ಮೇ.28, 29 ರಂದ ಮಂಡ್ಯದಲ್ಲಿ ಯುವ ಸಂಸತ್ ಕಾರ್ಯಕ್ರಮ

suddionenews
1 Min Read

ಚಿತ್ರದುರ್ಗ : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್(ಹುಲಿಕಲ್ ನಟರಾಜ್) ಸ್ಥಾಪಿತ ವತಿಯಿಂದ ಇದೇ ತಿಂಗಳ 28, 29 ರಂದು ಮಂಡ್ಯದ ಒಳಾಂಗಣ ಕ್ರೀಡಾಂಗಣದಲ್ಲಿ ಒಂದು ಸಾವಿರದ ನೂರು ವಿದ್ಯಾರ್ಥಿಗಳಿಗೆ ಯುವ ಸಂಸತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ವಿದ್ಯಾರ್ಥಿಗಳಲ್ಲಿ ಧೇಶಭಕ್ತಿಯನ್ನು ಮೂಡಿಸಿ ಸದೃಢರನ್ನಾಗಿಸಿ ಮುಂದಿನ ಧ್ಯೇಯ, ಧೋರಣೆಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ.
ಪಿ.ಯು.ಸಿ.ಯಿಂದ ಹಿಡಿದು ಕಾಲೇಜು ವಿದ್ಯಾರ್ಥಿಗಳು ಯುವ ಸಂಸತ್‍ನಲ್ಲಿ ಭಾಗವಹಿಸಬಹುದಾಗಿದೆ. ಪ್ರತಿ ಜಿಲ್ಲೆಯಿಂದ ಹತ್ತು ವಿದ್ಯಾರ್ಥಿಗಳಿಗೆ ಅವಕಾಶವಿದ್ದು, ಆಸಕ್ತರು ಮೇ.15 ರೊಳಗೆ ಹೆಸರುಗಳನ್ನು ನೊಂದಾಯಿಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ:8747825425, 9448664710 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ನಾಗರಾಜ್‍ಸಂಗಮ್, ಕಾರ್ಯದರ್ಶಿ ಲೋಕೇಶ್ ಇವರುಗಳು ವಿನಂತಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *