ಬೆಂಗಳೂರು: ಇತ್ತೀಚೆಗಂತು ಸೋಷಿಯಲ್ ಮೀಡಿಯಾದಲ್ಲಿ ಸಂಸ್ಕೃತ ವಿಚಾರ ಸಾಕಷ್ಟು ಸದ್ದು ಮಾಡ್ತಾ ಇದೆ. ಸಂಸ್ಕೃತ ಬೇಡ ಎಂದು ವಿರೋಧಿಸುವವರ ನಡುವೆ, ಸಂಸ್ಕೃತ ಬೇಕು ಎಂದು ಜಪಿಸುವವರು ಇದ್ದಾರೆ. ಈ ಪರ ವಿರೋಧ ಸೋಷಿಯಲ್ ಮೀಡಿಯಾದಲ್ಲಿ ಕಡಿಮೆಯಾಗಿಲ್ಲ. ಇದೀಗ ಇದರ ನಡುವೆಯೇ ಸಂಸ್ಕೃತ ವಿಚಾರಕ್ಕೆ ಶಾಸಕ ಜಮೀರ್ ಅಹ್ಮದ್ ಸುದ್ದಿಯಾಗಿದ್ದಾರೆ.

ಶಾಸಕ ಜಮೀರ್ ಅಹ್ಮದ್ ಸಂಸ್ಕೃತ ಮಂತ್ರ ಪಠಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಸಂಸ್ಕೃತ ಮಂತ್ರ ಹೇಳಿದ್ದಾರೆ.
ನಗರದ ಚಿಕ್ಕಪೇಟೆಯಲ್ಲಿ ನೂತನವಾಗಿ ಪೊಲೀಸ್ ಕಟ್ಟಡವನ್ನ ನಿರ್ಮಾಣ ಮಾಡಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಏರ್ಪಟ್ಟಿತ್ತು. ಈ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ಕೂಡ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಕೃತ ಮಂತ್ರ ಪಠಿಸಲಾಗಿತ್ತು. ಆಗ ಜಮೀರ್ ಅಹ್ಮದ್ ಕೂಡ ಮಂತ್ರ ಪಠಿಸಿ ಎಲ್ಲರ ಗಮನ ಸೆಳೆದಿದ್ದಾರೆ.
