ಕಾಂಗ್ರೆಸ್ ಸರ್ಕಾರದಲ್ಲಿ ಈಗ ಸಚಿವ ಸ್ಥಾನದ್ದೇ ದೊಡ್ಡ ಗೊಂದಲವಾಗಿದೆ. ಪ್ರಮಾಣವಚನವನ್ನೇನೋ ಸ್ವೀಕರಿಸಿದ್ದಾಯ್ತು. ಆದರೆ ಇದೀಗ ಆಕಾಂಕ್ಷಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳದೆ ಹೋದರೆ ಮನಸ್ತಾಪಗಳು ಜೋರಾಗಿಯೇ ಕೇಳಿಸುತ್ತವೆ. ಇದೀಗ ದಿನೇಶ್ ಗುಂಡೂರಾವ್ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಸಚಿವ ಸ್ಥಾನ ಸಿಗದ ಹಿನ್ನೆಲೆ ಬೇಸರ ಹೊರ ಹಾಕಿದ್ದಾರೆ.
ಸಿಎಂ ಹಾಗೂ ಡಿಸಿಎಂ ಜೊತೆಗೆ ಎಂಟು ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಈ ಅಬರಿಯ ಸಂಪುಟದಲ್ಲಿ ಶಾಸಕ ದಿನೇಶ್ ಗುಂಡೂರಾವ್ ಅವರಿಗೆ ಸ್ಥಾನಮಾನ ಸಿಕ್ಕಿಲ್ಲಿ. ಮೇಲ್ನೋಟಕ್ಕೆ ಎಲ್ಲವೂ ಸರಿ ಎಂದಾದರೂ ಕಾಂಗ್ರೆಸ್ ನಲ್ಲಿ ಮನಸ್ತಾಪಗಳು ಬೂದಿ ಮುಚ್ಚಿದ ಕೆಂಡದಂತೆಯೇ ಇದೆ ಎನ್ನಲಾಗುತ್ತಿದೆ. ದಿನೇಶ್ ಗುಂಡೂರಾವ್ ಹೇಳಿ ಕೇಳಿ ಸಿಎಂ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಅವರು ದಿನೇಶ್ ಗುಂಡೂರಾವ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳೋಣಾ ಎಂದರೂ ಡಿಸಿಎಂ ಡಿಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿಲ್ಲ ಎನ್ನುತ್ತಿವೆ ಮೂಲಗಳು. ಇನ್ನುಳಿದ ಸಚಿವ ಸ್ಥಾನಕ್ಕೆ ಬೇರೆ ಯಾರೆಲ್ಲಾ ಆಯ್ಕೆಯಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.





GIPHY App Key not set. Please check settings