ಬೆಂಗಳೂರು : ಚಂದನವನದಲ್ಲಿ ಅನೇಕ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಬನಾರಸ್ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಒಲವೇ ಮಂದಾರ ಹಾಗೂ ಬೆಲ್ ಬಾಟಮ್ ಖ್ಯಾತಿಯ ನಿರ್ದೇಶಕ ಜಯತೀರ್ಥ ಡೈರೆಕ್ಟ್ ಮಾಡಿರುವ ಬನಾರಸ್ ಪ್ಯಾನ್ ಇಂಡಿಯಾ ಸಿನೆಮಾವಾಗಿದ್ದು, ಚಿತ್ರದಲ್ಲಿ ಶಾಸಕರಾದ ಜಮೀರ್ ಅಹಮ್ಮದ್ ಪುತ್ರ ಝೈದ್ ಖಾನ್ ಈ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಗ್ರ್ಯಾಂಡ್ ಎಂಟ್ರಿಕೊಡ್ತಿದ್ದಾರೆ. ಇವರಿಗೆ ನಾಯಕಿಯಾಗಿ ಕರಾವಳಿ ಬೆಡಗಿ ಸೋನಲ್ ಮೊಂಥೆರೋ ನಟಿಸಿದ್ದಾರೆ. ಅಚ್ಚರಿ ಅಂದರೆ ಚಿತ್ರದ ಆಡಿಯೋ ರೈಟ್ಸ್ ಈಗಾಗಲೇ ದಾಖಲೆ ಮೊತ್ತಕ್ಕೆ ಸೇಲ್ ಆಗಿ ಇತಿಹಾಸ ಸೃಷ್ಟಿಸಿದ್ದಾಗಿದೆ.
ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಶುರುವಾಗಿದ್ದು ಚಿತ್ರತಂಡ ಸಖತ್ ಆಗಿರೋ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ರಿಲೀಸ್ ಆಗಿರೋ ಸ್ಥಳವೂ ಅಷ್ಟು ಪ್ರಮುಖವಾದುದ್ದಾಗಿದೆ. ಹೌದು ಬನಾರಸ್ ಚಿತ್ರದ ಪೋಸ್ಟರ್ ಲಾಂಚ್ ಮಾಡಲು ಪುನೀತ್ ರಾಜ್ ಕುಮಾರ್ ಈ ಹಿಂದೆ ಒಪ್ಪಿಕೊಂಡಿದ್ದರಂತೆ. ಆದ್ರೆ ಅಪ್ಪು ಅಕಾಲಿಕ ನಿಧನದಿಂದ ಅದು ಸಾಧ್ಯವಾಗಲಿಲ್ಲ ಆದ್ರಿಂದ ಕಂಠೀರವ ಸ್ಟೂಡಿಯೋದಲ್ಲಿರುವ ಅಪ್ಪು ಸಮಾಧಿ ಬಳಿಯೇ ಚಿತ್ರತಂಡ ತೆರೆಳಿ ಪುಷ್ಪ ನಮನ ಸಲ್ಲಿಸಿ ಒಂದು ನಿಮಿಷ ಮೌನಾಚರಣೆ ಮಾಡಿದ ಬಳಿಕ ಫಸ್ಟ್ ಲುಕ್ ಅಂಡ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಪೋಸ್ಟರ್ ಲಾಂಚ್ ಗೂ ಮೊದಲು ಡಾ.ರಾಜ್ ಕುಮಾರ್, ಪಾರ್ವತಮ್ಮ ಸ್ಮಾರಕಕ್ಕೂ ನಮಿಸಿ ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಗೆ ಶುಭಾರಂಭ ಮಾಡಲಾಯಿತು.
ರಿಲೀಸ್ ಆಗಿರೋ ಮೋಷನ್ ಪೋಸ್ಟರ್ ನಲ್ಲಿ ಅದ್ಭುತ ಮ್ಯೂಸಿಕ್, ನವೀರಾದ ಪ್ರೇಮಕಥೆ ಇರುವ ಹಿಂಟ್ ಅಂತೂ ಇದೆ. ಬೆಲ್ ಬಾಟಂ ಚಿತ್ರದ ಭಾರೀ ಯಶಸ್ಸಿನ ನಂತರ ಪ್ರೇಮ ಕಥೆ ಹೊತ್ತ ಬನಾರಸ್ ತೆರೆಗೆ ಬರಲು ಸಜ್ಜಾಗ್ತಿದ್ದು, ನಿರ್ದೇಶಕ ಜಯತೀರ್ಥ ಅವರ ನಿರ್ದೇಶನದ ಮೇಲೂ ಭರವಸೆ ಇರುವ ಕಾರಣ ಈ ಚಿತ್ರದ ಮೇಲಿನ ಕುತೂಹಲ ಹೆಚ್ಚಾಗಿದೆ.
ತಾರಾಗಣದಲ್ಲಿ ದೇವರಾಜ್ ಅಚ್ಯುತ್ ಕುಮಾರ್, ಸುಜಯ್ ಶಾಸ್ತ್ರಿ, ಸಪ್ನ ರಾಜ್, ಬರ್ಕತ್ ಅಲಿ ಒಳಗೊಂಡಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಎನ್.ಕೆ ಪ್ರೊಡಕ್ಷನ್ಸ್ ಬ್ಯಾನರ್ ನಡಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತಿಲಕ್ ರಾಜ್ ಬಲ್ಲಾಳ್ ಬಂಡವಾಳ ಹಾಕಿ ನಿರ್ಮಾಣ ಮಾಡಿದ್ದಾರೆ.ಅದ್ವೈತ ಗುರುಮೂರ್ತಿ ಕ್ಯಾಮೆರಾ ವರ್ಕ್, ಬಿ ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ, ಎ. ವಿಜಯ್, ಡಿಫ್ರೆಂಟ್ ಡ್ಯಾನಿ ಸಾಹಸ ನಿರ್ದೇಶನ, ರಘು ನಿಡುವಳ್ಳಿ ಸಂಭಾಷಣೆ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಎ.ಹರ್ಷ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…