ಆಗಸ್ಟ್ ನಲ್ಲಿ ಪ್ರತಿ ಜಿಲ್ಲೆಯಲ್ಲೂ ಯೋಗ : ಸಚಿವ ಕೆ ಸಿ ನಾರಾಯಣಗೌಡ

suddionenews
1 Min Read

ಬೆಂಗಳೂರು: ಆಜಾದಿ ಕಾ‌ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರಿಡಾ ಇಲಾಖೆಯಿಂದ 31 ಜಿಲ್ಲೆಗಳಲ್ಲಿ ಯೋಗಥಾನ್ ಆಯೋಜನೆ ಮಾಡಲಾಗಿದೆ. ಮಾನವೀಯತೆಗಾಗಿ ಯೋಗ ಘೋಷಣೆಯಡಿ ಈ ವರ್ಷ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮಾಡಲಾಗಿದೆ ಎಂದು ಸಚಿವ ಕೆ.ಸಿ ನಾರಾಯಣಗೌಡ ಹೇಳಿದ್ದಾರೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಿದ್ದರು. ಯೋಗದ ಮಹತ್ವ ಸಾರಲು ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ.

28-08-2022 ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 5 ಲಕ್ಷ ಜನ ಸೇರಿ ಯೋಗಥಾನ್(ಯೋಗ ಮಾಡುವುದು) ಮಾಡಲಾಗುತ್ತದೆ. 5 ಲಕ್ಷ ಜನ ಸೇರಿ ಯೋಗ ಮಾಡುವ ಮೂಲಕ ಗಿನ್ನೀಸ್ ವಿಶ್ವದಾಖಲೆ ಮಾಡಲು ಪ್ರಯತ್ನ. ಯೋಗಕ್ಕೆ ಕ್ರೀಡೆಯ ಮಾನ್ಯತೆ ನೀಡಿ,ಇದೇ‌ ಮೊದಲ ಬಾರಿಗೆ ಖೇಲೋ‌ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನಲ್ಲಿ ಅಳವಡಿಸಲಾಗಿತ್ತು. ಯೋಗವನ್ನು ಮನೆ ಮನೆ ತಲುಪಿಸುವ ಉದ್ದೇಶ. ಈ ಕಾರ್ಯಕ್ರಮಕ್ಕೆ ನಟ ಅರವಿಂದ್ ರಮೇಶ್ ಬ್ಯಾಂಡ್ ಅಂಬಾಸಿಡರ್ ಆಗಿ, ರಾಯಭಾರಿಯಾಗಿದ್ದಾರೆ.

ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿದೆ ಜೂನ್ 1 ರಿಂದ ನವೆಂಬರ್ ರವರೆಗೂ ಜಿಲ್ಲಾ ಹಾಗೂ ತಾಲ್ಲೂಕು ಕ್ರೀಡಾಂಗಣದಲ್ಲಿ ಬೆಳಿಗ್ಗೆ 6 ರಿಂದ8 ಯವರಿಗೆ ಯೋಗಭ್ಯಾಸಕ್ಲೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ದೇಶದ ವಿವಿಧ ಭಾಗಗಳಿಂದ ಪ್ರೋತ್ಸಾಹ ಸಿಗುತ್ತಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *