in

ಮಹಿಳೆಯರು ಕೆಲಸದ ಒತ್ತಡದಲ್ಲಿ ಆರೋಗ್ಯದ ಬಗ್ಗೆಯೂ ಗಮನ ನೀಡಬೇಕು : ಡಾ.ಸುಧಾ

suddione whatsapp group join

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 87220 22817

ಚಿತ್ರದುರ್ಗ,(ಮಾ.11) :  ಮಹಿಳೆಯರು ತಮ್ಮ ಮನೆಗೆಲಸದ ನಡುವೆ ತಮ್ಮ ಆರೋಗ್ಯದ ಬಗ್ಗೆಯೂ ಸಹಾ ಗಮನ ನೀಡಬೇಕಿದೆ. ನನಗೆ ವಯಸ್ಸಾಗಿದೆ ಎಂದು ಆರೋಗ್ಯವನ್ನು ಉದಾಸೀನ ಮಾಡಬೇಡಿ ಎಂದು ಡಾ.ಸುಧಾ ಮಹಿಳೆಯರಿಗೆ ಕಿವಿ ಮಾತು ಹೇಳಿದರು.

ಇನ್ನರ್ ವೀಲ್ ಕ್ಲಬ್, ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಿಳಾ ಘಟಕ, ಅಕ್ಕನ ಬಳಗ, ವಾಸವಿ ಮಹಿಳಾ ಸಂಘ ಮತ್ತು ಇನ್ನರ್‍ವೀಲ್‍ಕ್ಲಬ್ ಚಿತ್ರದುರ್ಗ ಪೋರ್ಟೊವತಿಯಿಂದ ನಗರದ ಎಸ್,ಆರ್.ಬಿ.ಎಂ.ಎಸ್. ರೋಟರಿ ಬಾಲಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ಮನೆಗೆಲಸ ಸೇರಿದಂತೆ ಇತರೆ ಕೆಲಸಗಳನ್ನು ಒತ್ತಡದಲ್ಲಿ ಮಾಡುತ್ತಾರೆ. ತಮ್ಮ ಆರೋಗ್ಯದ ಬಗ್ಗೆ ಗಮನವನ್ನು ನೀಡುವುದಿಲ್ಲ, ಬೇರೆಯವರ ಆರೋಗ್ಯದ ಬಗ್ಗೆ ಗಮನವನ್ನು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಗಮನ ನೀಡದೇ ಉದಾಸೀನವನ್ನು ಮಾಡುತ್ತಾರೆ ಏನಾದರೂ ಅದರೆ ನಮಗೆ ಏನು ಆಗಿಲ್ಲ ಎಂದು ಹೇಳುತ್ತಾ ಮನೆಗೆಲಸವನ್ನು ಮಾಡುತ್ತಾಳೆ, ಇದರಿಂದ ಮುಂದೆ ತೊಂದರೆಗೆ ಒಳಗಾಗುವರು ನೀವೇ ಇದರಿಂದ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವಂತೆ ಮನವಿ ಮಾಡಿದರು.

ಮಹಿಳೆಯರು ವಯಸ್ಸಾದ ಮೇಲೆ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುವುದಿಲ್ಲ, ಇದು ತಪ್ಪು ಕಾಲ ಕಾಲಕ್ಕೆ ಆರೋಗ್ಯದ ಬಗ್ಗೆ ತಪಾಸಣೆಯನ್ನು ಮಾಡಿಸಿಕೊಳ್ಳುವುದರ ಮೂಲಕ ಆರೋಗದ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ.

ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಲು ದಿನ ಅರ್ಧ ಗಂಟೆಯ ಕಾಲ ವ್ಯಯ ಮಾಡಿ ಇದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದ ಅವರು, ನಿಮ್ಮ ದಿನ ನಿತ್ಯದ ಆಹಾರದಲ್ಲಿ ಮೈದಾದ ಬಳಕೆಯನ್ನು ಅದಾಷ್ಟು ಕಡಿಮೆ ಮಾಡಿ, ಇದರೊಂದಿಗೆ ಬಿಳಿ ವಸ್ತುಗಳಾದ ಸಕ್ಕರೆ, ಉಪ್ಪು, ಪಾಲಿಷ್ ಮಾಡಿದ ಅಕ್ಕಿ, ಗೋಧಿ ಹಾಲನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ತರಕಾರಿ, ಸೊಪ್ಪು, ರಾಗಿ, ಜೋಳಯನ್ನು ಉಪಯೋಗದಲ್ಲಿ ಹೆಚ್ಚಳ ಮಾಡಿ ಪ್ರತಿ ದಿನ ಅರ್ಧ ಗಂಟೆ ವ್ಯಯಾಮ ಅಥವಾ ಯೋಗವನ್ನು ಮಾಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಡಾ.ಸುಧಾ ತಿಳಿಸಿದರು.

ಇಂದಿನ ದಿನಮಾನದಲ್ಲಿ ಹೆರಿಗೆ ಸಮಯದಲ್ಲಿ ಸಾಕಷ್ಟು ಮಹಿಳೆಯರು ಹೆರಿಗೆ ನೋವನ್ನು ತಾಳಲಾರದೆ ನಮಗೆ ಸಿಜೇರಿಯನ್ ಮಾಡಿ ಎಂದು ಗೋಗರಿಯುತ್ತಾರೆ ಕೆಲವು ಪೋಷಕರು ಸಹಾ ಇದಕ್ಕೆ ಸಮತಿಸುತ್ತಾ ಮಗಳ ಪ್ರಾಣವನ್ನು ಉಳಿಸಿ ಎಂದು ವೈದ್ಯರಲ್ಲಿ ಬೇಡುತ್ತಾರೆ ಆದರೆ ಸಿಜೇರಿಯನ್‍ಗಿಂತ ಸಾಮಾನ್ಯ ಹೆರಿಗೆ ಅತಿ ಮುಖ್ಯವಾಗಿದೆ.

ಇದಕ್ಕೆ ಬೇಕಾದ ಮುಂಜಾಗ್ರತೆಯನ್ನು ಗರ್ಭೀಣಿಯಾಗಿದ್ದಾಗಲೇ ತೆಗೆದುಕೊಳ್ಳಬೇಕಿದೆ ಕಾಲ ಕಾಲಕ್ಕೆ ವ್ಯಾಯಾಮ, ಯೋಗ, ಉತ್ತಮವಾದ ಆಹಾರ, ನಡಿಗೆಯನ್ನು ಮಾಡುವುದರ ಮೂಲಕ ಸಹಜ ಹೆರಿಗೆಯನ್ನು ಮಾಡಿಸಿಕೊಳ್ಳಬಹುದಾಗಿದೆ ಎಂದು ಹೇಳಿ ಆಹಾರದಲ್ಲಿ ಸೊಪ್ಪು, ಹಣ್ಣುಗಳು, ತರಕಾರಿಯನ್ನು ಬಳಕೆ ಮಾಡಿ ಕೊಳ್ಳುವಂತೆ ಸಲಹೆ ನೀಡಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ರೀನಾ ವೀರಭದ್ರಪ್ಪ ಮಾತನಾಡಿ ಇಂದಿನ ದಿನಮಾನದಲ್ಲಿ ನಾರಿಶಕ್ತಿ ಹೆಚ್ಚಾಗಿದೆ. ತಮ್ಮ ಸ್ವಂತ ಕಾಲ ಮೇಲೆ ನಿಂತು ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿದ್ದಾಳೆ.ಎಲ್ಲಾ ರಂಗದಲ್ಲಿಯೂ ಸಹಾ ತನ್ನ ಶಕ್ತಿಯನ್ನು ಪ್ರದರ್ಶನ ಮಾಡುತ್ತಿದ್ದಾಳೆ, ಮಹಿಳೆಯ ಆನಾರೋಗ್ಯ ನಿವಾರಣೆಗೆ ಆಗಸೆ ಬೀಜ ಉತ್ತಮವಾದ ಔಷಧಿಯಾಗಿದೆ ಎಂದರು.

ಶ್ರೀಮತಿ ಜ್ಯೋತಿ ಲಕ್ಷ್ಮಣ್ ಮಾತನಾಡಿ, ಮಹಿಳೆಯರು ಪ್ರತಿ ದಿನ ಅರ್ಧಗಂಟೆಯ ಕಾಲ ತಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕಿದೆ. ಬೇರೆಯವರ ಸೇವೆಯನ್ನು ಮಾಡುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಗಮನ ನೀಡುವುದಿಲ್ಲ ಇದು ದುರಂತ. ಗಂಡ ಮನೆ ಮಕ್ಕಳ ಇದರ ಬಗ್ಗೆ ಹೆಚ್ಚಿನ ಗಮನ ನೀಡುವ ಮಹಿಳೆಯನ್ನು ನಾವುಗಳು ಗೌರವಿಸಬೇಕಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರಾದ ಶ್ರೀಮತಿ ಮಾಲಾ ನಾಗರಾಜ್, ಕಾರ್ಯದರ್ಶಿ ನಂದಿನಿ ಸುಹಾಸ್, ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಮಹಿಳಾ ಘಟಕ ಅಧ್ಯಕ್ಷೆ ಶ್ರೀಮತಿ ನಿರ್ಮಲ ಬಸವರಾಜ್, ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಸುಮಾ ಆನಂತ್, ಕಾರ್ಯದರ್ಶಿ ಲಕ್ಷ್ಮೀ ರಮಾಕಾಂತ ಅಕ್ಕನ ಬಳಗದ ಅದ್ಯಕ್ಷರಾದ ಪುಷ್ಪ ವೀರಭದ್ರಸ್ವಾಮಿ ಕಾರ್ಯದ ಇಂದಿರಾ ಜಯದೇವ ಮೂರ್ತಿ ಹಾಗೂ ಇನ್ನರ್‍ವೀಲ್‍ಕ್ಲಬ್ ಚಿತ್ರದುರ್ಗ ಪೋರ್ಟೊನ ಅಧ್ಯಕ್ಷರಾದ ವರಲಕ್ಷ್ಮೀ ರತ್ನಾಕರ್ ಕಾರ್ಯದರ್ಶಿ ಪ್ರತಿಭಾ ವಿಶ್ವನಾಥ್ ಭಾಗವಹಿಸಿದ್ದರು.

What do you think?

-1 Points
Upvote Downvote

Written by suddionenews

Leave a Reply

Your email address will not be published.

GIPHY App Key not set. Please check settings

ಚಳ್ಳಕೆರೆ ಕ್ಷೇತ್ರದ ಯುವ ಮತದಾರರ ಬೆಂಬಲ ಅಭಿವೃದ್ಧಿಗೆ : ಶಾಸಕ ಟಿ.ರಘುಮೂರ್ತಿ

ಸಂವಿಧಾನವನ್ನು ಕೆಳಗಿಳಿಸುವ ಹುನ್ನಾರ ಆರೋಗ್ಯಕರವಲ್ಲ :  ಕವಿ ಡಾ.ಚಂದ್ರಶೇಖರ ತಾಳ್ಯ