Connect with us

Hi, what are you looking for?

ಪ್ರಮುಖ ಸುದ್ದಿ

ಭೋವಿ ಸಮುದಾಯದಲ್ಲಿ ಅಂತರಿಕ ಕಚ್ಚಾಟ ಕಡಿಮೆ ಆಗಲಿ; ಬಿಜೆಪಿ ಯುವ ಮುಖಂಡ ರಘುಚಂದನ್

ಚಿತ್ರದುರ್ಗ, ಸುದ್ದಿಒನ್ : ಸದೃಢ ಭೋವಿ ಸಮಾಜ ನಿರ್ಮಾಣಕ್ಕೆ, ಸಶಕ್ತ ಯುವಕರ ತಂಡ ಕಟ್ಟಲು ಕ್ರಿಕೆಟ್ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಬಿಜೆಪಿ ಯುವ ಮುಖಂಡ ರಘುಚಂದನ್ ಹೇಳಿದರು.

ಶನಿವಾರ ನಗರದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಭೋವಿ ಪ್ರೀಮಿಯರ್ ಲೀಗ್ ನ ಎರಡನೇ ದಿನದ ಕಾರ್ಯಕ್ರಮದಲ್ಲಿ
ಭೋವಿ ಪ್ರೀಮಿಯರ್ ಕ್ರಿಕೆಟ್ ಲೀಗ್ 2021ರ ಮಹಾದಾಸೋಹಿಯಾಗಿ ಮಾತನಾಡಿದರು. ಸಮಾಜದ ಏಳಿಗೆ ಮನಸ್ಸಿನಿಂದ ಬರಬೇಕು. ಕೇವಲ ಗಂಜಿ ಬಟ್ಟೆಯಿಂದ ಸಾಧ್ಯವಿಲ್ಲ ಎಂದರು.

ಸಮಾಜ ಧ್ವನಿಯಾಗಿ ಪರಮಪೂಜ್ಯ ಶ್ರೀಗಳಿದ್ದಾರೆ. ಅಂತರಿಕ ಕಚ್ಚಾಟ ಕಡಿಮೆ ಆಗಲಿ. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಅವಕಾಶ ಸಿಕ್ಕಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಸೋಲು ಗೆಲುವು ಸಮಾನವಾಗಿ ತೆಗೆದುಕೊಳ್ಳಿ. ಸಮಾಜ ನನಗೇನೂ ಮಾಡಿದೆ ಎನ್ನುವ ಮೊದಲು, ನಾನೇನು ಸಮಾಜಕ್ಕೆ ಮಾಡಿದೆ ಎನ್ನುವುದು ಮುಖ್ಯ. ಯುವಕರು ಕ್ರೀಡೆಯೊಂದಿಗೆ ಸಮಾಜ ಸಂಘಟನೆಗೆ ಒತ್ತು ನೀಡಿ ಎಂದು ಕರೆಕೊಟ್ಪರು.

ಬೆಂಗಳೂರಿನ ಟಿ.ವೈ.ಕುಮಾರ ಮಾತನಾಡಿ, ನಮ್ಮ ಸಮಾಜಕ್ಕೆ ಕಣ್ಣಿಗೆ ಕಾಣುವ ದೇವರು ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳು. ಯುವಕರ ದಿಕ್ಸೂಚಿಯಾಗಿ ಶ್ರೀಗಳಿದ್ದಾರೆ. ನಮ್ಮೆಲ್ಲರ ದಾರಿದೀಪ ನಮ್ಮ ಶ್ರೀಗಳು ಎಂದು ತಿಳಿಸಿದರು.

ಶಿವಮೊಗ್ಗ ಪಾಲಿಕೆ ಸದಸ್ಯ ಧೀರರಾಜ ಹೊನ್ನನವೀಲೆ ಅವರು ಮಾತನಾಡಿ, ಕ್ರೀಡೆ ನವಚೈತನ್ಯವನ್ನು ನೀಡುತ್ತದೆ. ಯುವಕರಿಗೆ ನಮ್ಮ ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಕ್ರಿಯಾಶೀಲತೆಯೇ ಸ್ಫೂರ್ತಿ. ಎಲ್ಲಾ ಕ್ಷೇತ್ರಗಳಲ್ಲಿ ಪ್ರತಿಭೆ ಗುರುತಿಸುವುದು ಶ್ಲಾಘನೀಯ.  ಕೂಲಿಕಾರ್ಮಿಕ ಮಕ್ಕಳಲ್ಲಿ ಕೂಡ ಅದ್ಭುತ ಪ್ರತಿಭೆಯಿದೆ ಎಂದು ಈ ಕ್ರೀಡಾಕೂಟ ಸಾಬೀತು ಪಡಿಸಿದೆ ಎಂದು ಹೇಳಿದರು.

ಶಿವಮೊಗ್ಗ ಜಿ.ಪಂ.ಸದಸ್ಯ ವೀರಭದ್ರಪ್ಪ ಪೂಜಾರ ಮಾತನಾಡಿ, ಇಮ್ಮಡಿ ಸಿದ್ದರಾಮೇಶ್ವರ ಶ್ರೀಗಳ ಮಾರ್ಗದರ್ಶನ ಶೈಕ್ಷಣಿಕ ಆಧ್ಯಾತ್ಮಿಕ ಆಚೆ ಎಲ್ಲಾ ರಂಗಗಳನ್ನು ಪ್ರೋತ್ಸಾಹಿಸುವ ಕಾರ್ಯ ಶ್ಲಾಘನೀಯ. ಇದರಿಂದ ವಿವಿಧ ರಂಗಲ್ಲಿ ಗುರುತಿಸಿಕೊಳ್ಳಲು ಹಾಗೂ ಚಾಪು ಮೂಡಿಸಲು  ಸಾಧ್ಯವಾಗುತ್ತದೆ. ಸಾಹಿತ್ಯ ಲೋಕದಿಂದ ಸಿದ್ದರಾಮೇಶ್ವರರು ಹೊರಹೊಮ್ಮಿದ್ದಾರೆ. ಕ್ರೀಡಾ ಕ್ಷೇತ್ರದಿಂದ ಒಂದು ಧೃವತಾರೆ ಹೊರಹೊಮ್ಮಲಿ. ಕ್ರೀಡಾ ಮನೋಭಾವದಿಂದ ಸೌಹಾರ್ದ ವಾತಾವರಣ ನಿರ್ಮಿಸುತ್ತದೆ ಎಂದು ಹೇಳಿದರು.

ನಗರಸಭೆ ಮಾಜಿ ಸದಸ್ಯ ಈ.ಮಂಜುನಾಥ ಮಾತನಾಡಿ, ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಭಾಗವಹಿಸಿರುವುದು ಸಮಾಜ ಸಂಘಟನೆಗೆ ಇನ್ನಷ್ಟು ಶಕ್ತಿ ದೊರೆದಂತೆಯಾಗಿದೆ ಎಂದು ಹೇಳಿದರು.

ಕ್ರೀಡಾಪಟು ವಿಜಯಪುರದ ಸುನೀಲ ಮಾತಾನಾಡಿ, ನಮ್ಮ ಶ್ರೀಗಳು ಧಾರ್ಮಿಕ ಜೊತೆಜೊತೆಯಲ್ಲಿ ಎಲ್ಲಾ ರಂಗಗಳ ಪ್ರೋತ್ಸಾಹಕರಾಗಿದ್ದಾರೆ. ಕಲ್ಲರಳಿ ಹೂವಾಗಿ ಎನ್ನುವಂತೆ ಕಲ್ಲುಬಂಡೆಗಳನ್ನು ಹೊಡೆಯುವ ಮಕ್ಕಳಲ್ಲಿ ಪ್ರತಿಭೆ ಗುರುತಿಸುತ್ತಿದ್ದಾರೆ. ನಮ್ಮಂತ ಗುಡಿಸಲು ವಾಸಿಗಳಿಗೂ ಗುಡಿಯಂತ ಗೌರವ ನೀಡಿದ್ದಾರೆ. ಈ ಮೂಲಕ ನಾನು ಹಾಗೂ ನಮ್ಮ ಭಾಗದ ಯುವಕರು ಸಮಾಜ ಸೇವೆಗೆ ಶ್ರೀಗಳೊಂದಿಗೆ ಕೈಜೋಡಿಸುತ್ತೇವೆ ಎಂದು ಹೇಳಿದರು.

ನಗರಸಭೆ ನಾಮ ನಿರ್ದೇಶಿತ ಸದಸ್ಯ ಪೇಂಟ್ ತಿಮ್ಮಣ್ಣ ಅವರನ್ನು ಸನ್ಮಾನಿಸಲಾಯಿತು. ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ ಅಧ್ಯಕ್ಷತೆವಹಿಸಿದ್ದರು. ತಾ.ಪಂ.ಸದಸ್ಯೆ ವಿದ್ಯಾ, ಜಿಲ್ಲಾ ಭೋವಿ ಸಂಘದ ಕಾರ್ಯದರ್ಶಿಗಳಾದ ಲಕ್ಷಣ, ನಿರ್ದೇಶಕರಾದ ಕೂಟಿಗೆಹಳ್ಳಿ ಮಂಜುನಾಥ, ಭೋವಿಗುರುಪೀಠದ ಸಿಇಒ ಗೋವಿಂದಪ್ಪ, ಶಿವಮೊಗ್ಗದ  ಶಿವರುದ್ರಯ್ಯಸ್ವಾಮಿ, ಬಸವರಾಜ, ಶುಭಕರ, ರವಿ, ಕಾಶಿ, ಉಮೇಶ, ಅರುಣ್ ತಾ.ಪಂ.ಸದಸ್ಯ ತಿಮ್ಮಣ್ಣ, ವಿ.ಆರ್,ನಾಗರಾಜು ಇನ್ನಿತರರು ಭಾಗವಹಿಸಿದ್ದರು.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ನಗರದ ವಿ .ಪಿ. ಬಡಾವಣೆಯಲ್ಲಿ ಕನ್ಸರ್‍ವೆನ್ಸಿಗಳನ್ನು ಒತ್ತುವರಿ ಮಾಡಲಾಗಿದೆ ಇವುಗಳನ್ನು ತೆರವು ಮಾಡಿ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಪೌರಾಯುಕ್ತರಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ನಗರದ ವಿ.ಪಿ.ಬಡಾವಣೆಯ...

ಪ್ರಮುಖ ಸುದ್ದಿ

ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ರಿಲೀಸ್ ಮಾಡಿದ್ದು, ಕಳೆದ 24 ಗಂಟರಯಲ್ಲಿ ರಾಜ್ಯದಲ್ಲಿ 5041ಹೊಸ ಪ್ರಕರಣ ಪತ್ತೆಯಾಗಿದ್ದಾರೆ. ಕೊರೊನಾ ಕಂಟ್ರೊಲ್ ಗೆ ಮಾಡಿದ್ದ ಲಾಕ್ಡೌನ್ ವರ್ಕ್ಔಟ್ ಆಗಿದೆ. 48428 ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್,...

ಪ್ರಮುಖ ಸುದ್ದಿ

ಚಿತ್ರದುರ್ಗ,(ಜೂನ್15): ಜಿಲ್ಲೆಯಲ್ಲಿ ಕೋವಿಡ್-19 ವೈರಸ್‍ಗೆ ಸಂಬಂಧಿಸಿದಂತೆ ಮಂಗಳವಾರದ ವರದಿಯಲ್ಲಿ 95 ಜನರಿಗೆ ಸೋಂಕು ಇರುವುದು ದೃಢಪಟ್ಟಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 33,997ಕ್ಕೆ ಏರಿಕೆಯಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 16, ಚಳ್ಳಕೆರೆ 18, ಹಿರಿಯೂರು...

ಪ್ರಮುಖ ಸುದ್ದಿ

ಚಿತ್ರದುರ್ಗ, (ಜೂನ್.15) : ನಗರದ ಅಲೆಮಾರಿ, ಕೂಲಿ ಕಾರ್ಮಿಕರು, ಬಡವರು ಹಾಗೂ ನಿರ್ಗತಿಕರಿಗೆ ಭಾರತೀಯ ರೆಡ್ ಕ್ರಾಸ್ ಚಿತ್ರದುರ್ಗ ಜಿಲ್ಲಾ ಶಾಖೆ ವತಿಯಿಂದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಲಾಯಿತು. ನಗರದ ಪತ್ರಿಕಾ ಭವನದ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ ಎನ್ನಲು ಮನಸ್ಸು ತುಂಬಾ ಭಾರವಾಗುತ್ತಿದೆ. ಆ ದೇವರು ಯಾವ ತಪ್ಪನ್ನು ತನ್ನ ಮೇಲೆ ಹಾಕಿಕೊಳ್ಳೊಲ್ಲ. ಬದುಕೆಂಬ ರಂಗಶಾಲೆಯಲ್ಲಿ ನಾನಾ ಪಾತ್ರಗಳಿಗೆ ತಮಗೆ ತಿಳಿಯದಂತೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಮೋದಿ ನೇತೃತ್ವದ ಅಧಿಕಾರದಲ್ಲಿ ಬಡವರು, ದೀನ ದಲಿತರ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಆಹಾರ ಧಾನ್ಯಗಳ ಬೆಲೆ ಏರಿಕೆ ಜೊತೆಗೆ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಸಿ ಜನಸಾಮಾನ್ಯರನ್ನು ತತ್ತರಿಸುವಂತೆ ಮಾಡಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್‍ನಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15): ಅಗತ್ಯ ವಸ್ತುಗಳ ಬೆಲೆ ಏರಿಸಿ ಕೋಟಿ ಕೋಟಿ ಲೂಟಿ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮಂಗಳವಾರ ಗ್ರಾಮಾಂತರ ಪ್ರದೇಶಗಳಲ್ಲಿರುವ ಪೆಟ್ರೋಲ್ ಬಂಕ್‍ಗಳ ಎದುರು ಪ್ರತಿಭಟನೆ...

ಪ್ರಮುಖ ಸುದ್ದಿ

ಸುದ್ದಿಒನ್, ಚಿತ್ರದುರ್ಗ, (ಜೂ.15) : ಪೆಟ್ರೋಲಿಯಂ ಪ್ರಾಡಕ್ಟ್‌ಗಳನ್ನು ವ್ಯಾಟ್ ಅಡಿಗೆ ತಂದು ಗ್ರಾಹಕರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸುವಂತೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಿ.ಟಿ.ಜಗದೀಶ್ ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. ನಗರದ...

error: Content is protected !!