸಂಬಂಧ ಅನ್ಯಕೋಮಿನ ಯುವಕನ ವಿರುದ್ಧ ಗ್ರಾಮಾಂತರ ಪೋಲಿಸ್

error: Content is protected !!