ಎಲ್ಲೆಡೆ ನಿಂಗೆ ದುಷ್ಮನ್ ಗಳಿದ್ದಾರೆ ; ರಿಷಬ್ ಶೆಟ್ಟಿಗೆ ದೈವ ನೀಡಿದ ಎಚ್ಚರಿಕೆ ಏನು..?

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ಯ ಕಾಂತಾರ ಚಾಪ್ಟರ್ 1ರಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರಾ ಚಾಪ್ಟರ್ 1 ನೋಡುವುದಕ್ಕಾಗಿಯೇ ಹಲವರು ಕಾಯುತ್ತಿದ್ದಾರೆ. ಇದರ ನಡುವೆ ರಿಷಬ್ ಶೆಟ್ಟಿ ಅವರಿಗೆ ದೈವ ಎಚ್ಚರಿಕೆಯೊಂದನ್ನ ನೀಡಿದೆ. ಅಕ್ಕ ಪಕ್ಕ ಇರುವ ಶತ್ರುಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹರಕೆ ಹೊತ್ತುಕೊಳ್ಳುವಂತೆ ಸೂಚನೆ ನೀಡಿದೆ.

ಮಂಗಳೂರಿನಲ್ಲಿ ನಿನ್ನೆ ತಡರಾತ್ರಿ ಪಂಜುರ್ಲಿ ನೇಮಕ ನಡೆದಿದೆ. ಈ ನೇಮಕದಲ್ಲಿ ರಿಷಬ್ ಶೆಟ್ಟಿ ತಮ್ಮ ಪತ್ನಿಯೊಂದಿಗೆ ಭಾಗಿಯಾಗಿದ್ದರು‌. ರಾತ್ರಿ 11ರಿಂದ ಬೆಳಗಿನ ಜಾವ 4 ಗಂಟೆಯವರೆಗೂ ನಡೆದಿದೆ. ವಾರಾಹಿ ಪಂಜುರ್ಲಿ ದೈವದಲ್ಲಿ ರಿಷಬ್ ಶೆಟ್ಟಿ ಭಕ್ತಿ ಭಾವದಿಂದ ನಡೆದುಕೊಂಡಿದ್ದಾರೆ. ಈ ವೇಳೆ ರಿಷಬ್ ಶೆಟ್ಟಿ ದೈವದ ಬಳಿ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇದೇ ವೇಳೆ ದೈವ ರಿಷಬ್ ಶೆಟ್ಟಿ ಅವರಿಗೆ ಒಂದಷ್ಟು ಸಲಹೆ ಸೂಚನೆಯನ್ನು ನೀಡಿದೆ.

ಜಗತ್ತಿನಲ್ಲೆಡೆ ನಿ‌ನಗೆ ದುಷ್ಮನ್ ಇದ್ದಾರೆ. ನಿನ್ನ ಸಂಸಾರವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ಯಶಸ್ವಿಯಾಗದಂತೆ ಹಾಳು ಮಾಡಲು ಭಾರೀ ಸಂಚು ನಡೆಯುತ್ತಿದೆ. ಈಗ ಗಂಡಾಂತರ ಬಂದಿತೆಂದು ಬಂದಿದ್ದೀಯಾ..? ನಿನ್ನ ನಂಬಿದ ದೈವ ಕೈ ಬಿಡಲ್ಲ. ಯಾರೋ ನಿನಗೆ ಕೇಡು ಬಗೆದಿದ್ದಾರೆ. ಅವರು ಯಾರೆಂದು ನಾನು ಹೇಳುವುದಿಲ್ಲ. ನಿನಗೆ ಕೇಡು ಆಗದಂತೆ ನಾನು ನೋಡಿಕೊಳ್ಳುತ್ತೇನೆ. ನನಗೆ ಸೇವೆ ನೀಡುವ ಹರಕೆ ಹೇಳಿಕೊ ಐದು ತಿಂಗಳಲ್ಲಿ ಒಳ್ಳೆಯದು ಮಾಡುತ್ತೇನೆ ಎಂದು ದೈವ ಭರವಸೆಯನ್ನು ನೀಡಿದೆ. ಬಳಿಕ ರಿಷಬ್ ಶೆಟ್ಟಿ ಕೂಡ ದೈವದ ಬಳಿ ಕೈಮುಗಿದು ಬೇಡಿಕೊಂಡು, ಹರಕೆ ಹೊತ್ತಿದ್ದಾರೆ.

suddionenews

Recent Posts

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ

ಈ ರಾಶಿಯವರು ಮದುವೆಗೆ ತುಂಬಾ ಹಠ ಮಾಡುವವರು ಹೇಳಿದ ಮಾತು ಕೇಳುವುದೇ ಇಲ್ಲ, ಈ ರಾಶಿಯವರ ಭಾಗ್ಯ ಎನ್ನಬೇಕೋ ಪುಣ್ಯ…

2 hours ago

ಪೋಕ್ಸೋ ಹಾಗೂ ಬಾಲ್ಯ ವಿವಾಹ ತಡೆಗೆ ನಾಲ್ಕು ಹಂತದಲ್ಲಿ ಜಾರಿ ತಂಡಗಳ ರಚನೆ : ಜಿಲ್ಲಾಧಿಕಾರಿ ಸೂಚನೆ

ಚಿತ್ರದುರ್ಗ.ಎಪ್ರಿಲ್.11: ಜಿಲ್ಲೆಯಲ್ಲಿ ಪೋಕ್ಸೋ ಹಾಗೂ ಬಾಲ್ಯ ವಿವಾಹ ಪ್ರಕರಣಗಳ ತಡೆಗೆ ಸಮಗ್ರ ಯೋಜನೆ ರೂಪಿಸುವುದರೊಂದಿಗೆ ಹಳ್ಳಿ, ಗ್ರಾಮ ಪಂಚಾಯಿತಿ, ತಾಲ್ಲೂಕು…

11 hours ago

ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿ ಹೇಳಿಕೆ : ಸೂಕ್ತ ಕ್ರಮಕ್ಕೆ ಬಿಜೆಪಿ ಒತ್ತಾಯ

ಸುದ್ದಿಒನ್, ದಾವಣಗೆರೆ, ಏಪ್ರಿಲ್. 11 : ಮಹಾನಗರ ಪಾಲಿಕೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ವಕ್ಫ್ ಬಿಲ್ ವಿರೋಧಿಸಿ ಪ್ರಚೋದನಕಾರಿಯಾಗಿ ಆಡಿದ…

12 hours ago

ಯತ್ನಾಳ್ ಪರವಾಗಿ ಮಾತನಾಡಿದ್ದ ಜಯಮೃತ್ಯುಂಜಯ ಸ್ವಾಮೀಜಿ; ಎಚ್ಚರಿಕೆ ನೀಡಿದ ಪಂಚಮಸಾಲಿ ಟ್ರಸ್ಟ್

ಹುಬ್ಬಳ್ಳಿ; ಇತ್ತೀಚೆಗಷ್ಟೇ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಉಚ್ಛಾಟನೆ ಮಾಡಿದೆ. ಆರು ವರ್ಷಗಳ ಕಾಲ ಪಕ್ಷದಿಂದ ಹೊರಗಿಟ್ಟಿದೆ. ಹೀಗಾಗಿ ಪಂಚಮಸಾಲಿ…

12 hours ago

ಹಿರಿಯೂರಿನಲ್ಲಿ ಆಲಿಕಲ್ಲು ಸಹಿತ ಮಳೆಯ ಆರ್ಭಟ : ಬೆಳೆ ಹಾನಿ

ಸುದ್ದಿಒನ್, ಹಿರಿಯೂರು, ಏಪ್ರಿಲ್. 11 : ನಗರ ಪ್ರದೇಶ ಹಾಗೂ ತಾಲೂಕಿನ ವಿವಿಧ ಕಡೆಗಳಲ್ಲಿ ಗಾಳಿ, ಗುಡುಗು, ಮಿಂಚು ಸೇರಿದಂತೆ…

12 hours ago

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅವಿರೋಧ ಆಯ್ಕೆ ; ಯಾರೀ ನೈನಾರ್ ನಾಗೇಂದ್ರನ್..?

    ಚೆನ್ನೈ; ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಣ್ಣಾಮಲೈ ರಾಜೀನಾಮೆ ಕೊಟ್ಟ ಬಳಿಕ ಇದೀಗ ಅವಿರೋಧ ಆಯ್ಕೆ ಮಾಡಲಾಗಿದೆ.…

13 hours ago