Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಲಿಂಗಾಯತರ ಹೋರಾಟದ ಬಗ್ಗೆ ಸಚಿವ ಎಂಬಿ ಪಾಟೀಲ್ ಹೇಳಿದ್ದೇನು..?

---Advertisement---

ವಿಜಯಪುರ: ರಾಜ್ಯದಲ್ಲಿಯೇ ಅತ್ಯಂತ ಕುತೂಹಲ ಮೂಡಿಸಿದಂತ ವಿಜಯಪುರ ಜಿಲ್ಲೆಯಲ್ಲಿ ಬಾಳೇಹೊನ್ನೂರಿನ ತಂಭಾಪುರಿ ಶಾಖಾಮಠದ ಭೂಮಿ ಪೂಜೆ ಕಾರ್ಯ ಯಶಸ್ವಿಯಾಗಿ ನಡೆದಿದೆ. ಈ ವೇಳೆ ಒಂದಷ್ಟು ವಿಚಾರಗಳ ಬಗ್ಗೆ ಕುತೂಹಲವೂ ಮೂಡಿತ್ತು. ಕೂತೂಹಲಕ್ಕೆ ಕಾರಣವೂ ಇದೆ. ಕಳೆದ ಅವಧಿಯಲ್ಲಿ ಎಂ.ಬಿ.ಪಾಟೀಲ್ ಅವರು ನೀರಾವರಿ ಸಚಿವರಾಗಿದ್ದಾಗ ಪ್ರತ್ಯೇಕ ಲಿಂಗಾಯತರ ಹೋರಾಟದ ನೇತೃತ್ವವನ್ನ ವಹಿಸಿಕೊಂಡಿದ್ದರು. ಆಗ ಪಂಚಪೀಠ ಸೇರಿದಂತೆ ಹಲವರು ವಿರೋಧವನ್ನ ವ್ಯಕ್ಯಪಡಿಸಿದ್ದರು. ಎಂ.ಬಿ.ಪಾಟೀಲ್ ಅವರು ಧರ್ಮವನ್ನು ಬಡೀತಾ ಇದಾರೆ ಅಂತ ಹೇಳಿ ರಾಜ್ಯಾದ್ಯಂತ ಹೋರಾಟ ನಡೆದಿತ್ತು.

ಅದಾದ ನಂತರ ಕಾಂಗ್ರೆಸ್ ಸರ್ಕಾರಕ್ಕೆ ಹಿನ್ನಡೆಯೂ ಆಗಿತ್ತು. ಆ ಹಿನ್ನಡೆಗೆ ಲಿಂಗಾಯತರ ಹೋರಾಟವೇ ಕಾರಣ ಅಂತ ಹಲವರು ಆರೋಪ ಮಾಡಿದ್ರು. ಅಂದು ಎಂಬಿ ಪಾಟೀಲ್ ಅವರ ವಿರುದ್ಧ ನಿಂತ ನಾಯಕರು ಇಂದು ಅದೇ ಎಂಬಿ ಪಾಟೀಲ್‌ ಸವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಕುತೂಹಲ ಮೂಡಿತ್ತು. ರಂಭಾಪುರಿ ಶ್ರೀಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಈ ವೇಳೆ ಭಾಷಣದಲ್ಲಿಯೇ ಎಂಬಿ ಪಾಟೀಲ್ ಅವರು, ತಾವು ಹಿಂದೆ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವನ್ನ ಪ್ರತಿಪಾದಿಸಿದ ಅಂಶಗಳನ್ನೇ ಇಂದು ಶ್ರೀಗಳ ಮುಂದೆ ಪ್ರಸ್ತಾಪಿಸಿದ್ದಾರೆ. ನಾನು ನೇರವಾಗಿಯೇ ಶ್ರೀಗಳ ಮುಂದೆ ನನ್ನ ವಿಚಾರಗಳನ್ನ ಪ್ರಸ್ತಾಪ ಮಾಡುವುದಕ್ಕೆ ಯಾವುದೇ ಹಿಂಜರಿಕೆಯಿಲ್ಲ. ನನ್ನ ವಿಚಾರಗಳಿಗೆ ನಾನು ಈಗಲೂ ಬದ್ಧ ಎಂದಿದ್ದಾರೆ. ಹೋರಾಟದ ಮುಖ್ಯ ಉದ್ದೇಶ ಏನು ಎಂಬುದರ ಬಗ್ಗೆಯೂ ಸ್ಪಷ್ಟನೆ ನೀಡಿದ್ದರು. ಇದೇ ವೇಳೆ ಸ್ವಾಮೀಜಿಗಳು ಕೂಡ ಎಂಬಿ ಪಾಟೀಲ್ ಅವರ ಮಾತನ್ನ ಒಪ್ಪಿದರು. ಇಬ್ಬರು ಒಟ್ಟಾಗಿ ನಮ್ಮ ಸಮುದಾಯದ ಬಡವರಿಗೂ ಮೀಸಲಾತಿ ಸಿಗುವಂತೆ ಮಾಡೋಣಾ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now