ಬೆಂಗಳೂರು: ಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ನಿಲ್ಲುತ್ತಾರೋ ಆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಟ್ರಾಂಗ್ ಕ್ಯಾಂಡಿಡೇಟ್ ಹಾಕುವುದಕ್ಕೆ ಬಿಜೆಪಿ ನಿರ್ಧಾರ ಮಾಡಿದೆ ಎನ್ನಲಾಗಿದೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅವರನ್ನೇ ನಿಲ್ಲಿಸಬೇಕೆಂಬ ಚರ್ಚೆ ನಡೆದಿದೆ ಎನ್ನಲಾಗಿದೆ. ಅದಕ್ಕೆ ಪುಷ್ಟಿ ನೀಡುವಂತ ಸನ್ನಿವೇಶಗಳು ಸೃಷ್ಟಿಯಾಗಿವೆ. ಈಗ ಈ ವಿಚಾರದಲ್ಲಿ ಶೋಭಾ ಕರಂದ್ಲಾಜೆ ವಿಷಯ ಬಂದಿದೆ. ಕಾಂಗ್ರೆಸ್ ಮುಖಂಡ ಈ ಸಂಬಂಧ ಹೊಸ ಬಾಂಬ್ ಹಾಕಿದ್ದಾರೆ.
ರಮೇಶದ ಬಾಬು ಈ ಬಗ್ಗೆ ಮಾತನಾಡಿದ್ದು, ವಿಜಯೇಂದ್ರ ಅವರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲು, ಶೋಭಾ ಕರಂದ್ಲಾಜೆ ಅವರಿಂದ ಒತ್ತಡ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದರು, ಬಿಎಸ್ವೈಗೆ ಕಣ್ಣೀರು ಹಾಕಿಸಿದರು ಎಂದಿದ್ದಾರೆ.
ಪುತ್ರನಿಗೆ ಎಂಎಲ್ಸಿ ಮಾಡಿ, ಮಂತ್ರಿ ಮಾಡಬೇಕು ಎಂದುಕೊಂಡರು. ಆದರೆ ಅದು ಆಗಲಿಲ್ಲ. ಈಗ ಯಡಿಯೂರಪ್ಪ ಅವರಿಗೆ ಮತ್ತೆ ಆತಂಕ ಶುರುವಾಗಿದೆ. ಶಿಕಾರಿಪುರದ ಟಿಕೆಟ್ ಸಿಗುತ್ತೋ ಸಿಗಲ್ವೋ ಎಂಬ ಅನುಮಾನ ಅವರನ್ನು ಕಾಡುತ್ತಿದೆ. ಶಿಕಾರಿಪುರದಿಂದ ಸ್ಪರ್ಧೆ ಮಾಡುತ್ತಾರೆ, ವಿಜಯೇಂದ್ರ ಅವರಿಗೆ ಆಶೀರ್ವಾದ ಮಾಡಿ ಎಂದು ಹೇಳಿದ್ದರು.
ಈಗ ವರುಣಾದಿಂದ ಸ್ಪರ್ಧೆ ಮಾಡುವುದಕ್ಕೆ ಒತ್ತಡ ಹಾಕುತ್ತಿದ್ದಾರೆ. ವಿಜಯೇಂದ್ರ ಮೇಲೆ ಹಲವು ಪ್ರಕರಣಗಳಿವೆ. ಆ ಪ್ರಕರಣಗಳನ್ನು ಕ್ಲಿಯರ್ ಮಾಡಿಕೊಡುತ್ತೇವೆ. ಈ ಎಲೆಕ್ಷನ್ ಮುಗಿಸಿಕೊಡಿ ಎಂದು ಕೇಳಿದ್ದಾರೆ ಎಂದಿದ್ದಾರೆ.





GIPHY App Key not set. Please check settings