ಮುಂಬೈ: ಸಲ್ಮಾನ್ ಖಾನ್ ಅತಿ ದೊಡ್ಡ ಸ್ಟಾರ್. ಅಷ್ಟೇ ಅಲ್ಲ ಆಗಾಗ ಕೃಷಿ ಕಾಯಕದಲ್ಲೂ ತೊಡಗುತ್ತಾರೆ ಆ ಫೋಟೋಗಳನ್ನ ಶೇರ್ ಮಾಡ್ತಾ ಇರ್ತಾರೆ. ಸಲ್ಮಾನ್ ಖಾನ್ ತಮ್ಮದೇ ಆದ ಫಾರ್ಮ್ ಹೌಸ್ ಹೊಂದಿದ್ದು, ಬಿಡುವಿನ ವೇಳೆಯಲ್ಲೆಲ್ಲಾ ಆ ಫಾರ್ಮ್ ಹೌಸ್ ನಲ್ಲೇ ಕಾಲ ಕಳೆಯುತ್ತಾರೆ. ಆದ್ರೆ ಆ ಫಾರ್ಮ್ ಹೌಸ್ ನಲ್ಲಿ ಸೆಲೆಬ್ರೆಟಿಗಳ ಶವವನ್ನ ಹೂಳುತ್ತಾರೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ ಪನ್ವೇಲ್ ಫಾರ್ಮ್ ಹೌಸ್ ಆಸ್ತಿ ವಿವಾದ ನಡೆಯುತ್ತಿದೆ. ಅದರ ನಡುವೆ ಇದೀಗ ನೆರೆಮನೆಯ ಕೇತನ್ ಕಕ್ಕಡ್ ಎನ್ನುವವರು ಸಲ್ಮಾನ್ ಖಾನ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಅವರ ಫಾರ್ಮ್ ಹೌಸ್ ನಲ್ಲಿ ಸೆಲೆಬ್ರೆಟಿಗಳ ಶವಗಳನ್ನ ಹೂಳುತ್ತಾರೆ ಅಷ್ಟೇ ಅಲ್ಲ, ಮಕ್ಕಳ ಕಳ್ಳಸಾಗಾಣಿಕೆಯೂ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಆರೋಪದಿಂದ ರೊಚ್ಚಿಗೆದ್ದ ಸಲ್ಮಾನ್ ಖಾನ್ ಇದೀಗ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಅವರ ಹೇಳಿಕೆಗೆ ಯಾವುದೇ ಪುರಾವೆಗಳಿಲ್ಲ. ಇದು ನಟನ ಪ್ರತಿಷ್ಟೆಗೆ ಕಳಂಕ ತರುವ ಉದ್ದೇಶ ಪೂರ್ವಕವಾಗಿ ಪ್ರಯತ್ನವಾಗಿದೆ ಎಂದು ಸಲ್ಮಾನ್ ಖಾನ್ ಪರ ವಕೀಲರು ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…