ಇಸ್ಲಾಮಾಬಾದ್: ಅವಿಶ್ವಾಸ ನಿರ್ಣಯ ಮಂಡಿಸುವಲ್ಲಿ ಪಾಕಿಸ್ತಾನ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಸೋತಿದ್ದು, ಈಗ ನೂತನ ಪ್ರಧಾನಿಯ ಆಯ್ಕೆಯಾಗಿದೆ. ಶೇಹಬಾಜ್ ಷರೀಫ್ ನೂತನ ಪ್ರಧಾನಿಯಾದ ಬಳಿಕ ಭಾರತ್ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ.
ಭಾರತದ ಜೊತೆಗೆ ಪಾಕಿಸ್ತಾನ ಶಾಂತಿ ಮತ್ತು ಸಹಕಾರವನ್ನು ಬಯಸುತ್ತದೆ. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಬಾಕಿ ಇರುವ ವಿವಾದಗಳು ಶಾಂತಿಯಿಂದ ಇತ್ಯರ್ಥಗೊಳ್ಳುವುದು ಅನಿವಾರ್ಯವಾಗಿರುತ್ತದೆ. ಭಯೋತ್ಪಾದನೆ ವಿರೋಧದಲ್ಲಿ ಪಾಕಿಸ್ತಾನದ ತ್ಯಾಗ ಎಲ್ಲರಿಗೂ ಗೊತ್ತಿದೆ. ನಾವೂ ಶಾಂತಿಯನ್ನು ಕಾಪಾಡೋಣಾ ಎಂದು ನೂತನ ಪ್ರಧಾನಿಯಾದ ಬಳಿಕ ಶೇಹಬಾಜ್ ಟ್ವೀಟ್ ಮೂಲಕ ಶಾಂತಿ ಸೌಹಾರ್ದತೆ ಬಯಸಿದ್ದಾರೆ.
ಇನ್ನು ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ನೂತನ ಪ್ರಧಾನಿಗೆ ಶುಭಾಶಯ ಕೋರಿದ್ದರು. ಭಯೋತ್ಪಾದನೆ ಮುಕ್ತ ದೇಶಕ್ಕಾಗಿ ನಾವೂ ಸಿದ್ಧರಿದ್ದೇವೆ. ಶಾಂತಿ ಹಾಗೂ ಸ್ಥಿರತೆಗೆ ಭಾರತ ಯಾವಾಗಲೂ ಸಿದ್ಧವಿದೆ ಎಂದು ಟ್ವೀಟ್ ಮಾಡಿದ್ದರು. ಭಾರತದ ಪ್ರಧಾನಿಗೆ ಪಾಕ್ ಪ್ರಧಾನಿಗೆ ಅಭಿನಂದನೆ ಕೂಡ ಸಲ್ಲಿಸಿದ್ದಾರೆ.