ಲಂಡನ್ : ಇನ್ಫೋಸಿಸ್ ಫೌಂಡೇಶನ್ ಸ್ಥಾಪಿಸಿದ ದಂಪತಿ ನಾರಾಯಣ ಮೂರ್ತಿ ಹಾಗೂ ಸುಧಾಮೂರ್ತಿ ಅವರ ಅಳಿಯ ಮುಂದಿನ ದಿನಗಳಲ್ಲಿ ಬ್ರಿಟನ್ ಪ್ರಧಾನಿಯಾಗ್ತಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ.
ಸದ್ಯ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆ ಇದೆ. ಯಾಕಂದ್ರೆ ಕೋವಿಡ್ ಲಾಕ್ಡೌನ್ ಇದ್ದಂತ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿ ಮದ್ಯದ ಪಾರ್ಟಿ ಮಾಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಸ್ವ ಪಕ್ಷದಲ್ಲೇ ವಿರೋಧ ವ್ಯಕ್ತವಾಗ್ತಿದೆ.
2020 ರಿಂದಲೂ ಈ ವಿವಾದ ಎದುರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ 2021ರಲ್ಲಿ ರಾಜಕುಮಾರ ಪಿಲಿಪ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಮುನ್ನ ಮದ್ಯದ ಪಾರ್ಟಿ ಮಾಡಿದ್ದರು ಎಂಬ ಆರೋಪ ಕೆರಳಿ ಬಂದಿದೆ. ಹೀಗಾಗಿ ಪ್ರಧಾನಿ ಬೋರಿಸ್ ಗೆ ಅಧಿಕಾರದಿಂದ ಕೆಳಗಿಳಿಯುವಂತೆ ಹಲವು ಕಡೆಗಳಿಂದ ಒತ್ತಡ ಕೇಳಿ ಬಂದಿದೆ.
ಒಂದು ವೇಳೆ ಪ್ರಧಾನಿ ಹುದ್ದೆಯಿಂದ ಬೋರಿಸ್ ಕೆಳಗಿಳಿದರೆ, ಆ ಸ್ಥಾನಕ್ಕೆ ರಿಷಿ ಸುನಾಕ್ ಹೆಸರು ಬಹಳ ಜೋರಾಗಿ ಕೇಳಿ ಬರುತ್ತಿದೆ. ಈ ರಿಷಿ ಸುನಾಕ್ ಸುಧಾಮೂರ್ತಿ ಅವರ ಅಳಿಯ. ಅಕ್ಷತಾ ಮೂರ್ತಿಯವರ ಪತಿ. ಸದ್ಯ ಇವರು ಬ್ರಿಟನ್‍ನ ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಪ್ರಭಾವಿ ಮುಖಂಡರಾಗಿದ್ದಾರೆ. ಬಹಳ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.