ಬೆಂಗಳೂರು, (ಜುಲೈ 17) : ಮಹಿಳಾ ಬರಹಗಾರರನ್ನು ಸಮಕಾಲೀನ ವಿಮರ್ಶೆ ಕಡೆಗಣಿಸಿದೆ ಎಂದು ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅಭಿಪ್ರಾಯಪಟ್ಟರು.
‘ಬಹುರೂಪಿ’ ಪ್ರಕಾಶನ ಹಮ್ಮಿಕೊಂಡಿದ್ದ ಮಧುರಾಣಿ ಎಚ್ ಎಸ್ ಅವರ ಕವನ ಸಂಕಲನ ‘ನೀಲಿ ಚುಕ್ಕಿಯ ನೆರಳು’ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ನಾವೆಲ್ಲರೂ ಓದುವ ಕಾಲಕ್ಕೆ ಮಹಿಳಾ ಬರಹಗಾರರು ಸಾಕಷ್ಟು ಸಂಖ್ಯೆಯಲ್ಲಿ ಬರೆಯುತ್ತಿದ್ದರು. ಆದರೆ ಕನ್ನಡ ವಿಮರ್ಶೆ ಅವರನ್ನು ಚರ್ಚಿಸುತ್ತಲೇ ಇರಲಿಲ್ಲ. ಈಗಲೂ ಸಹಾ ಮಹಿಳಾ ಬರಹಗಾರರ ಸಂಖ್ಯೆ ವಿಫುಲವಾಗಿದೆ. ಆದರೂ ವಿಮರ್ಶೆ ಅವರ ಬಗ್ಗೆ ಸಾಕಷ್ಟು ಗಮನ ಹರಿಸಿಲ್ಲ ಎಂದರು. ಮಧುರಾಣಿ ಅವರ ಕವಿತೆಗಳಲ್ಲಿನ ಶಕ್ತಿ ಅಗಾಧವಾದದ್ದು ಎಂದರು.
ಕವಯತ್ರಿ, ಅನುವಾದಕಿ ಹೇಮಾ ಎಸ್ ಅವರು ಮಾತನಾಡಿ ಮಧುರಾಣಿ ಅವರ ಕವಿತೆಗಳ ಆತ್ಮವಿಶ್ವಾಸ ಬೆರಗು ಹುಟ್ಟಿಸುತ್ತದೆ. ಅವರ ಕವಿತೆಗಳುದ್ದಕ್ಕೂ ಅದು ಹರಡಿಕೊಂಡಿದೆ. ಅವರ ಕವಿತೆಗಳ ದನಿಯ ಪ್ರಭಾವ ಸಾಕಷ್ಟು ಕಾಲ ಕನ್ನಡ ಕವಿತೆಗಳ ಮೇಲಿರುತ್ತದೆ ಎಂದರು.
ಬರಹಗಾರ ಜಿ ಎನ್ ಮೋಹನ್ ಮಾತನಾಡಿ ಮಧುರಾಣಿ ಅವರ ಕವಿತೆಗಳು ದಿಟ್ಟ ದನಿಯನ್ನು ಹೊಂದಿವೆ. ಅವರ ಕವಿತೆಗಳಲ್ಲಿನ ಹೊಸತನ, ನುಡಿಗಟ್ಟುಗಳು ಬೆರಗು ಹುಟ್ಟಿಸುತ್ತವೆ. ಮಹಿಳಾ ಕಾವ್ಯ ಸಾಗುತ್ತಿರುವ ದಾರಿಗೆ ಈ ಕವನ ಸಂಕಲನ ಕನ್ನಡಿ ಹಿಡಿಯುತ್ತದೆ ಎಂದರು.
ಕೃತಿ: ನೀಲಿ ಚುಕ್ಕಿಯ ನೆರಳು
ಕವಿ: ಮಧುರಾಣಿ ಎಚ್ ಎಸ್
ಪ್ರಕಾಶನ: ಬಹುರೂಪಿ
ಬೆಲೆ: ರೂ 120
ಬಹುರೂಪಿ ಪ್ರಕಾಶನ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ, ಹಿರಿಯ ಪತ್ರಕರ್ತ ಜೋಗಿ ಅವರು ಮಧುರಾಣಿ ಎಚ್ ಎಸ್ ಅವರ ‘ನೀಲಿ ಚುಕ್ಕಿಯ ನೆರಳು’ ಕೃತಿ ಬಿಡುಗಡೆ ಮಾಡಿದರು. ಚಿತ್ರದಲ್ಲಿ ಬಹುರೂಪಿಯ ಜಿ ಎನ್ ಮೋಹನ್, ವಿಮರ್ಶಕಿ ಹೇಮಾ ಎಸ್ ಇದ್ದಾರೆ.
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ,ಫೆಬ್ರವರಿ. 07…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ.ಫೆ.07: ವಿದ್ಯಾರ್ಥಿಗಳು ತಮ್ಮ ಶಿಕ್ಷಣದ ಜತೆಗೆ ದೇಶದ, ರಾಜ್ಯದ ಸಾಂಸ್ಕøತಿಕ ರಾಯಬಾರಿಗಳಾಗಿ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಕೊಂಡ್ಯೊಯುವ ಕೆಲಸ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಶಿಕ್ಷಣ ಇಲಾಖೆಗೆ ಈಗಾಗಲೇ 13 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದ್ದು, ಹೊಸದಾಗಿ 15…
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…