ಆಂಧ್ರಪ್ರದೇಶ: ನಿನ್ನೆ ಆಂಧ್ರದ ಜನರಿಗೆ ಕರಾಳ ದಿನ ಎಂದೇ ಹೇಳಬಹುದು. ಭಾಷಣ ಕೇಳಲೆಂದು ರ್ಯಾಲಿಯಲ್ಲಿ ಭಾಗಿಯಾಗಿದ್ದ ಎಂಟು ಜನ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಜಾಸ್ತಿ ಇದೆ. ರ್ಯಾಲಿಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ನೆಲ್ಲೂರು ಜಿಲ್ಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ರ್ಯಾಲಿ ನಡೆಸುತ್ತಿದ್ದರು. ಈ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನರು ಕಾಲ್ತುಳಿತಕ್ಕೊಳಗಾಗಿದ್ದಾರೆ. ಅದರಲ್ಲಿ ಎಂಟು ಜನ ಸಾವನ್ನಪ್ಪಿದ್ದಾರೆ. ಇನ್ನು ಮೃತರ ಕುಟುಂಬಕ್ಕೆ ಚಂದ್ರಬಾಬು ನಾಯ್ಡು ಸಾಂತ್ವಾನ ಹೇಳಿದ್ದು, ಹತ್ತು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕಂದಕೂರಿನಲ್ಲಿ ನಿನ್ನೆ ಬೃಹತ್ ರ್ಯಾಲಿ ನಡೆಸಲಾಗಿತ್ತು. ನಮ್ಮ ಭಾಗ್ಯ ಎಂಬ ಹೆಸರಿನಲ್ಲಿ ರ್ಯಾಲಿ ನಡೆಸಲಾಗುತ್ತಿತ್ತು. ಸಾವಿರಾರು ಜನ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಇನ್ನೇನು ಮಾತನಾಡಬೇಕಿತ್ತು. ಅಷ್ಟರಲ್ಲಿ ಕಾಲ್ತುಳಿತ ಸಂಭವಿಸಿದೆ.