ಬೆಂಗಳೂರು: ವಿಧ್ಯಾರ್ಥಿಗಳಿಗೆ ಶೂ ಮತ್ತು ಸಾಕ್ಸ್ ಹಂಚಿಕೆ ವಿಚಾರದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ನಡುವೆ ಟ್ವೀಟ್ ವಾರ್ ಮುಂದುವರೆದಿದೆ. ಶಾಲೆಯಲ್ಲಿ ಶೂ ಹಾಕಿರುವ ಒಬ್ಬ ವಿಧ್ಯಾರ್ಥಿ ಹಾಗೂ ಶೂ ಹಾಕದೇ ಇರೋ ಮತ್ತೊಬ್ಬ ವಿಧ್ಯಾರ್ಥಿನಿಯ ಫೋಟೋ ಹಾಕಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಶಿಕ್ಷಣ ಇಲಾಖೆಯ ಸಚಿವರಿಗೆ ಜನರ ಅಗತ್ಯಗಳ ಬಗ್ಗೆ ಕಾಳಜಿ ಇಲ್ಲ. ವಿಧ್ಯಾರ್ಥಿಗಳ ಶೂ ಮತ್ತು ಸಾಕ್ಸ್ ಧರಿಸುವ ಬಗ್ಗೆ ಸಚಿವರು ತಾತ್ಸರದಿಂದ ಮಾತನಾಡ್ತಾರೆ. ಕಾಂಗ್ರೆಸ್, ರಾಜ್ಯ ಸರ್ಕಾರಕ್ಕೆ ಸತ್ಯಾಂಶ ಮನವರಿಕೆ ಮಾಡಿಕೊಟ್ಟಿದೆ. ರಾಜ್ಯದ ಒಳಿತಿಗಾಗಿ ಸಿಎಂ ರಾಜೀನಾಮೆ ಕೊಡುವುದು ಒಳಿತು ಎಂದಿದ್ದಾರೆ.
ಈ ಸಂಬಂಧ ಸಿದ್ದರಾಮಯ್ಯ ಕೂಡ ಟ್ವೀಟ್ ಮಾಡಿದ್ದು, ಸರ್ಕಾರಕ್ಕೆ ಸತ್ಯಾಂಶ ಮನವರಿಕೆ ಮಾಡಿಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ. ಕೊನೆಗೆ ಸಿಎಂ ಬಸವರಾಜ ಬೊಮ್ಮಾಯಿ ನಿದ್ರೆಯಿಂದ ಎದ್ದಿದ್ದಾರೆಂದು, ಟ್ವೀಟ್ ಮಾಡಿ ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಶೂ,ಸಾಕ್ಸ್ ಬಗ್ಗೆ ಸಚಿವರ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಸಾಕ್ಸ್ , ಶೂ ಕೊಡ್ತಿದ್ದವರು ನಾವು. ಬಡಮಕ್ಕಳಿಗೆ ಅನುಕೂಲ ಆಗಲಿ ಅಂತ ಕೊಡ್ತಿದ್ದೆವು. ಸಮಾನಮನೋಭಾವ ಇರಲಿ ಎಂದು ಕೊಡ್ತಿದ್ವಿ. ಇವರು ನಿಲ್ಲಿಸೋಕೆ ಹೊರಟ್ರು. ನಾವು ಒತ್ತಾಯ ಮಾಡಿದ ಮೇಲೆ ಕೊಡ್ತೇವೆ ಅಂದ್ರು. ಶಾಲೆಗಳು ಶುರುವಾಗಿವೆ. ಶೂ,ಯೂನಿಫಾರಂ ಕೊಡಬೇಕಿತ್ತು. ಆದರೆ ಇನ್ನೂ ಯಾವುದನ್ನೂ ಕೊಟ್ಟಿಲ್ಲ. ಇಮಿಡಿಯಟ್ಲಿ ಕೊಡಬೇಕು. ಸರ್ಕಾರಕ್ಕೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಅಮರನಾಥ್ ಯಾತ್ರೆ ಅವಘಡ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿದ್ದು, ಕೂಡಲೇ ಅವರನ್ನ ರಕ್ಷಣೆ ಮಾಡಬೇಕು. ಸಿಲುಕಿದವರನ್ನ ಸುರಕ್ಷಿತವಾಗಿ ಕರೆತರಬೇಕು. ರಾಜ್ಯದಲ್ಲೂ ಮಳೆಯಿಂದ ಹಾನಿ ವಿಚಾರದಲ್ಲಿ, ಉಸ್ತುವಾರಿಗಳು ಜಿಲ್ಲೆಗೆ ಹೋಗ್ತಿಲ್ಲ. ಜನರ ಕಷ್ಟ ಸುಖಗಳನ್ನ ಕೇಳಬೇಕಲ್ಲ. ಇಲ್ಲಿ ಬರಿ ಮೀಟಿಂಗ್ ಮಾಡಿದ್ರೆ ಸಾಕಾ?. ಚೀಫ್ ಮಿನಿಸ್ಟರ್ ವಿಸಿಟ್ ಮಾಡಬೇಕು. ನರೇಂದ್ರ ಮೋದಿ ಪರಿಹಾರ ಕೊಟ್ಟಿದ್ದಾರೇನ್ರೀ.ಸಾವಿರಾರು ಕೋಟಿ ಕೊಟ್ಟಿದ್ದೇವೆ ಅಂತಾರಲ್ಲ ಎಂದು ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.
ಚಿತ್ರದುರ್ಗ. ಫೆ.24: ಬರುವ ಮಾರ್ಚ್ 01 ರಂದು ಚಿತ್ರದುರ್ಗದ ಮುರುಘರಾಜೇಂದ್ರ ಕ್ರೀಡಾಂಗಣ (ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ) ದಲ್ಲಿ ಬೃಹತ್…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ : 84314 13188 ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 24 :…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…
ಚಿತ್ರದುರ್ಗ, ಫೆಬ್ರವರಿ. 24 : ಭದ್ರ ಮೇಲ್ದಂಡೆ ಯೋಜನೆಗೆ ಮುಂಬರುವ ರಾಜ್ಯ ಬಜೆಟ್ ನಲ್ಲಿ ಕನಿಷ್ಟ ಐದು ಸಾವಿರ ಕೋಟಿ…
ವಿಕ್ಕಿ ಕೌಶಲ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದರಲ್ಲಿ ಸಂಭಾಜಿ ಜೀವನ…
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 24 :…