ಕಳೆದ ಬಾರಿ ಮೋದಿ ಭವಿಷ್ಯ ನುಡಿದಿದ್ದ ಧಾರವಾಡ ಬೊಂಬೆಗಳು ಈ ಬಾರಿ ಹೇಳಿದ್ದೇನು..?

ಧಾರವಾಡ; ಇಲ್ಲಿನ ಹನುಮಕೊಪ್ಪ ಗೊಂಬೆಗಳು ಭವಿಷ್ಯ ನುಡಿದಿವೆ. ಯುಗಾದಿ ಹಬ್ಬದಂದು ಇಲ್ಲಿನ ಗೊಂಬೆಗಳ ಬಳಿ ಭವಿಷ್ಯ ಕೇಳುವ ಪ್ರತೀತಿ‌ ಇದೆ. ಅದರಂತೆ ಈ ಬಾರಿಯೂ ಗೊಂಬೆಗಳು ಭವಿಷ್ಯ ನುಡಿದಿವೆ. ನಿನ್ನೆ ರಾತ್ರಿ ತುಪ್ಪರಿಹಳ್ಳ ದಂಡೆಯ ಮೇಲೆ ಗೊಂಬೆಗಳನ್ನ ನಿರ್ಮಾಣ ಮಾಡಲಾಗಿತ್ತು. ಯುಗಾದಿಯಂದು ಆ ಗೊಂಬೆಗಳನ್ನು ನೋಡಿ, ಭವಿಷ್ಯವನ್ನು ಹೇಳುತ್ತಾರೆ. ಈ ಗೊಂಬೆಗಳ ಮೂಲಕ ರಾಜ್ಯ – ದೇಶದ ಭವಿಷ್ಯವನ್ನು ಹೇಳಲಾಗುತ್ತದೆ. ಸಾಕಷ್ಟು ಸಲ ಇಲ್ಲಿನ ಗೊಂಬೆ ಭವಿಷ್ಯ ನಿಜವಾಗಿದೆ. ಹೀಗಾಗಿ ಗೊಂಬೆಗಳ ಭವಿಷ್ಯದ ಮೇಲೆ ಕುತೂಹಲ ಇದ್ದೇ ಇರುತ್ತದೆ. ಹಾಗಾದ್ರೆ ಈ ಬಾರಿ ನುಡೊದ ಭವಿಷ್ಯ ಯಾವುದರೆ ಸೂಚನೆಯಾಗಿತ್ತು ಎಂಬ ಮಾಹಿತಿ ಇಲ್ಲಿದೆ.

ಇಲ್ಲಿ ಭವಿಷ್ಯ ತಿಳಿದುಕೊಳ್ಳುವುದಕ್ಕೂ ಮುನ್ನ ಯುಗಾ್ಇ ಅಮಾವಾಸ್ಯೆಯಂದು ತುಪ್ಪರಿ ಹಳ್ಳದಲ್ಲಿ ಒಂದು ಆಕೃತಿ ಮಾಡಿ ಅದರ ನಾಲ್ಕು ದಿಕ್ಕಿಗೆ ರಾಜಕೀಯ ಭವಿಷ್ಯ ನುಡಿಯುವ ಗೊಂಬೆಗಳನ್ನು ಇಡಲಾಗುತ್ತದೆ. ನಾಲ್ಕು ದಿಕ್ಕಿಗೆ ಅನ್ನದ ಉಂಡೆಯನ್ನಿಟ್ಟು, ಎಲ್ಲಾ‌ಮಳೆಯ ಹೆಸರಿನಲ್ಲಿ ಎಲೆಗಳನ್ನು ಹಾಕಲಾಗುತ್ತದೆ. ಹಿಂಗಾರು ಮಳೆಯ ಧಾನ್ಯಗಳನ್ನು ಇಲ್ಲಿ ಇಡಲಾಗುತ್ತದೆ. ಎತ್ತು, ಚಕ್ಕಡಿಯನ್ನು ಮಾಡಿ ಇಡಲಾಗುತ್ತದೆ. ಮಾರನೇಯ ದಿನ ಆ ಗೊಂಬೆಗಳನ್ನು ನೋಡಲು ಬರುತ್ತಾರೆ. ಯಾವುದಾದರೂ ಗೊಂಬೆಗೆ ಹಾನಿಯಾಗಿದ್ದರೆ ಅದರ ಮೇಲೆ ಭವಿಷ್ಯವನ್ನು ಹೇಳಲಾಗುತ್ತದೆ.

ಈ ಬಾರಿ ಮುಂಗಾರು ಮಳೆ ಕಡಿಮೆಯಾದರೂ ಹಿಂಗಾರು ಮಳೆ ಕೈ ಹಿಡಿಯಲಿದೆ ಎಂದು ಭವಿಷ್ಯ ನುಡಿದಿದೆ. ಗೋವಾ ದಿಕ್ಕಿನ ಸೇನಾಧಿಪತಿ ಗೊಂಬೆಗೆ ಹಾನಿಯಾಗಿದ್ದು, ಗೋವಾ ರಾಜಕಾರಣದಲ್ಲಿ ಧಕ್ಕೆಯಾಗಲಿದೆ ಎನ್ನಲಾಗಿದೆ. ಕೇಂದ್ರ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಆಗಲ್ಲ, ಸಿಎಂ ಸಿದ್ದರಾಮಯ್ಯ ಅವರ ಖುರ್ಚಿಯು ಭದ್ರ ಎಂದೇ ಹೇಳಲಾಗಿದೆ. ಕಳೆದ ಬಾರಿ ಪ್ರಧಾನಿ ಮೋದಿಯವರ ಭವಿಷ್ಯವನ್ನು ಹೇಳಿತ್ತು. ಅವರೇ ಮತ್ತೆ ಪ್ರಧಾನಿ ಆಗ್ತಾರೆ ಎಂದ ಭವಿಷ್ಯ ನಿಜವಾಗಿದೆ.

suddionenews

Recent Posts

ಹಿರಿಯೂರು : ಸೂರಪ್ಪನಹಟ್ಟಿ ಗ್ರಾಮದಲ್ಲಿ ಹೊನ್ನಾರು ಪದ್ದತಿ : ರೈತರ ಸಂಭ್ರಮ

ಸುದ್ದಿಒನ್, ಹಿರಿಯೂರು, ಏಪ್ರಿಲ್. 02 : ತಾಲ್ಲೂಕಿನ ಸೂರಪ್ಪನಹಟ್ಟಿ ಗ್ರಾಮದಲ್ಲಿ ಹೊನ್ನಾರು ಹೊಡೆಯುವ ಪದ್ದತಿ ನಡೆದುಕೊಂಡು ಬಂದಿದೆ. ಹಳ್ಳಿಗಳಲ್ಲಿ ರೈತರು…

20 minutes ago

ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ; ಹೆಚ್ಚುವರಿ ಡಿಸಿಎಂ ಸ್ಥಾನಕ್ಕೆ ಇಟ್ಟರಾ ಬೇಡಿಕೆ..?

ಬೆಂಗಳೂರು; ಅನಾರೋಗ್ಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಸಿಎಂ ಸಿದ್ದರಾಮಯ್ಯ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಬಹಳ ದಿನಗಳ ಬಳಿಕ ಇದೀಗ ದೆಹಲಿಗೆ ಭೇಟಿ…

34 minutes ago

ಎಸ್‍ಎಸ್‍ಎಲ್‍ಸಿ ಪರೀಕ್ಷೆ: ಶೇ.100ರಷ್ಟು ಮಕ್ಕಳು ಪರೀಕ್ಷೆ ಹಾಜರಾಗುವಂತೆ ಕ್ರಿಯಾಯೋಜನೆ ರೂಪಿಸಿ : ಕೆ.ನಾಗಣ್ಣ ಗೌಡ

ಚಿತ್ರದುರ್ಗ. ಏ.03: ಮುಂಬರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆ-2ರಲ್ಲಿ ಶೇ.100ರಷ್ಟು ಮಕ್ಕಳು ಪರೀಕ್ಷೆಗೆ ಹಾಜರಾಗುವಂತೆ ಕ್ರಿಯಾಯೋಜನೆ ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ…

47 minutes ago

ಹೊಸದುರ್ಗ ತಾಲ್ಲೂಕಿನ ವಿವಿಧ ಗ್ರಾ.ಪಂಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಜೆ.ಸೋಮಶೇಖರ್ ಭೇಟಿ

ಚಿತ್ರದುರ್ಗ. ಏ.03: ನರೇಗಾ ಯೋಜನೆಯ ಮಾರ್ಗಸೂಚಿ ಅನ್ವಯವೇ ಕೆಲಸ ನಿರ್ವಹಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ…

3 hours ago

ವಕ್ಫ್ ತಿದ್ದುಪಡಿ ಮಸೂದೆ ಜಾರಿ ; ರಾಜ್ಯ ಬಿಜೆಪಿ ವಿರುದ್ಧ ಹರಿಹಾಯ್ದ ಪ್ರಮೋದ್ ಮುತಾಲಿಕ್

ಹುಬ್ಬಳ್ಳಿ; ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದಿದೆ. ಈ ಸಂಬಂಧ ನರೇಂದ್ರ ಮೋದಿ ಸರ್ಕಾರಕ್ಕೆ ಶ್ರೀರಾಮಸೇನೆಯ ಅಧ್ಯಕ್ಷ…

4 hours ago

ಚಿತ್ರದುರ್ಗ APMC : ಇಂದಿನ ಹತ್ತಿ ಮಾರುಕಟ್ಟೆ ರೇಟ್ ಎಷ್ಟಿದೆ ?

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 03 : ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಏಪ್ರಿಲ್. 03 ಗುರುವಾರ) ಹತ್ತಿ ಮಾರುಕಟ್ಟೆ ಇದ್ದು,…

4 hours ago