ಎರಡು ತಿಂಗಳ ಬಳಿಕ ನಡೆದ ಜಪಾನ್ ಮಾಜಿ ಪ್ರಧಾನಿ ಅಂತ್ಯಕ್ರಿಯೆ : ಕಾರಣ ಕೇಳಿದ್ರೆ ಶಾಕ್..!

 

ಜಪಾನ್‌ನ ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ಅಂತ್ಯಕ್ರಿಯೆ ಇಂದು ಟೋಕಿಯೋದಲ್ಲಿ ನೆರವೇರಿತು. ವಿಶ್ವದಾದ್ಯಂತದ 217 ದೇಶಗಳ ಪ್ರತಿನಿಧಿಗಳು ಟೋಕಿಯೊವನ್ನು ತಲುಪಿ, ಅಗಲಿದ ಜಪಾನ್ ನಾಯಕನಿಗೆ ಅಂತಿಮ ನಮನ ಸಲ್ಲಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಕೂಡ ಟೋಕಿಯೋ ತಲುಪಿ ಅಬೆ ಅವರಿಗೆ ಅಂತಿಮ ವಿದಾಯ ಹೇಳಿದರು. ಇದು ವಿಶ್ವದ ಅತ್ಯಂತ ದುಬಾರಿ ಅಂತ್ಯಕ್ರಿಯೆ ಎಂದು ಹೇಳಲಾಗುತ್ತಿದೆ.

ಜುಲೈ 8 ರಂದು, ಶಿಂಜೋ ಅಬೆಯನ್ನು ಹತ್ಯೆ ಮಾಡಲಾಯಿತು. ನಂತರ, ಕುಟುಂಬವು ಬೌದ್ಧ ಸಂಪ್ರದಾಯದಂತೆ ಜುಲೈ 15 ರಂದು ಅವರ ಅಂತ್ಯಸಂಸ್ಕಾರ ಮಾಡಿದರು. ಅಬೆಯ ಚಿತಾಭಸ್ಮವನ್ನು ಗೌರವಾರ್ಥವಾಗಿ ಇರಿಸಲಾಗಿ ಸರ್ಕಾರಿ ಅಂತ್ಯಕ್ರಿಯೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಯಿತು.ಜಪಾನ್‌ನಲ್ಲಿ ಹೆಚ್ಚಿನ ಜನರು ಬೌದ್ಧ ಸಂಪ್ರದಾಯದ ಪ್ರಕಾರ ಮೃತ ದೇಹಗಳನ್ನು ಸುಡುತ್ತಾರೆ.

ಜಪಾನಿನಲ್ಲಿ ಚಿತಾಭಸ್ಮವನ್ನು ಹೂದಾನಿಗಳಲ್ಲಿ ಇಡುವ ಸಂಪ್ರದಾಯವೂ ಇದೆ. ಇದಕ್ಕಾಗಿ ಸಮಾಧಿಯಾಕಾರದ ಅಲ್ಮೇರಾವನ್ನು ತಯಾರಿಸಲಾಗುತ್ತದೆ. ಜನರು ಚಿತಾಭಸ್ಮವನ್ನು ಇಡುವ ಸಣ್ಣ ಸಮಾಧಿ ಗಾತ್ರದ ಅಲ್ಮಿರಾಗಳನ್ನು ತಯಾರಿಸಲಾಗುತ್ತದೆ. ಕಾಲಕಾಲಕ್ಕೆ ಕುಟುಂಬಸ್ಥರೂ ಇಲ್ಲಿಗೆ ಬಂದು ಶ್ರದ್ಧಾಂಜಲಿ ಸಲ್ಲಿಸುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *