ಅಧಿಕಾರ ಇದ್ದಾಗ ನಾಲ್ಕು ಜನಕ್ಕೆ ಒಳ್ಳೆಯದು ಮಾಡಬೇಕು : ಶಾಸಕ ಎಂ.ಚಂದ್ರಪ್ಪ

 

ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಮೊ : 78998 64552

ಚಿತ್ರದುರ್ಗ, (ನ.21): ಪಾಂಡುರಂಗಸ್ವಾಮಿ ಯಾವತ್ತು ನಂಬಿದವರನ್ನು ಕೈಬಿಡುವುದಿಲ್ಲ. ಇದೊಂದು ಪುಣ್ಯಸ್ಥಳವಾಗಲಿ ಎಂದು ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಹೊಳಲ್ಕೆರೆ ಪಟ್ಟಣದಲ್ಲಿ ಪಾಂಡುರಂಗ ರುಕುಮಾಯಿ ನೂತನ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಎರಡನೆ ಬಾರಿಗೆ ನಾನು ಶಾಸಕನಾಗಿದ್ದಾಗ ಕುಟುಂಬದೊಂದಿಗೆ ಪಾಂಡುರಂಗಸ್ವಾಮಿ ದೇವಸ್ಥಾನಕ್ಕೆ ಹೋದಾಗಲೆ ಗೊತ್ತಾಗಿದ್ದು, ಅಲ್ಲಿ ಪವಾಡವಿದೆ ಎಂದು. ಸಮೀಪದಲ್ಲಿಯೇ ಇದ್ದ ಪುಂಡಲೀಕ ದೇವರ ದರ್ಶನವನ್ನು ಮಾಡಿಕೊಂಡು ಬಂದೆವು. ಸಂಪತ್ತು, ಐಶ್ವರ್ಯ ಯಾವುದು ಸ್ಥಿರವಲ್ಲ. ಅಧಿಕಾರ ಇದ್ದಾಗ ನಾಲ್ಕು ಜನಕ್ಕೆ ಏನು ಒಳ್ಳೆಯದು ಮಾಡುತ್ತೇವೆಯೋ ಅದೇ ಕೊನೆಯವರೆಗೂ ಉಳಿಯುವುದು ಎಂದು ಹೇಳಿದರು.

ದೇವಸ್ಥಾನಕ್ಕೆ ಉತ್ತರದ ಭಾಗ ಒಳ್ಳೆಯದು. ಪಕ್ಕದಲ್ಲಿಯೇ ಗಂಗಾಮಾತೆ ಪುಷ್ಕರಣಿಯಿದೆ. ಈ ಜಾಗ ಪಾಂಡುರಂಗಸ್ವಾಮಿಗೆ ಮೀಸಲಿರಲಿ. ಇಲ್ಲಿ ದೇವಸ್ಥಾನ ಕಟ್ಟುವುದರಿಂದ ಊರಿಗೆ ಒಳ್ಳೆಯದಾಗುತ್ತದೆ. ಐದು ಲಕ್ಷ ರೂ.ದೇವಸ್ಥಾನಕ್ಕೆ ಕೊಡುತ್ತೇನೆಂದು ವಾಗ್ದಾನ ಮಾಡಿದ ಶಾಸಕ ಎಂ.ಚಂದ್ರಪ್ಪ ಮುಂದೆ ಅವಕಾಶ ಕೊಟ್ಟರೆ ಇನ್ನು ದೊಡ್ಡ ಮಟ್ಟದಲ್ಲಿ  ದೇವಸ್ಥಾನ ಅಭಿವೃದ್ದಿಪಡಿಸೋಣ ಎಂದರು.

29 ವರ್ಷದ ಹಿಂದೆಯೆ ಭರಮಸಾಗರದಲ್ಲಿ ಮೊದಲ ಬಾರಿಗೆ ಶಾಸಕನಾಗಿದ್ದಾಗ 396 ಹಳ್ಳಿಗಳಲ್ಲಿ ಟಾರ್ ರಸ್ತೆ ಮಾಡಿಸಿದ್ದರಿಂದ ರಸ್ತೆರಾಜ ಎಂಬ ಬಿರುದು ನೀಡಿ ಎರಡನೆ ಬಾರಿಗೆ ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ಎಷ್ಟು ಕೆಲಸ ಮಾಡಿದರೂ ಕಡಿಮೆಯೇ ಅಂದುಕೊಂಡು ಹಗಲು-ರಾತ್ರಿ ಕ್ಷೇತ್ರದ ಜನರ ಸೇವೆ ಮಾಡುವ ಮೂಲಕ ಋಣ ತೀರಿಸುವ ಕೆಲಸ ಮಾಡುತ್ತೇನೆಂದರು.

ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷ ಕೆ.ಸಿ.ರಮೇಶ್, ಸದಸ್ಯರುಗಳಾದ ಪಿ.ಹೆಚ್.ಮುರುಗೇಶ್, ಶ್ರೀಮತಿ ಹೆಚ್.ಆರ್.ನಾಗರತ್ನ ವೇದಮೂರ್ತಿ, ಮಹೇಶ್ ಹೆಚ್. ಹೊಳಲ್ಕೆರೆ ತಾಲ್ಲೂಕು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ವಿಠೋಬರಾವ್ ಗುಜ್ಜಾರ್, ಮಿರಜ್‍ಕರ್ ಶ್ರೀನಾಥ್, ಶಿವರುದ್ರಪ್ಪ, ರವಿಕುಮಾರ್, ನಟರಾಜ್, ಸಂತೋಷ್, ಗಿರೀಶಣ್ಣ ಹಾಗೂ ಭಾವಸಾರ ಕ್ಷತ್ರಿಯ ಸಮಾಜದ ಸರ್ವ ಸದಸ್ಯರು, ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

suddionenews

Recent Posts

ಇಂದಿನಿಂದ ಬಜೆಟ್ ಅಧಿವೇಶನ ಆರಂಭ

  ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ…

1 hour ago

ಯಾವ ವಯಸ್ಸಿನಿಂದ ಮಕ್ಕಳಿಗೆ ಚಹಾ ಅಥವಾ ಕಾಫಿಯನ್ನು ನೀಡಬಹುದು ? ಚಿಕ್ಕ ವಯಸ್ಸಿನಲ್ಲಿ ಕುಡಿಯುವುದು ಅಪಾಯಕಾರಿಯೇ ?

ಸುದ್ದಿಒನ್ :ಮಕ್ಕಳಿಗೆ ಟೀ ಮತ್ತು ಕಾಫಿ ಕೊಡುವ ಮೊದಲು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಚಿಕ್ಕ ವಯಸ್ಸಿನಲ್ಲಿ ಚಹಾ ಅಥವಾ ಕಾಫಿ…

4 hours ago

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ

ಈ ರಾಶಿಯ ದಂಪತಿಗಳಿಗೆ ಅತಿಯಾದ ಕಿರುಕುಳದಿಂದ ಜಿಗುಪ್ಸೆ, ಶುಕ್ರವಾರದ ರಾಶಿ ಭವಿಷ್ಯ 31 ಜನವರಿ 2025 - ಸೂರ್ಯೋದಯ -…

5 hours ago

ಫೈನಾನ್ಸ್ ಕಿರುಕುಳಕ್ಕೆ ದಾವಣಗೆರೆಯ ಶಿಕ್ಷಕಿ ಆತ್ಮಹತ್ಯೆ ಕೇಸ್ : ಉಲ್ಟಾ ಹೊಡೆದ ಪತಿ..!

ದಾವಣಗೆರೆ: ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಾಟಕ್ಕೆ ರಾಜ್ಯದಲ್ಲಿ ಜೀವ ಕಳೆದುಕೊಂಡವರು ಅದೆಷ್ಟೋ. ಇದಕ್ಕೆ ಕಡಿವಾಣ ಹಾಕುವುದಕ್ಕೆ ಸರ್ಕಾರ ಕೂಡ ಸಭೆಗಳನ್ನ…

14 hours ago

ಹುತಾತ್ಮರ ದಿನ : ಗಾಂಧೀಜಿಯವರಿಗೆ ಪುಷ್ಪ ನಮನ

ಚಿತ್ರದುರ್ಗ. ಜ.30: ಮಹಾತ್ಮಾ ಗಾಂಧೀಜಿಯವರು ಹುತಾತ್ಮರಾದ ದಿನವಾದ ಜ. 30 ರಂದು ಸರ್ವೋದಯ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಪರ…

14 hours ago

ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಬಿಸಿಯೂಟ ಸವಿದ ಜಿ.ಪಂ ಸಿಇಒ

ಚಿತ್ರದುರ್ಗ. ಜ.30: ಚಿತ್ರದುರ್ಗ ತಾಲ್ಲೂಕಿನ ಕಾಲ್ಗೆರೆ ಹಾಗೂ ಇಸ್ಸಾಮುದ್ರ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ…

14 hours ago