Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಆಸ್ತಿ ಮಾಲೀಕರ ಮನೆ ಬಾಗಿಲಿಗೆ ಇ-ಸ್ವತ್ತು ಪತ್ರ ವಿತರಣೆ

Facebook
Twitter
Telegram
WhatsApp

ಚಿತ್ರದುರ್ಗ (ಡಿ. 28) : ತಾಲ್ಲೂಕಿನ ಮಠದಕುರುಬರಹಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುತ್ತಿನಾಡು ಗ್ರಾಮದಲ್ಲಿ ನೂತನ ಕಾರ್ಯಕ್ರಮವಾದ ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಂಡು ಮನೆ ಮಾಲೀಕರ ಮನೆ ಬಾಗಿಲಿಗೆ, ಅವರ ಆಸ್ತಿಗೆ ಸಂಬಂಧಿಸಿದ ಇ –ಸ್ವತ್ತು ಪ್ರಮಾಣ ಪತ್ರವನ್ನು  ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್ ಅವರು ಬುಧವಾರದಂದು ಗ್ರಾಮದಲ್ಲಿ ವಿತರಿಸಿದರು.

ಇದೊಂದು ರಾಜ್ಯದಲ್ಲಿಯೇ ಮೊದಲ ಬಾರಿಗೆ, ಮನೆ ಬಾಗಿಲಿಗೆ ಇ –ಸ್ವತ್ತು  ವಿತರಣೆ ಮಾಡುವ ವಿನೂತನ ಕಾರ್ಯಕ್ರಮವಾಗಿದ್ದು, ಗುತ್ತಿನಾಡು ಗ್ರಾಮದಲ್ಲಿ ಅಧಿಕೃತವಾಗಿ ಪ್ರಾರಂಭ ಮಾಡಲಾಗಿದ್ದು, ಇಡೀ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ  ಮನೆ ಬಾಗಿಲಿಗೆ ಇ-ಸ್ವತ್ತು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು.  ಈ ವಿನೂತನ ಕಾರ್ಯಕ್ರಮಕ್ಕೆ ಗ್ರಾಮೀಣ ಭಾಗದ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ವ್ಯಕ್ತವಾಗಿದ್ದು, ಗ್ರಾಮೀಣ ಭಾಗದವರಿಗೆ ವಿಳಂಬವಿಲ್ಲದೆ ಸಕಾರದ ಸೇವೆ ಇನ್ನು ಮುಂದೆ ಸುಲಭವಾಗಿ ಲಭ್ಯವಾಗಲಿದೆ.  ಶೀಘ್ರದಲ್ಲಿಯೇ ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು ಎಂದು ಜಿ.ಪಂ. ಸಿಇಒ ಎಂ.ಎಸ್. ದಿವಾಕರ್ ಅವರು ಹೇಳಿದರು.

ಇತ್ತೀಚೆಗೆ ಗ್ರಾಮ ಪಂಚಾಯ್ತಿಯಲ್ಲಿ ಇ-ಸ್ವತ್ತು ವಿತರಣೆ ಮಾಡುವಾಗ ಅನಾವಶ್ಯಕ ವಿಳಂಬ ಮತ್ತು ಮದ್ಯವರ್ತಿಗಳ ಹಾವಳಿಯಿಂದ ತೊಂದರೆಯಾಗುತ್ತಿರುವುದು ಕಂಡುಬಂದಿರುತ್ತದೆ.  ನಮ್ಮ ಜಿಲ್ಲೆಯಲ್ಲೂ ಸಹ ಕೆಲವು ಗ್ರಾಮ ಪಂಚಾಯಿತಿಗಳ ಸಾರ್ವಜನಿಕರಿಂದ ದೂರು ಅರ್ಜಿಗಳು ಬಂದಿದ್ದರಿಂದ ಗ್ರಾಮ ಪಂಚಾಯಿತಿ ಮತ್ತು ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಸಂಬಂಧ ಏರ್ಪಡಲು ಹಾಗೂ ಗ್ರಾಮ ಪಂಚಾಯಿತಿಗಳಲ್ಲಿ ಬಾಕಿ ಇರುವ ಕಂದಾಯ ವಸೂಲಿಯಾಗಲು ಮತ್ತು ಸಾರ್ವಜನಿಕರಿಗೆ ವಿಳಂಬವಿಲ್ಲದೇ ಸರ್ಕಾರದ ಸೇವೆಯನ್ನು  ನೀಡುವ ಉದ್ದೇಶಕ್ಕಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಪಂಚಾಯ್ತಿಯ ಎಲ್ಲಾ ಸಿಬ್ಬಂದಿಗಳು ಆ ಭಾಗದಲ್ಲಿ ಬರತಕ್ಕಂತಹ ಎಲ್ಲಾ ನಿವಾಸಿಗಳ ದಾಖಲೆಗಳನ್ನು 10 ರಿಂದ 15 ದಿನ ಮೊದಲೇ ಪಡೆದು, ನಿಯಮಾನುಸಾರ ಪರಿಶೀಲಿಸಿ, ಆಸ್ತಿ ಮಾಲೀಕರು ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರ, ಅವರ ಮನೆ ಮನೆಗೆ ಖುದ್ದು ಭೇಟಿ ನೀಡಿ, ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಲು ಯೋಜನೆ ಸಿದ್ಧಪಡಿಸಲಾಗಿತ್ತು.

ಅದರಂತೆ, ಡಿ. 28 ರಂದು ಬುಧವಾರ ಬೆಳ್ಳಂಬೆಳಿಗ್ಗೆ ಚಿತ್ರದುರ್ಗ ತಾಲ್ಲೂಕಿನ ಮಠದ ಕುರುಬರಹಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುತ್ತಿನಾಡು ಹಾಗೂ ಎಂ.ಆರ್.ಕಾಲೋನಿಯ ನಿವಾಸಿಗಳಿಗೆ ಸುಮಾರು 80ಕ್ಕೂ ಹೆಚ್ಚು ಇ-ಸ್ವತ್ತು ಪ್ರಮಾಣ ಪತ್ರಗಳನ್ನು ನಿವಾಸಿಗಳ ಮನೆ ಬಾಗಿಲಿಗೆ ಹೋಗಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮಗಳ ನಿವಾಸಿಗಳು ಅಭಿಪ್ರಾಯ ವ್ಯಕ್ತಪಡಿಸಿ, ಇ-ಸ್ವತ್ತು ಪಡೆಯಲು ಮೊದಲು ತುಂಬಾ ಕಷ್ಟವಾಗುತ್ತಿತ್ತು.  ಆದರೆ ಅಧಿಕಾರಿಗಳೇ ಮನೆ ಬಾಗಿಲಿಗೆ ಬಂದು ಇ-ಸ್ವತ್ತು ವಿತರಣೆಗೆ ಕ್ರಮ ವಹಿಸಿರುವುದರಿಂದ ತುಂಬಾ ಸಂತೋಷವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಸದಸ್ಯರು ಮಾತನಾಡಿ, ಪಂಚಾಯ್ತಿಗಳಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ವಿಳಂಬ ನೀತಿಯಿಂದ ಜಿಲ್ಲಾ ಪಂಚಾಯ್ತಿಯನ್ನು ನೋಡುವ ದೃಷ್ಟಿಕೋನವೇ ಬದಲಾಗಿತ್ತು.  ಇದೀಗ ಇಂತಹ ಸೇವಾ ಕಾರ್ಯದಿಂದ ಜನರ ಅಭಿಪ್ರಾಯ ಬದಲಾಗಿದ್ದು, ಸಂತಸ  ವ್ಯಕ್ತಪಡಿಸಿರುತ್ತಾರೆ.  15 ದಿನಗಳಲ್ಲಿ ಸುಮಾರು 4 ಲಕ್ಷ ರೂ. ತೆರಿಗೆ ಸಂಗ್ರಹವಾಗಿದ್ದು, ತೆರಿಗೆಯನ್ನು ಜನರು ತಾವೇ ಸ್ವತ: ಬಂದು ಪಾವತಿಸಿರುತ್ತಾರೆ.

ಇ-ಸ್ವತ್ತು ಪ್ರಮಾಣಪತ್ರ ವಿತರಣೆ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ. ರಂಗಸ್ವಾಮಿ ಸೇರಿದಂತೆ ಗ್ರಾಮ ಪಂಚಾಯತಿಯ ಅಧ್ಯಕ್ಷರು, ಸದಸ್ಯರುಗಳು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ನಮ್ಮ ಮಗಳು ಅಂತವಳಲ್ಲ, ಫೋಟೋ ಹೇಗೆ ಬೇಕೋ ಹಾಗೇ ಎಡಿಟ್ ಮಾಡ್ತಾರೆ : ನೇಹಾ ತಾಯಿ ಹೇಳಿಕೆ

ಹುಬ್ಬಳ್ಳಿ : ಪ್ರೀತಿ ವಿಚಾರಕ್ಕೆ ನೇಹಾರ ಕೊಲೆಯಾಗಿದೆ. ಆರೋಪಿಯ ಬಂಧನವೂ ಆಗಿದೆ. ತನಿಖೆಯೂ ನಡೆಯುತ್ತಿದೆ. ಇದರ ನಡುವೆ ಫಯಾಜ್ ತಂದೆ-ತಾಯಿ ಕ್ಷಮಾಪ್ಪಣೆ ಕೇಳಿ, ಮಗನಿಗೆ ಶಿಕ್ಷೆಯಾಗಲಿ ಎಂದೇ ಒತ್ತಾಯಿದ್ದಾರೆ. ಇಬ್ವರು ಲವ್ ಮಾಡುತ್ತಿದ್ದರು ಅಂತ

ನೇಹಾ ಕೊಲೆ : ಶಿಕ್ಷಕರಾಗಿರುವ ಫಯಾಜ್ ತಂದೆ-ತಾಯಿ ಏನಂದ್ರು..?

ಧಾರವಾಡ: ಚೆನ್ನಾಗಿ ಓದಿ ಉಜ್ವಲ ಭವಿಷ್ಯ ಕನಸು ಕಂಡಿದ್ದ ನೇಹಾ ಜೀವನ ಕಮರಿ ಹೋಗಿದೆ. ಪ್ರೀತಿಯ ಕಾರಣವನ್ನಿಟ್ಟುಕೊಂಡು ಫಯಾಜ್ ಎಂಬಾತ ನೇಹಾಳ ಜೀವನವನ್ನೇ ಅಂತ್ಯ ಮಾಡಿದ್ದಾನೆ. ಅವನಿಗೆ ಗಲ್ಲು ಶಿಕ್ಷೆಯಾಗಲೇಬೇಕೆಂದು ಹೋರಾಟಗಳು ನಡೆಯುತ್ತಿವೆ. ಯುವತಿಯ

ಮೆಣಸಿನಕಾಯಿ ಕತ್ತರಿಸಿದ ನಂತರ ನಿಮ್ಮ ಕೈಗಳು ಉರಿಯದಂತೆ ತಡೆಯಲು ಹೀಗೆ ಮಾಡಿ….!

ಸುದ್ದಿಒನ್ : ಮೆಣಸಿನಕಾಯಿ ಕತ್ತರಿಸಿದ ನಂತರ ಕೈಗಳು ಉರಿಯುತ್ತವೆ.  ಇದು ಕೆಲವೊಮ್ಮೆ ಹೆಚ್ಚು ಆಗಬಹುದು. ಮೆಣಸಿನಕಾಯಿಯಲ್ಲಿರುವ ಕ್ಯಾಪ್ಸೈಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಮತ್ತು ಈ ಉರಿಯನ್ನು ಕಡಿಮೆ ಮಾಡಲು ಯಾವ ಸಲಹೆಗಳನ್ನು ಅನುಸರಿಸಬಹುದು

error: Content is protected !!