Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹೆಣ್ಣು ಸಾಧನೆಗೆ ಸ್ಪೂರ್ತಿ, ಬದುಕಿಗೆ ದಾರಿ, ಕುಟುಂಬಕ್ಕೆ ಶಕ್ತಿ : ಶ್ರೀಮತಿ ನಿರ್ಮಲ ಬಸವರಾಜ್

Facebook
Twitter
Telegram
WhatsApp

ಚಿತ್ರದುರ್ಗ: ಹೆಣ್ಣು ಸಾಧನೆಗೆ ಸ್ಪೂರ್ತಿ, ಬದುಕಿಗೆ ದಾರಿ, ಕುಟುಂಬಕ್ಕೆ ಶಕ್ತಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶ್ರೀಮತಿ ನಿರ್ಮಲ ಬಸವರಾಜ್ ಹೇಳಿದರು.

ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಜಿಲ್ಲಾ ವೀರಶೈವ ಲಿಂಗಾಯಿತ ಹೇಮರಡ್ಡಿ ಮಲ್ಲಮ್ಮ ಸಮಾಜದಲ್ಲಿ ಸೋಮವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಹೆಣ್ಣು-ಗಂಡೆಂಬ ತಾರತಮ್ಯ ಸರಿಯಲ್ಲ. ಹೆಣ್ಣಿಲ್ಲದ ಬದುಕಿಲ್ಲ. ತನ್ನ ಕುಟುಂಬಕ್ಕೆ ಹೆಣ್ಣು ಸಾಕಷ್ಟು ಶ್ರಮ ಪಡುತ್ತಾಳೆ. ಹಾಗಾಗಿ ಹೆಣ್ಣನ್ನು ತ್ಯಾಗದ ಪ್ರತೀಕ ಎಂದು ಕರೆಯುವುದುಂಟು. ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಹೆಣ್ಣಿನಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಮಹಿಳೆಯರಿಗಾಗಿಯೇ ಸರ್ಕಾರದಿಂದ ಅನೇಕ ಸವಲತ್ತುಗಳಿವೆ ಎಲ್ಲವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿಗಳಾಗಿ ರಾಣಿಯಂತೆ ಯೋಚಿಸಿ. ರಾಣಿಯಂತೆ ಜೀವಿಸಿ. ಸೋಲು ಯಶಸ್ಸಿನ ಬುನಾದಿ ಎನ್ನುವುದನ್ನು ಮರೆಯಬೇಡಿ ಎಂದು ಮಹಿಳೆಯರಿಗೆ ತಿಳಿಸಿದರು.

ರೋಟರಿ ಕ್ಲಬ್ ಚಿತ್ರದುರ್ಗ ಅಧ್ಯಕ್ಷೆ ರಾಜೇಶ್ವರಿ ಸಿದ್ದರಾಂ ಮಾತನಾಡಿ ಹೆಣ್ಣು ಅಬಲೆಯಲ್ಲ. ಎಂತಹ ಸವಾಲು ಸಮಸ್ಯೆಗಳು ಜೀವನದಲ್ಲಿ ಎದುರಾದರೂ ಧೈರ್ಯ ಕಳೆದುಕೊಳ್ಳಬೇಡಿ. ಚಿತ್ರದುರ್ಗ ಒನಕೆ ಓಬವ್ವಳ ನಾಡು. ಅದಕ್ಕಾಗಿಯಾದರೂ ಇಲ್ಲಿನ ಮಹಿಳೆಯರು ತಮ್ಮ ತನವನ್ನು ಎಲ್ಲಿಯೂ ಬಿಟ್ಟುಕೊಡಬಾರದು.

ಹೆಣ್ಣು ಮಗು ಜನಿಸಿತೆಂದು ಪೋಷಕರುಗಳು ಚಿಂತಿಸುವ ಬದಲು ಒಳ್ಳೆಯ ಶಿಕ್ಷಣ ಕೊಡಿಸಿ. ಜಿಲ್ಲೆಯಲ್ಲಿ ಬಾಲ್ಯ ವಿವಾಹಗಳು ಜಾಸ್ತಿಯಾಗುತ್ತಿದೆ. ಹೆತ್ತವರು ನಾನಾ ಕಾರಣಗಳನ್ನು ಮುಂದಿಟ್ಟುಕೊಂಡು ಬಾಲ್ಯ ವಿವಾಹಗಳನ್ನು ಮಾಡುವುದು ಶಿಕ್ಷಾರ್ಹ ಅಪರಾಧ ಎನ್ನುವುದನ್ನು ಮರೆಯಬಾರದು ಎಂದು ಎಚ್ಚರಿಸಿದರು.

ನ್ಯಾಯವಾದಿ ಬಿ.ಕೆ.ರಹಮತ್‌ವುಲ್ಲಾ ಮಾತನಾಡುತ್ತ ಹಿಂದಿನ ಕಾಲದಲ್ಲಿ ಹೆಣ್ಣು ಮಗು ಜನಿಸಿದಾಕ್ಷಣ ಜೀವ ತೆಗೆಯುವ ಪದ್ದತಿಯಿತ್ತು. ಅದರಂತೆ ಸತಿ ಸಹಗಮನ ಪದ್ದತಿಯೂ ಕೂಡ ಹೆಣ್ಣಿನ ಮೇಲೆ ನಡೆಯುವ ಶೋಷಣೆ ಎಷ್ಟು ಕ್ರೌರ್ಯವಾಗಿತ್ತು ಎನ್ನುವುದನ್ನು ನೆನಪಿಸುತ್ತದೆ. ವಿಧವೆಯೂ ಮರು ಮದುವೆಯಾಗಬಹುದೆಂಬ ಕಾನೂನು ಜಾರಿಗೆ ಬಂದಿದೆ. ಒಟ್ಟಾರೆ ಕಾನೂನಿನಲ್ಲಿ ಮಹಿಳೆಗೆ ಸಾಕಷ್ಟು ರಕ್ಷಣೆಗಳಿವೆ. ಪಿತ್ರಾರ್ಜಿತ ಹಾಗೂ ತಂದೆಯ ಆಸ್ತಿಯಲ್ಲಿಯೂ ಹೆಣ್ಣು ಮಕ್ಕಳು ಪಾಲು ಪಡೆಯುವ ಅಧಿಕಾರವಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಆರತಿ ಮಹಡಿ ಶಿವಮೂರ್ತಿ ಮಾತನಾಡುತ್ತ ಎಲ್ಲಾ ರಂಗಗಳಲ್ಲಿಯೂ ಪುರಷರಿಗೆ ಸರಿಸಮಾನವಾಗಿ ದುಡಿಯುತ್ತಿರುವ ಮಹಿಳೆ ಮೊದಲು ಸಬಲೀಕರಣಗೊಳ್ಳಬೇಕು. ಪುರುಷ ಪ್ರಧಾನ ಸಮಾಜದ ಅಂದುಕೊಳ್ಳುವುದು ಬೇಡ. ಹಿಂದಿನ ಕಾಲದಲ್ಲಿ ಮಹಿಳೆ ಮನೆಯಿಂದ ಹೊರಬರುವುದು ಕಷ್ಟವಿತ್ತು. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು-ಗಂಡು ಸಮಾನವಾಗಿ ದುಡಿದಾಗ ಮಾತ್ರ ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಹೇಳಿದರು.

ದೇಶದ ಪ್ರಧಾನಿಯಾಗಿದ್ದ ಇಂದಿರಾಗಾAಧಿ ದಿಟ್ಟ ಧೀರತನ ಪ್ರದರ್ಶಿಸಿ ಉಕ್ಕಿನ ಮಹಿಳೆ ಎನಿಸಿಕೊಂಡರು ಎಂದು ಮಹಿಳೆಗಿರುವ ಸಾಮರ್ಥ್ಯವನ್ನು ವಿವರಿಸಿದರು.

ಬಿಎಸ್‌ಪಿ.ಜಿಲ್ಲಾಧ್ಯಕ್ಷ ವೆಂಕಟೇಶ್ ಐಹೊಳೆ ಮಾತನಾಡಿ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ್ದು, ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಎನ್ನುವುದನ್ನು ಮಹಿಳೆಯರು ಮರೆಯಬಾರದು. ಒಂದು ಕಾಲದಲ್ಲಿ ಪುರುಷರಿಗೆ ಮಾತ್ರ ಮತದಾನದ ಹಕ್ಕು ನೀಡಲಾಗಿತ್ತು. ಇದನ್ನು ಮನಗಂಡ ಡಾ.ಬಿ.ಆರ್.ಅಂಬೇಡ್ಕರ್‌ರವರು ಮಹಿಳೆಗೂ ಸಮಾನತೆ ನೀಡಬೇಕು ಎನ್ನುವ ಕಾರಣಕ್ಕಾಗಿ ಮತದಾನದ ಹಕ್ಕು ಒದಗಿಸಿದರು. ಅದಕ್ಕಾಗಿ ಮಹಿಳೆ ತನ್ನಲ್ಲಿರುವ ಕೀಳರಿಮೆಯನ್ನು ಬಿಟ್ಟು ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾ ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ರೀನಾ ವೀರಭದ್ರಪ್ಪ ಮಾತನಾಡುತ್ತ ನಲವತ್ತೈದು ವರ್ಷಗಳಿಂದಲೂ ಮಹಿಳಾ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಆದರೆ ಕೊಳಗೇರಿ ಪ್ರದೇಶಗಳಲ್ಲಿನ ಮಹಿಳೆಯರಿಗೆ ನಿಜವಾಗಿಯೂ ಮಹಿಳಾ ದಿನಾಚರಣೆಯ ಅರ್ಥವೇ ಗೊತ್ತಿಲ್ಲದಿರುವುದು ವಿಷಾಧನೀಯ. ಮಹಿಳೆಯರಿಗಾಗಿಯೇ ಸರ್ಕಾರದಿಂದ ಅನೇಕ ಸವಲತ್ತುಗಳು ಹಾಗೂ ಕಾನೂನು ಅಡಿಯಲ್ಲಿ ಸಿಗುವ ರಕ್ಷಣೆಯ ಮಹತ್ವವನ್ನು ಕೊಳಚೆ ಪ್ರದೇಶದ ಮಹಿಳೆಯರಿಗೆ ತಿಳಿಸಬೇಕಿದೆ ಎಂದು ಸಲಹೆ ನೀಡಿದರು.

ಕೆ.ಕೆ.ಎನ್.ಎಸ್.ಎಸ್.ಜಿಲ್ಲಾಧ್ಯಕ್ಷ ಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಶ್ರೀಮತಿ ಅಂಜುಮ್ ನಯೀಂ, ರಂಗಸ್ವಾಮಿ, ಇಮಾಂಸಾಬ್, ರುದ್ರಮುನಿ ವೇದಿಕೆಯಲ್ಲಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಕ್ರೂಸರ್ ವಾಹನ ಪಲ್ಟಿ  ಓರ್ವ ಸಾವು, 13 ಮಂದಿಗೆ ಗಾಯ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ಮಾರ್ಚ್. 28 : ತಾಲ್ಲೂಕಿನ ತಳಕು ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟೀಯ ಹೆದ್ದಾರಿ 150 ಎ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕ್ವಾರಿ ಅಂಡ್ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ : ಅಬ್ದುಲ್ ಮಾಜಿದ್

  ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,    ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 28  : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಭೆ ನಡೆಸಿ ಹೊಸ ಅಸೋಸಿಯೇಷನ್‍ಗೆ ಶಕ್ತಿ ತುಂಬಬೇಕಾಗಿದೆ

ಪ್ರಹ್ಲಾದ್ ಜೋಶಿಗೆ ಬೆಂಬಲ ನೀಡಿದ ವಾಲ್ಮೀಕಿ ಸಮಾಜ

ಹುಬ್ಬಳ್ಳಿ: ಧಾರವಾಡದಲ್ಲಿ ಪ್ರಹ್ಲಾದ ಜೋಶಿ ಅವರ ಸ್ಪರ್ಧೆಗೆ ದಿಂಗಾಲೇಶ್ವರ ಶ್ರೀಗಳ ಬೆಂಬಲಿಗರು ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪ್ರಹ್ಲಾದ ಜೋಶಿ ಅವರ ಬೆಂಬಲಕ್ಕೆ ವಾಲ್ಮೀಕಿ ಸಮಾಜದ ಶ್ರೀಗಳು ನಿಂತಿದ್ದಾರೆ. ಇಂದು ಪ್ರಹ್ಲಾದ್ ಜೋಶಿ ಅವರ ಪರವಾಗಿ

error: Content is protected !!