ಮನುಷ್ಯನ ಗುಣ, ಋಣ ಏನೆಂಬುದು ಆತ ಸತ್ತಾಗ ತಿಳಿಯುತ್ತೆ ಅಂತಾರೆ. ಅದಕ್ಕೆ ಕಾರಣ ಅವನು ಸತ್ತಾಗ ಸೇರುವ ಜನ. ಆದ್ರೆ ಈಗ ದೇಶದ ಮೂಲೆಮೂಲೆಯಲ್ಲೂ ಕೊರೊನಾ ಸೋಂಕು ಹೆಚ್ಚಳವಾವುತ್ತಿದೆ. ಏನೆ ಸಂಪಾದಿಸಿದ್ರು, 100 ಜನ ಸೇರುವ ಹಾಗಿಲ್ಲ.
ಆದ್ರೆ ಅಲ್ಲೊಂದು ಹಳ್ಳಿಯಲ್ಲಿ ಬೇರೆಯದ್ದೇ ದೃಶ್ಯ ಕಂಡು ಬಂದಿದೆ. ಕೋತಿ ಸಾವಿಗೇನೆ ಸಾವಿರಾರು ಜನ ಸೇರಿದ್ದಾರೆ. ಈ ಘಟನೆ ನಡೆದಿರೋದು ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ. ಆದ್ರೆ ಕೊರೊನಾ ಹೆಚ್ಚಳವಾಗುತ್ತಿರುವ ಹಿನ್ನೆಲೆ ನಿಯಮಗಳು ಜಾರಿಯಲ್ಲಿವೆ. ಹೀಗಾಗಿ ಕೊರೊನಾ ಪ್ರೋಟೋಕಾಲ್ ಉಲ್ಲಂಘಿಸಿದ್ದಕ್ಕೆ ಇಬ್ಬರನ್ನ ಬಂಧಿಸಲಾಗಿದೆ.
ಮೃತ ಕೋತಿ ಸಾಕು ಪ್ರಾಣಿ ಏನು ಆಗಿರಲಿಲ್ಲ. ಆದ್ರೆ ಆಗಾಗ ರಾಜ್ ಘಡ್ ಜಿಲ್ಲೆಯ ದಲುಪುರ ಗ್ರಾಮಕ್ಕೆ ಬರ್ತಾ ಇತ್ತು. ಇದೇ ಪ್ರೀತಿ ಇಡೀ ಗ್ರಾಮಸ್ಥರಿಗೆ ಇತ್ತು. ಕೋತಿ ಬಂದಾಗೆಲ್ಲಾ ತಿನ್ನೋದಕ್ಕೆ ಏನಾದರೂ ನೀಡುತ್ತಿದ್ದರು. ಹೀಗಾಗಿ ಕೋತಿ ಸತ್ತ ಬಳಿಕ ಇಡೀ ಗ್ರಾಮಸ್ಥರು ಶಾಸ್ತ್ರೋಕ್ತವಾಗಿ ಕೋತಿಯ ಅಂತ್ಯ ಸಂಸ್ಕಾರ ಮಾಡಿದ್ದಾರೆ.
ಕೋತಿಯ ಶವವನ್ನು ಮೆರವಣಿಗೆಯ ಮೂಲಕ ತೆಗೆದುಕೊಂಡು ಹೋಗಲಾಗಿದೆ. ಹಾಗೇ ಗ್ರಾಮದ ಯುವಕನೊಬ್ಬ ಕೋತಿ ಸತ್ತಿದ್ದಕ್ಕೆ ತಲೆ ಬೋಳಿಸಿಕೊಂಡು ವಿಧಿವಿಧಾನದ ಮೂಲಕ ಕೋತಿಯ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ. ಅಂತ್ಯಸಂಸ್ಕಾರದ ಬಳಿಕ ಅದರ ತಿಥಿ ಮಾಡಿದ್ದಾರೆ. ಅದರಲ್ಲಿ 1,500 ಜನ ಸೇರಿ ಕೊರೊನಾ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ, ಇಬ್ಬರನ್ನು ಬಂಧಿಸಲಾಗಿದೆ.