
ಚಿಕ್ಕಮಗಳೂರು: ವೀಕೆಂಡ್ ಮಸ್ತಿ, ಟ್ರಿಪ್ ಪ್ಲ್ಯಾನ್ ಅಂತ ಬಂದಾಗ ಕರ್ನಾಟಕದಲ್ಲಿ ಹೆಚ್ ಉ ಆಯ್ಕೆ ಮಾಡಿಕೊಳ್ಳುವ ಸ್ಥಳ ಚಿಕ್ಕಮಗಳೂರು, ಕೊಡಗು. ಇದೀಗ ಈ ಸ್ಥಳಗಳನ್ನು ಇನ್ನಷ್ಟು ಅಭಿವೃದ್ದಿ ಮಾಡುವುದಕ್ಕೆ ಸರ್ಕಾರ ಪಣ ತೊಟ್ಟಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ಎಷ್ಟು ಹಣ ಬೇಕಾದರೂ ಕೊಡ್ತೀನಿ ಅಂತಿದ್ದಾರೆ ಸಿಎಂ ಬೊಮ್ಮಾಯಿ ಅವರು.

ಚಿಕ್ಕಮಗಳೂರು ಉತ್ಸವವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ ಅವರು, ಕಾಫಿನಾಡಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಟೂರಿಸಂ ಮಾಡುವ ಅವಕಾಶವಿದೆ. ಅಡ್ವೆಂಚರ್ ಟೂರಿಸಂ ಚಿಕ್ಕಮಗಳೂರಿನಲ್ಲಿ ಬಿಟ್ಟರೆ ಬೇರೆಲ್ಲೂ ಮಾಡುವುದಕ್ಕೆ ಸಾಧ್ಯವಿಲ್ಲ. ಸಣ್ಣಪುಟ್ಟದ್ದನ್ನು ಬಿಟ್ಟು, ಮಾಸ್ಟರ್ ಪ್ಲ್ಯಾನ್ ಮಾಡಿ.ಅದಕ್ಕಾಗಿ ಎಷ್ಟು ಹಣ ಬೇಕಾದರೂ ಕೊಡುವುದಕ್ಕೆ ಸಿದ್ದನಿದ್ದೇನೆ. ಸ್ವಿಟ್ಜರ್ಲೆಂಡ್ ನಲ್ಲಿ ಯಾವ ರೀತಿ ಟೂರಿಸಂ ಬೆಳೆಸಿದ್ದಾರೆ ನೋಡಿ.
ಚಿಕ್ಕಮಗಳೂರು ಹಾಗೂ ಕೊಡಗಿನಲ್ಲೂ ಅದೇ ರೀತಿ ಬೆಳೆಸಬಹುದು ಎಂಬುದು ನನ್ನ ಇಚ್ಛೆ. ನಿಮಗೆ ಏನು ಬೇಕು, ಯಾವ ರೀತಿ ಸಪೋರ್ಟ್ ಬೇಕು ಅದನ್ನು ಮಾಡಲು ವ್ಯವಸ್ಥೆ ಮಾಡುತ್ತೇನೆ. ಚಿಕ್ಕಮಗಳೂರಿನ ಟೂರಿಸಂ ಬೆಳೆಸಿ. ಮುಂದಿನ ಉತ್ಸವ ಏರ್ ಸ್ಕ್ರಿಪ್ಟ್ ಇರಬೇಕು ಎಂದಿದ್ದಾರೆ.

GIPHY App Key not set. Please check settings