
ಮಾಜಿ ಸಿಎಂ ಕುಮಾರಸ್ವಾಮಿ ಈ ಬಾರಿ ಹೇಗಾದರೂ ಮಾಡಿ ಬಹುಮತದೊಂದಿಗೆ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಒಡಾಟ ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ಪಂಚರತ್ನ ರಥಯಾತ್ರೆ ನಡೆಸುತ್ತಿದ್ದಾರೆ. ಜಿಲ್ಲೆ ಜಿಲ್ಲೆಗೂ ಹೋಗಿ ಜನರ ಬಳಿ ಮಾತನಾಡಿ, ಭರವಸೆಯನ್ನು ನೀಡುತ್ತಿದ್ದಾರೆ.

ರೈತರ ಒರ ಯಾವಾಗಲೂ ಇರುವ ಕುಮಾರಸ್ವಾಮಿ ಈ ಬಾರಿಯೂ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವ ಭರವಸೆಯನ್ನು ನೀಡಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಆಗಿಯೇ ಶಕ್ತಿಸೌಧಕ್ಕೆ ಕಾಲಿಡುವುದಾಗಿ ಶಪಥ ಮಾಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆಯ ಅಖಾಡ ಸಿದ್ಧವಾಗುತ್ತದೆ. ಯಾವ ಪಕ್ಷಕ್ಕೆ ಮತದಾರ ಪ್ರಭು ಒಲವು ತೋರಿಸುತ್ತಾನೆ ಎಂಬ ಕುತೂಹಲವೂ ಎಲ್ಲರಲ್ಲಿಯೂ ಇದೆ.
ಇನ್ನು ಕುಮಾರಸ್ವಾಮಿ ಅವರ ಪಂಚರತ್ನ ರಥಯಾತ್ರೆಗೆ ಎಲ್ಲಿಯೇ ಹೋದರೂ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತುದೆ. ದೊಡ್ಡ ದೊಡ್ಡ ಹಾರಗಳನ್ನು ಹಾಕುತ್ತಾ, ಪ್ರೀತಿಯಿಂದಾನೇ ಸ್ವಾಗತ ಮಾಡುತ್ತಿದ್ದಾರೆ. ಜನರ ಬೆಂಬಲ ನೋಡಿಯೇ ಈ ಬಾರಿ ಬಹುಮತ ಪಡೆಯುತ್ತೇವೆ ಎಂಬ ನಂಬಿಕೆ ಜೆಡಿಎಸ್ ನಲ್ಲಿದೆ.
GIPHY App Key not set. Please check settings