ಲೀಲಾ ಮತ್ತು ಎಜೆ ಸೊಸೆಯಂದಿರು ಮುಖಾಮುಖಿಯಾದಾಗಿನಿಂದಲೂ ಕೌಸಲ್ಯಳನ್ನು ಕಂಡರೆ ಎಜೆ ಸೊಸೆಯಂದಿರಿಗೆ ಆಗುವುದೇ ಇಲ್ಲ. ಇನ್ನು ಲೀಲಾ ಮತ್ತು ಎಜೆ ಮದುವೆಯಾದ ಮೇಲಂತು ಒಳ ಜಗಳಗಳು ಯುದ್ದದಂತೆ ಪರಿವರ್ತನೆಯಾಗಿ ಬಿಟ್ಟಿದೆ. ಎಜೆ ಮನೆಗೆ ಕೌಸಲ್ಯ ಹೋದಾಗ ಮಾತಿಗೆ ಮಾತು ಬೆಳೆಯುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಹಾಗೇ ಎಜೆ ಸೊಸೆಯಂದಿರು ಮಾಡಿದ ಅವಮಾನ ಕೌಸಲ್ಯ ಮನದಲ್ಲಿ ಗಟ್ಟಿಯಾಗಿ ಬೇರೂರಿ ಬಿಟ್ಟಿದೆ. ಅದಕ್ಕೆ ಏನಾದರೂ ಮಾಡಿ ಸೇಡು ತೀರಿಸಿಕೊಳ್ಳಲೇಬೇಕು ಎಂಬ ಹಠ ಅವಳಲ್ಲಿದೆ. ಅದಕ್ಕೆ ತಕ್ಕನಾಗಿ ಎಜೆ ತನ್ನ ಸೊಸೆಯಂದಿರನ್ನು ಕೌಸಲ್ಯ ಮನೆಗೆ ಕಳುಹಿಸಿದ್ದಾನೆ.
ಫಾರಿನ್ ಟ್ರಿಪ್ ಎಂದುಕೊಂಡು ಹೋದ ಸೊಸೆಯಂದಿರು ಲ್ಯಾಂಡ್ ಆಗಿದ್ದು ಮಾತ್ರ ಕೌಸಲ್ಯ ಮನೆಯಲ್ಲಿ. ಅಂದಿನಿಂದ ಇಂದಿನವರೆಗೂ ಕೌಸಲ್ಯ, ಎಜೆ ಎಂಬ ಹೆಸರಿಟ್ಟುಕೊಂಡು ಸೊಸೆಯಂದಿರನ್ನು ಗಿರಗಿಟ್ಲೆ ಆಡಿಸುತ್ತಿದ್ದಾಳೆ. ಒಂದೇ ಒಂದು ಕೆಲಸವನ್ನು ಮಾಡದೆ, ಇಡಿ ಮನೆಯ ಕ್ಲೀನಿಂಗ್, ಅಡುಗೆ ಕೆಲಸ ಎಲ್ಲವನ್ನು ಸೊಸೆಯಂದಿರಿಂದಾಲೇ ಮಾಡಿಸುತ್ತಿದ್ದಾಳೆ. ಇದನ್ನು ದುರ್ಗಾಳಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೂ ಜೋರು ಮಾತನಾಡುವಂತಿಲ್ಲ. ಅಲ್ಲಿ ಎಜೆ ಎಂಬ ಹೆಸರನ್ನು ಕೌಸಲ್ಯ ಆಗಾಗ ಜಪಿಸುತ್ತಲೇ ಇರುತ್ತಾಳೆ. ಹೇಗಾದರೂ ಮಾಡಿ ಇದಕ್ಕೆಲ್ಲಾ ಸೇಡು ತೀರಿಸಿಕೊಳ್ಳಬೇಕು ಎನ್ನುವಾಗಲೇ ಕೌಸಲ್ಯಾಳ ಫೋಟೋವನ್ನು ಗೋಡಗೆ ನೇತಾಕಿ, ಹಾರ ಹಾಕಿಸುವಂತ ಐಡಿಯಾ ಸಿಕ್ಕಿದೆ.
ಮನೆಯಲ್ಲಿ ಕೂತು ಚಂದ್ರಶೇಖರ್, ಚುಕ್ಕಿ ಗಣೇಶ ಹಬ್ಬದ ತಯಾರಿ ಬಗ್ಗೆ ಮಾತನಾಡುತ್ತಿದ್ದಾರೆ. ಮೂಹುರ್ತಕ್ಕೆ ಸರಿಯಾಗಿ ಗಣೇಶನ ವಿಗ್ರಹವನ್ನು ಮನೆಯೊಳಗೆ ತರಬೇಕು. ಆ ರೀತಿ ತರದೆ ಇದ್ದಿದ್ದಕ್ಕೆ ಕಳೆದ ಬಾರಿ ಒಂದು ಅಮೂಲ್ಯವಾದ ಜೀವವನ್ನು ಕಳೆದುಕೊಂಡಿದ್ದೇವೆ ಎಂದಾಗ ಮೂರು ಸೊಸೆಯಂದಿರು ಫೋಟೋ ಕಡೆ ತಿರುಗಿ ನೋಡಿದ್ದಾರೆ. ಅವರ ಊಹೆಯಲ್ಲಿ ಕೌಸಲ್ಯ ಕೂಡ ಗೋಡೆ ಮೇಲಿನ ಫೋಟೋ ಆಗಿನೇ ಕಾಣಿಸಿದ್ದಾರೆ. ಸೇಡು ತೀರಿಸಿಕೊಳ್ಳಲು ಸರಿಯಾದ ಅಸ್ತ್ರವೇ ಸಿಕ್ಕಿದೆ ಎಂದು ಖುಷಿ ಪಡುತ್ತಿದ್ದಾರೆ.
ಈಗ ಗಣೇಶ ಮೂರ್ತಿಯನ್ನು ಸರಿಯಾದ ಸಮಯಕ್ಕೆ ಮನೆಯೊಳಗೆ ತರದೆ ಹೋದಲ್ಲಿ ಕೌಸಲ್ಯಾಳ ಪ್ರಾಣ ಪಕ್ಷಿ ಹಾರಿಹೋಗಬಹುದು ಎಂಬ ನಿರೀಕ್ಷೆ ಸೊಸೆಯಂದಿರದ್ದು. ಹೀಗಾಗಿ ಗಣಪತಿ ಮನೆಯೊಳಗೆ ಬಾರದಂತೆ ಮಾಡಲು ಫ್ಲ್ಯಾನ ರಚಿಸುತ್ತಿದ್ದಾರೆ.