Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕನಕದಾಸರು ರಚನೆ ಮಾಡಿದ ಕೃತಿಗಳು ಎಲ್ಲಾ ವರ್ಗದವರಿಗೂ ಅನ್ವಯ : ಕೆ.ಎಸ್.ನವೀನ್

Facebook
Twitter
Telegram
WhatsApp

ವರದಿ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.22) :  ಕನಕದಾಸರು ರಚನೆ ಮಾಡಿದಂತ ಕೃತಿಗಳು ಬರೀ ಹಿಂದುಳಿದ ವರ್ಗ, ತುಳಿತಕ್ಕೆ ಒಳಗಾದ ಜನತೆಗೆ ಮಾತ್ರವಲ್ಲದೆ ಎಲ್ಲಾ ವರ್ಗದವರಿಗೂ ಸಹಾ ಅನ್ವಯವಾಗುವಂತೆ ರಚನೆ ಮಾಡಿದ್ದಾರೆ. ಇವುಗಳ ಆಧ್ಯಯನವನ್ನು ಮಾಡುವುದರ ಮೂಲಕ ಕನಕದಾಸರಿಗೆ ನಮನ ಸಲ್ಲಿಸಬೇಕಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶೀ ಕೆ.ಎಸ್.ನವೀನ್ ತಿಳಿಸಿದರು.

ಭಾರತೀಯ ಜನತಾ ಪಾರ್ಟಿಯ ಪಕ್ಷದ ಕಚೇರಿಯಲ್ಲಿ ಓಬಿಸಿ ಮೋರ್ಚಾದವತಿಯಿಂದ ಹಮ್ಮಿಕೊಂಡಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನಕದಾಸರು ಚಿಕ್ಕ ವಯಸ್ಸಿನಿಂದಲೇ ಕಷ್ಟಗಳನ್ನು ಅನುಭವಿಸುವುದರ ಮೂಲಕ ಅವುಗಳನ್ನು ಗುರುಗಳ ಮಾರ್ಗದರ್ಶನದಲ್ಲಿ ಕೃತಿಗಳನ್ನು ರಚನೆ ಮಾಡಿ ನಮಗೆ ನೀಡಿದ್ದಾರೆ. ಸಮಾಜದ ಮಧ್ಯ ಇದ್ದ ಮೇಲು-ಕೀಳನ್ನು ಸ್ವಂತಃ ಅನುಭವಿಸಿದ ಕನಕದಾಸರು, ಅವುಗಳ ನಿವಾರಣೆಗೆ ತಮ್ಮ ಕೃತಿಯಲ್ಲಿ, ಪದಗಳಲ್ಲಿ ಹೇಳಿದ್ದಾರೆ ಎಂದರು.

ಕನಕದಾಸರಿಗೆ ಕೃಷ್ಣನ ಮೇಲೆ ಭಕ್ತಿ ಎಷ್ಟರ ಮಟ್ಟಿಗೆ ಇತ್ತು ಎಂಬುದನ್ನು ಈಗಲೂ ಸಹಾ ಉಡುಪಿಯಲ್ಲಿ ಕಾಣಬಹುದಾಗಿದೆ. ಕೃಷ್ಣನ ದರ್ಶನ ಮಾಡಲು ಹೋದ ಕನಕರನ್ನು ಅಲ್ಲಿನ ಪುರೋಹಿತಶಾಹಿ ಬಿಡದೇ ಹಿಂಸೆ ಮಾಡಿದಾಗ ತಮ್ಮ ಕೀರ್ತನೆಯ ಮೂಲಕ ಆತನನ್ನು ತನ್ನ ಕಡೆಗೆ ತಿರುಗಿಸಿಕೊಂಡಿದ್ದಕ್ಕೆ ಈಗಲೂ ಸಹಾ ಅಲ್ಲಿ ಸಾಕ್ಷಿ ಇದೆ. ಇಂತಹ ಮಹಾನ್ ದೈವ ಭಕ್ತನಾದ ಕನಕದಾಸರು ತಮ್ಮ ಕೃತಿಗಳಲ್ಲಿ ಹಲವಾರು ಸಂದೇಶವನ್ನು ನೀಡಿದ್ದಾರೆ. ಅವುಗಳನ್ನು ನಾವುಗಳು ಅಧ್ಯಯನ ಮಾಡಬೇಕಿದೆ ಎಂದು ನವೀನ್ ತಿಳಿಸಿದರು.

ಜಿಲ್ಲಾಧ್ಯಕ್ಷ ಮುರುಳಿ ಮಾತನಾಡಿ ಕನಕದಾಸರ ಬಗ್ಗೆ ಎಲ್ಲರು ತಿಳಿಯಬೇಕೆಂದು ಶಾಲಾ ಹಂತದಲ್ಲಿ ಮಕ್ಕಳು ಸಾರ್ವಜನಿಕರು ತಿಳಿಯಬೇಕೆಂದು ಯೋಜನೆಯನ್ನು ಬಿಜೆಪಿ ಸರ್ಕಾರ ಕನಕ ಜಯಂತಿಯನ್ನು ಆಚರಣೆಗೆ ತಂದಿತು. ಕನಕದಾಸ ಕೃತಿಗಳನ್ನು ಅಧ್ಯಯನ ಮಾಡಿದ ಸಮಾಜದ ಒಳಗಿನ ವ್ಯಕ್ತಿಗಳು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬೇರೆಯವರಿಗೆ ತಿಳಿಸುವ ಕಾರ್ಯವನ್ನು ಮಾಡಿದ್ದಾರೆ ಎಂದರು.

ಸಿದ್ದೇಶ್ ಯಾದವ್ ಮಾತನಾಡಿ, ನಮ್ಮ ಪಕ್ಷದಲ್ಲಿ ದಾರ್ಶನಿಕರ, ಮಹಾನ್ ನಾಯಕರ ಸಂದೇಶವನ್ನು ಅರ್ಥ ಮಾಡಿಕೊಂಡು ಅದನ್ನು ನಮಗೆ ತಿಳಿಸಿದ್ದಾರೆ. ಅದನ್ನು ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ. ತುಳಿತಕ್ಕೆ ಒಳಗಾದವರನ್ನು ಮೇಲಕ್ಕೆ ಎತ್ತುವುದು ಹೇಗೆ, ಜಾತಿಗಳ ಮಧ್ಯ ಸಾಮರಸ್ಯವನ್ನು ಮೂಡಿಸುವುದು ಹೇಗೆ ಎಂಬುದನ್ನು ತಿಳಿಸಿ ಕೊಟ್ಟಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಇಟ್ಟುಕೊಂಡು ನಾವುಗಳು ದಿನ ನಿತ್ಯ ಕಲಿಯುವ ವಿದ್ಯಾರ್ಥಿಗಳ ರೀತಿಯಲ್ಲಿ ಇರಬೇಕಿದೆ. ಬಿಜೆಪಿ ಕಾರ್ಯಕರ್ತರು ಮಾಮೂಲಿ ಕಾರ್ಯಕರ್ತರಲ್ಲಿ ವಿಶೇಷವಾದ ಪರಿಣಿತಿಯನ್ನು ಹೊಂದಬೇಕಿದೆ. ವಿಚಾರಗಳನ್ನು ಅರ್ಥ ಮಾಡಿಕೊಂಡು ಒಂದೊಂದು ವಿಷಯದಲ್ಲಿ ಪರಿಣಿತಿಯನ್ನು ಹೊಂದಬೇಕಿದೆ ಎಂದರು.

ಓಬಿಸಿ ಜಿಲ್ಲಾಧ್ಯಕ್ಷ ಪ್ರವೀಣ್ ಕುಮಾರ್ ಮಾತನಾಡಿ, ಈಗ ನಮ್ಮಲ್ಲಿ ಎಸ್.ಸಿ.,ಎಸ್.ಟಿ.,ಓ.ಬಿ.ಸಿ.ಎಂಬ ಭಾವನೆ ಇದೆ. ಇದು ಮುಂದಿನ ದಿನದಲ್ಲಿ ಇರಬಾರದು, ಇದನ್ನು ಸರ್ಕಾರ ತೆಗೆಯುವುದಕ್ಕಿಂತ ನಮ್ಮ ಮನಸ್ಸಿನಿಂದ ತೆಗೆಯಬೇಕಿದೆ, ಎಲ್ಲರನ್ನು ಒಂದೇ ರೀತಿಯಲ್ಲಿ ಕಾಣಬೇಕಿದೆ ಆಗ ಮಾತ್ರ ಇದರ ನಿವಾರಣೆ ಸಾಧ್ಯವಿದೆ. ಇದನ್ನು ನಮ್ಮ ಜೀವನದಲ್ಲಿ ಆಳವಡಿಸಿಕೊಂಡಾಗ ಸ್ವಾಭಾವಿಕವಾಗಿ ಸಮಾಜದಿಂದ ಅದು ಹೋಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬದರಿನಾಥ್, ಮುಖಂಡರಾದ ಅನಿತ್, ಪ್ರಧಾನ ಕಾರ್ಯದರ್ಶೀ ಸುರೇಶ್ ಸಿದ್ದಾಪುರ, ಜಿಲ್ಲಾ ಉಪಾಧ್ಯಕ್ಷ ಸಂಪತ್ ಕುಮಾರ್, ವೆಂಕಟೇಶ್ ಯಾದವ್, ನಗರಸಭಾ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ, ದಗ್ಗೆ ಶಿವಪ್ರಕಾಶ್, ಚಂದ್ರಿಕಾ ಲೋಕನಾಥ್, ಶಾಂತಮ್ಮ, ಭಾರ್ಗವಿ ದ್ರಾವಿಡ್, ಶೈಲಜಾ ರೆಡ್ಡಿ, ನಂದಿ ನಾಗರಾಜ್, ತಿಮ್ಮಣ್ಣ, ನಾಗರಾಜ್, ಕಿರಣ್ ಕುಮಾರ್, ವೆಂಕಟೇಶ್, ಕವನ ಅನುಸೂಯ ಸೇರಿದಂತೆ ಹಲವಾರು ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅದ್ದೂರಿಯಾಗಿ ಜರುಗಿದ ಬೆಳಗೆರೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729   ಚಳ್ಳಕೆರೆ, ಏಪ್ರಿಲ್. 25 : ತಾಲೂಕಿನ ಬೆಳಗೆರೆ ಹಾಗೂ ನಾರಾಯಣಪುರದ ಮಧ್ಯ ಕೆರೆ  ಏರಿ ಬುಡದಲ್ಲಿ ನೆಲೆಸಿರುವ

ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು

ಚಿತ್ರದುರ್ಗ. ಏ.25 : ಗುಡುಗು, ಸಿಡಿಲು ಬಡಿತ ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿ ತಿಳಿಸಿದ ನಿಯಮಗಳನ್ನು ಸಾರ್ವಜನಿಕರು ಚಾಚು ತಪ್ಪದೆ ಪಾಲನೆ ಮಾಡಬೇಕು

ಕಾಯಕ ಸಮುದಾಯ ಬಿ.ಎನ್.ಚಂದ್ರಪ್ಪ, ಪ್ರಭಾ ಮಲ್ಲಿಕಾರ್ಜನ್ ರವರನ್ನು ಬೆಂಬಲಿಸಲಿ : ಎನ್.ಡಿ.ಕುಮಾರ್ ಮನವಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಏ.25 : ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಾದ ಬಿ.ಎನ್.ಚಂದ್ರಪ್ಪ, ಮತ್ತು ದಾವಣಗೆರೆ ಕ್ಷೇತ್ರದಲ್ಲಿ ಪ್ರಭಾ ಮಲ್ಲಿಕಾರ್ಜನ್ ಅವರನ್ನು

error: Content is protected !!