in

ಒಂದನೇ ತರಗತಿ ಆರಂಭದ ಬಗ್ಗೆ ಸಚಿವ ನಾಗೇಶ್ ಹೇಳಿದ್ದೇನು..?

suddione whatsapp group join

ಹಾವೇರಿ: ಈಗಾಗಲೇ 9-12 ನೇ ತರಗತಿಗಳು ನಡೆಯುತ್ತಿವೆ. ಈ ಮಧ್ಯೆ ಸೋಮವಾರದಿಂದ 6-8 ನೇ ತರಗತಿಗಳು ಆರಂಭವಾಗಲಿವೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ. ಈ ಸಂಬಂಧ ಇದೀಗ ಶಿಕ್ಷಣ ಸಚಿವ ನಾಗೇಶ್ ಮಾತನಾಡಿದ್ದು, ಒಂದನೇ ತರಗತಿಯಿಂದಲೇ ಆರಂಭ ಮಾಡಲು ಪೋಷಕರು ಒತ್ತಾಯಿಸುತ್ತಿದ್ದಾರೆ ಎಂದಿದ್ದಾರೆ.

ಜಿಲ್ಲೆಯಲ್ಲಿ ಮಾತನಾಡಿದ ಅವರು, ಪೋಷಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ. ಒಂದನೇ ತರಗತಿಯಿಂದಲೇ ಶಾಲೆ ಆರಂಭಕ್ಕೆ ಪೋಷಕರು ಒತ್ತಾಯಿಸುತ್ತಿದ್ದಾರೆ. ಆನ್ಲೈನ್ ನಲ್ಲಿ ಸರಿಯಾದ ಕಮ್ಯುನಿಕೇಷನ್ ಆಗ್ತಾ ಇಲ್ಲ. ಹೀಗಾಗಿ ಶಾಲೆ ಆರಂಭ ಮಾಡುವಂತೆ ಹೇಳುತ್ತಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದಂತೆ ಅವರ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡುತ್ತೇವೆ.‌ ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಒಂದರಿಂದ ತರಗತಿಯನ್ನ ಆರಂಭ ಮಾಡ್ತೇವೆ. ಶಾಲಾ ಕಟ್ಟಡಗಳ ನವೀಕರಣಕ್ಕೆ ಸದ್ಯಕ್ಕೆ ಹಣದ ಕೊರತೆ ಇದೆ. ಶೌಚಾಲಯಗಳ ಸಮಸ್ಯೆ ಮುಗಿದಿದೆ. ಒಂದೊಂದಾಗಿ ಸರಿ ಹೋಗುತ್ತೆ ಎಂದಿದ್ದಾರೆ.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಅಮೇರಿಕಾ ಸಾಧಿಸಿದ್ದು ಶೂನ್ಯ : ವ್ಲಾಡಿಮಿರ್ ಪುಟಿನ್

ಸಿದ್ದಾರ್ಥ್ ಶುಕ್ಲಾ ನಿಧನಕ್ಕೆ ಸಲ್ಮಾನ್ ಖಾನ್ ಸಂತಾಪ