in ,

ಬದುಕಿನಲ್ಲಿ ಹೆಸರುಳಿಸುವಂತ ಕೆಲಸ ಮತ್ತು ಸಾಧನೆ  ಮಾಡಬೇಕು : ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

suddione whatsapp group join

ರಾಜಸ್ಥಾನ, (ನ.30) : ಮಾನವ ಬದುಕಿನಲ್ಲಿ ಹೆಸರುಳಿಸುವಂತ ಕೆಲಸ ಮತ್ತು ಸಾಧನೆ  ಮಾಡಬೇಕು ಎಂದು ಭೋವಿ ಗುರುಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.

ರಾಜಸ್ಥಾನದ ಪಾಲಿ ಜಿಲ್ಲೆಯ ಇಂದಿರಾನಗರದಲ್ಲಿ ಮಂಗಳವಾರ ಶ್ರೀ ಹಂಸರಾಮ್ ಜೀ ಓಡ್ ಅವರ ಅಮೃತ ಶಿಲೆಯ ಕಲಾಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಜೀವನದಲ್ಲಿ ಹಿರಿಯರು ಉಳಿಸಿದ ಹೆಸರುನ್ನು ಅವರ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಂಡು  ಬೆಳೆಸಿಕೊಳ್ಳಬೇಕು.

 

ಸಂಸ್ಕಾರವಂತ ಕುಟುಂಬಗಳಿಂದ ಒಳ್ಳೆಯ ಸಮಾಜ ನಿರ್ಮಾಣಕ್ಕೆ ಬುನಾದಿಯಗುತ್ತದೆ. ತಂದೆ ಮತ್ತು ಅಜ್ಜನ ಹೆಸರಿನ ಆಚೆ ಕುಟುಂಬ ಕಲ್ಯಾಣಕ್ಕೆ ಗುಣ ಸದ್ಗುಣಗಳು ಧಾರೆಯೆರೆದ ಸಂತತಿಯನ್ನು ನೆನೆಪಿಪನಲ್ಲಿ ಚಿರಾಸ್ಥಾಯಿಯಾಗಿ ಉಳಿಯಲು ಈ ರೀತಿ ಸ್ಮರಣ ಮಂದಿರಗಳಿಂದ ಸಾಧ್ಯ. ಕೇವಲ ಪುತ್ಥಳಿಯಾಗದೆ ವಂಶಸ್ಥರಿಗೆ ಸದ್ಗುಣಗಳು ಎಚ್ಚರಿಸುವ ಮಂದಿರಗಳಿಗಿದ್ದಾವೆ. ವೃದ್ದಾಶ್ರಮ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ, ಹಿರಿಯರ ಸ್ಮರಣಾರ್ಥ ಮಂದಿರಗಳನ್ನು ನಿರ್ಮಿಸುತ್ತಿರುವ ಮಕ್ಕಳು ಜಗತ್ತಿಗೆ ಆದರ್ಶ. ಮಗನಿಂದ ಜಗತ್ತಿನಲ್ಲಿ ಅಮರತ್ವ ಪಡೆಯುವ ತಂದೆಯರುಗಳು ಪುಣ್ಯವಂತರು.

ಶಿಕ್ಷಣಕ್ಕೆ ಬದುಕು ಬದಲಾವಣೆ ಮಾಡುವ ಶಕ್ತಿಯಿದೆ ಹಾಗಾಗಿ ಹೆಚ್ಚು  ಸಮಯ ಕಲಿಕೆಗೆ ನೀಡಬೇಕು. ಓಡ್ ಸಮುದಾಯ  ಇನ್ನೂ ಶಿಕ್ಷಣಕಡೆ ಗಮನ ಹರಿಸದೆ ಕೂಲಿಯಿಂದ ಜೀವನ ನಡೆಸುವ ಹಳ್ಳಿಗಳಯ ಜನತೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಮುಂದಿನ ಪೀಳಿಗೆಯ ಯುವಕರ ಭವಿಷ್ಯದ  ದೃಷ್ಟಿಯಿಂದ ಕಡ್ಡಾಯವಾಗಿ ವಿದ್ಯಾವಂತರಾಗಿ ಎಂದು ಒತ್ತಾಯಿಸಿದರು.

ಗುರುಗಳು ಶರೀರಿಕವಾಗಿ ಇಲ್ಲದಿದ್ದರೂ ಒಳ್ಳೆಯ ಶಿಷ್ಯ ಇದ್ದರೆ ಗುರುವಿನ ಚಿಂತನೆ ಮತ್ತು ಮೌಲ್ಯಗಳನ್ನು ಉಳಿಸಿ ಬೆಳೆಸುತ್ತಾನೆ. ಅಂತಹ ಶಿಷ್ಯರು ಇದ್ದರೆ ಗುರುವಿನ ಅಸ್ತಿತ್ವದಲ್ಲಿ ಇದ್ದಂತೆ. ಹೆಸರು ಉಳಿಸಲು ಸಾಧನೆ ಮಾಡಬೇಕು. ಹೆಸರು ಬೆಳೆಸಲು ಅತ್ಯುತ್ತಮ ಸಾಧಕರ ವರ್ಗಬೇಕು. ಗುರುವಿನ ಸಾಧನೆಗಳನ್ನು ಒಂದು ಕಾಲಘಟ್ಟದಿಂದ ಮತ್ತೊಂದು ಕಾಲಘಟ್ಟಕ್ಕೆ ತಲುಪಿಸಲು ಅತ್ಯುತ್ತಮ ಉತ್ತರಾಧಿಕಾರಿಗಳ ಶಿಷ್ಯೋತ್ತಮರಿಂದ ಮಾತ್ರ ಸಾಧ್ಯ. ಹಾಗಾಗಿ ಬುದ್ಧ ಬಸವಖ ಅಂಬೇಡ್ಕರ್ ಪೆರಿಯಾರ್ ಅವರ ವಿಚಾರಗಳನ್ನು ಕಾಲ ಕಾಲಕ್ಕೆ ಪಸರಿಸುತ್ತ ಬಂದ ಶಿಷ್ಯರಿಂದ ಸರ್ವೋತ್ತಮರಲ್ಲಿ ಸರ್ವೋತ್ಕೃಷ್ಠರಾಗಿ ಕಾಣುತ್ತಾರೆ ಎಂದು ತಿಳಿಸಿದರು.

ಶಾಸಕ ಜೋದ ರಾಮ್ ಮಾತನಾಡಿ, ಓಡ್ ಸಮುದಾಯ ಸಂಘಟಿತವಾಗಿ ಒಗ್ಗೂಡಬೇಕು. ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಒಳ್ಳೆಯ ಕುಟುಂಬ, ಸುಸಜ್ಜಿತ ಗ್ರಾಮಗಳ ನಿರ್ಮಾಣ ಮಾಡಿಕೊಳ್ಳಿ . ಇಲ್ಲಿನ ಮಕ್ಕಳು ಅಡ್ಡದಾರಿ ಹಿಡಿಯುತ್ತಿದ್ದಾರೆ ಎಂಬ ವಿಚಾರ ತಿಳಿಯಿತ್ತು, ಅಂತಹವರು ಒಳ್ಳೆಯ ದಾರಿಯಲ್ಲಿ ನಡೆಯಬೇಕು. ಒಳ್ಳೆಯ ಜೀವನ ನಡೆಸಿರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಓಸಿಸಿಐ ರಾಷ್ಟ್ರೀಯ ಅಧ್ಯಕ್ಷ ರವಿಮಾಕಳಿ, ಕರ್ನಾಟಕ  ಓಸಿಸಿಐ ರಾಜ್ಯಾಧ್ಯ ಆನಂದಪ್ಪ, ಕರ್ನಾಟಕ  ಓಸಿಸಿಐ ಪ್ರಧಾನ ಕಾರ್ಯದರ್ಶಿ ಎಲ್. ಶ್ರೀಧರ್, ದೆಹಲಿ ಸುರೇಶ್ ಓಡ್, ಗುಜರಾತ್ ಲಾಲ್ ಚಂದ್, ರಾಜಸ್ಥಾನದ ಪ್ರೇಮ್ ಓಡ್, ಮಹಾರಾಷ್ಟ್ರದ ಮನೋಹರ್, ಸರ್ಕಾರಿ ನೌಕರರು ಸಂಘದ ಜಿಲ್ಲಾಧ್ಯಕ್ಷ ಕೆ. ಮಂಜುನಾಥ್, ಬಿಇಓ ವೆಂಕಟೇಶಪ್ಪ, ಎಸ್ ಜೆ   ಎಸ್ ಜ್ಞಾನಪೀಠ ನಿರ್ದೇಶಕರಾದ ಡಿ.ಸಿ. ಮೋಹನ್, ಹನುಮಂತಪ್ಪ ಗೋಡೆಮನೆ, ಈ. ಮಂಜುನಾಥ, ವೈ. ಪ್ರಕಾಶ್, ಹೆಚ್. ಆಂಜನೇಯ,  ಮಾಜಿ ನಗರ ಸಭೆ ಅಧ್ಯಕ್ಷ ಟಿ. ಚಂದ್ರಶೇಖರ್, ನಗರಸಭೆ ಸದಸ್ಯ ತಿಮ್ಮಣ್ಣ, ಸಿಇಒ ಗೌನಹಳ್ಳಿ ಗೋವಿಂದಪ್ಪ, ಹನುಮಂತಪ್ಪ ಬಿ.ಕೆ,  ದೇವರಾಜು. ಟಿ, ವೈ. ವೆಂಕಟಪತಿ, ಜೈಶಂಕರ್, ಶ್ರೀನಿವಾಸ ಮತ್ತಿತರರು ಉಪಸ್ಥಿತರಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

291 ಹೊಸ ಸೋಂಕಿತರು.. 8 ಸಾವು..!

ಈ ರಾಶಿಯವರಿಗೆ ಧರ್ಮದರ್ಶಿ ಗುರುಗಳಿಂದ ನಿಮ್ಮ ಮಕ್ಕಳಿಗೆ ಬುದ್ದಿ ಮಾತು..