ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಎಂಟು ದಿನಗಳ ಸಂಶೋಧನೆಗೆಂದು ಬಾಹ್ಯಾಕಾಶಕ್ಕೆ ತಲುಪಿದ್ದವರು. ಆದರೆ ತಾಂತ್ರಿಕ ಸಮಸ್ಯೆಯಿಂದ ಒಂಭತ್ತು ತಿಂಗಳ ಕಾಲ ಬಾಹ್ಯಾಕಾಶದಲ್ಲಿಯೇ ಉಳಿಯಬೇಕಾದ ಪರಿಸ್ಥಿತಿ ಎದುರಾಯ್ತು. ಕಡೆಗೂ ಸುರಕ್ಷಿತವಾಗಿ ಭೂಮಿಗೆ ಬಂದಿಳಿದಿದ್ದಾರೆ. ಈಗ ಅವರ ಆರೋಗ್ಯ ಕೂಡ ಬಹಳ ಮುಖ್ಯವಾಗಿದೆ. ಸೂಕ್ಷ್ಮವಾಗಿ ಅವರ ಆರೋಗ್ಯವನ್ನ ಕಾಪಾಡಿಕೊಳ್ಳಬೇಕಿದೆ. ಆದರೆ ಒಂಭತ್ತು ತಿಂಗಳು ಬಾಹ್ಯಾಕಾಶದಲ್ಲಿದ್ದ ಸುನೀತಾ ವಿಲಿಯಮ್ಸ್ ಅಲ್ಲಿ ಏನೆಲ್ಲಾ ದಾಖಲೆಗಳನ್ನ ಮಾಡಿದ್ದಾರೆ ಗೊತ್ತಾ..?
ಹೌದು, ಸುನೀತಾ ವಿಲಿಯಮ್ಸ್ ಒಂಭತ್ತು ತಿಂಗಳುಗಳ ಕಾಲ ಬಾಹ್ಯಾಕಾಶದಲ್ಲಿ ಸಕ್ರಿಯವಾಗಿದ್ದರು. ಬಾಹ್ಯಾಕಾಶ ನಿಲ್ದಾಣವನ್ನು ಶುಚಿಗೊಳಿಸಿ, ನಿರ್ವಹಣೆಯನ್ನು ಮಾಡಿದ್ದರು. ಫುಟ್ ಬಾಲ್ ಗಾತ್ರದಲ್ಲಿರುವ ಈ ನಿಲ್ದಾಣಕ್ಕೆ ನಿರ್ವಹಣೆ ತುಂಬಾ ಅಗತ್ಯವಾದದ್ದಾಗಿದೆ. ಹಳೆಯ ಉಪಕರಣವನ್ನೆಲ್ಲ ಬದಲಾಯಿಸುವ ಕೆಲಸವನ್ನು ಮಾಡಿದ್ದಾರೆ. ನಾಸಾ ನೀಡಿರುವ ಮಾಹಿತಿ ಪ್ರಕಾರ ಸುನೀತಾ ವಿಲಿಯಮ್ಸ್ ಸುಮಾರು 900 ಗಂಟೆಗಳ ಕಾಲ 150ಕ್ಕೂ ಹೆಚ್ಚು ಪ್ರಯೋಗಗಳನ್ನ ಮಾಡಿದ್ದಾರೆ.
ಅಷ್ಟೇ ಅಲ್ಲ ಬಾಹ್ಯಾಕಾಶದಲ್ಲಿ ಹೆಚ್ಚು ಸಮಯವಿದ್ದ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬಾಹ್ಯಾಕಾಶ ನಿಲ್ದಾಣದ ಹೊರಗೆ ಸುಮಾರು 62 ಗಂಟೆಗಳ ಕಾಲ ಕಳೆದಿದ್ದಾರೆ. 9 ಬಾರಿ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಗುರುತ್ವಾಕರ್ಷಣೆಯು ಬಾಹ್ಯಾಕಾಶದಲಗಲಿನ Fluid systems ಮೇಲೆ ಹೇಗೆ ಪರಿಣಾಮ ಬೀರಲಿದೆ, ಬಾಹ್ಯಾಕಾಶದಲಗಲಿ ವಾಟರ್ ರಿಕವರು ಮತ್ತು Fuel cell ಗಳ ರಿಯಾಕ್ಟರ್ ಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಶೋಧನೆ ನಡೆಸಿದ್ದಾರೆ. ಜೊತೆಗೆ ಜೈವಿಕ ಪೌಷ್ಠಿಕಾಂಶದ ಪ್ರಾಜೆಕ್ಟ್ ನಲ್ಲಿಯೂ ಸುನೀತಾ ಭಾಗಿಯಾಗಿದ್ದರು. ಇದರಲ್ಲಿ ವಿಜ್ಞಾನಿಗಳು ಬ್ಯಾಕ್ಟೀರಿಯಾ ಬಳಸಿಕೊಂಡು ಪೋಷಕಾಂಶಗಳನ್ನು ಉತ್ಪಾದಿಸುವ ವಿಧಾನಗಳನ್ನು ಅಧ್ಯಯನ ಮಾಡಿದ್ದಾರೆ. ಸುನೀತಾ ಬಾಹ್ಯಾಕಾಶದಲ್ಲಿ ಮಾಡಿದ ಸಂಶೋಧನೆ ಬಗ್ಗೆ ನಾಸಾ ಮಾಹಿತಿ ನೀಡಿದೆ.
ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಬೆಳೆಯನ್ನು ಸಾಕಷ್ಟು ಕಷ್ಟಪಟ್ಟು ಉಳಿಸಿಕೊಂಡಿರುತ್ತಾರೆ. ರೋಗಗಳಿಂದ ಅಡಿಕೆಯನ್ನ ಕಾಪಾಡಿಕೊಳ್ಳಬೇಕು, ಮಳೆ ಇಲ್ಲದೆ ಒಣಗಿದಾಗ ಅವುಗಳನ್ನ…
ದಾವಣಗೆರೆ, ಏ.05: ಜಿಲ್ಲೆಯಲ್ಲಿನ ಆರು ತಾಲ್ಲೂಕಿನಲ್ಲಿನ ಪ್ರಮುಖ ಸ್ಥಳಗಳನ್ನು ಗುರುತಿಸಿ, ಅವುಗಳನ್ನು ಪ್ರವಾಸಿ ತಾಣಗಳಾಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು…
ಸುದ್ದಿಒನ್, ಚಿತ್ರದುರ್ಗ, ಏ. 05, ಚಿತ್ರದುರ್ಗದಲ್ಲಿ ಪ್ರಥಮ ಬಾರಿಗೆ ಪ್ರಸೂತಿ ಮತ್ತು ಸ್ತ್ರೀರೋಗ ರೋಗ ತಜ್ಞರ ಸಂಘದ ಸಹಯೋಗದಲ್ಲಿ…
ಬೆಂಗಳೂರು, ಏಪ್ರಿಲ್. 05 : ಕನ್ನಡದ ಸೃಜನಶೀಲ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ನಿರ್ದೇಶನದ ಯಕ್ಷಗಾನ ಕಲೆ ಆಧಾರಿತ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.…