ನವದೆಹಲಿ: ಒಂದು ಕಡೆ ಕೊರೊನಾ ಭೀತಿ, ಮತ್ತೊಂದು ಕಡೆ ಒಮಿಕ್ರಾನ್ ಹೆಚ್ಚಳ. ಕಳೆದ ಎರಡು ವರ್ಷಗಳಿಂದ ಜನ ನೆಮ್ಮದಿಯಿಂದ ಇರೋದಕ್ಕೆ ಈ ವೈರಸ್ ಬಿಡ್ತಾನೆ ಇಲ್ಲ ಅನ್ಸುತ್ತೆ. ರೂಪಾಂತರಿ ವೈರಸ್ ನಿಂದಲೂ ಜನ ರೋಸೆದ್ದು ಹೋಗಿದ್ದಾರೆ. ಇದೀಗ ಮೂರನೆ ಅಲೆಯ ಕೊರೊನಾ ವೈರಸ್ ಜೊತೆ ಜೊತೆಗೆ ಒಮಿಕ್ರಾನ್ ಕೂಡ ಹೆಚ್ಚಳವಾಗುತ್ತಿದ್ದು, ಜನರಿಗೆ ಆತಂಕ ಸೃಷ್ಟಿಯಾಗಿದೆ.
ಒಮಿಕ್ರಾನ್ ದೇಶಕ್ಕೆ ಬಾರದಿರುವಂತೆ ಆರಂಭದಲ್ಲೇ ಎಚ್ಚರಿಕೆ ವಹಿಸಿದ್ರು ಕೂಡ ಯಾವುದೇ ಪ್ರಯೋಜನವಾದಂತೆ ಕಂಡಿಲ್ಲ. ಅದನ್ನ ಮೀರಿಯೂ ಒಮಿಕ್ರಾನ್ ಈಗ ಎಲ್ಲೆಡೆ ಜೋರಾಗಿ ಹರಡಿದೆ. ದೇಶಾದ್ಯಂತ ಕಳೆದ 24 ಗಂಟೆಯಲ್ಲಿ 37,379 ಜನರಿಗೆ ಕೊರೊನಾ ಸೋಂಕು ಹರಡಿದ್ರೆ, 1892 ಜನರಲ್ಲಿ ಓಮಿಕ್ರಾನ್ ಕಾಣಿಸಿಕೊಂಡಿದೆ.
ಮಹಾರಾಷ್ಟ್ರ, ದೆಹಲಿ, ಕೇರಳ, ರಾಜಸ್ಥಾನ, ಗುಜರಾತ್, ತಮಿಳುನಾಡಿನಲ್ಲಿ ಹೆಚ್ಚು ಸೋಂಕಿತರ ಪ್ರಮಾಣ ಕಂಡು ಬರ್ತಿದೆ. ಹೀಗಾಗಿ ಈಗಾಗಲೇ ಈ ಜಿಲ್ಲೆಗಳಲ್ಲಿ ಕಠಿಣ ರೂಲ್ಸ್ ಜಾರಿ ಮಾಡಲಾಗಿದೆ. ಇದೀಗ ವೈರಸ್ ನಿಯಂತ್ರಣಕ್ಕೆ ಸರ್ಕಾರ ಕಠಿಣ ನಿಯಮ ಜಾರಿಮಾಡುವ ಸಾಧ್ಯತೆ ಇದೆ. ಸದ್ಯ ನೈಟ್ ಕರ್ಫ್ಯೂ ಜಾರಿಯಲ್ಲಿದೆ.