ಬೆಂಗಳೂರು: ರಾಜ್ಯದಲ್ಲಿ ಕೆಲವೊಂದು ಸಂಘರ್ಷಗಳು ನಡೆಯುತ್ತಲೆ ಇದೆ. ಹಿಜಾಬ್ ಗೊಂದಲ ಆಯ್ತು ಇದೀಗ ಮುಸ್ಲಿಂ ಸಮುದಾಯದ ವ್ಯಾಪಾರಕ್ಕೆ ಬ್ರೇಕ್ ಹಾಕಿರುವುದು ಎಲ್ಲೆಡೆ ಪಸರಿಸುತ್ತಿದೆ. ಈ ವಿಚಾರ ಸದನದಲ್ಲೂ ಸದ್ದು ಮಾಡಿದೆ.
ಈ ಬಗ್ಗೆ ಮಾತನಾಡಿರುವ ಶಾಸಕ ಕೃಷ್ಣ ಭೈರೇಗೌಡ ನಾವೆಲ್ಲಾ ಗಾಜಿನ ಮನೆಯಲ್ಲಿಯೇ ಇದ್ದೇವೆ ಎಂದಿದ್ದಾರೆ. ಕೇರಳದಲ್ಲಿ ಧಾರ್ಮಿಕ ಸಂಸ್ಥೆಯ ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಅಂದಿನ ದಿನ ನಿಮ್ಮ ನಿಲುವು ಏನಾಗಿತ್ತು ಎಂದು ಹಿಜಾಬ್ ಬಗ್ಗೆ ಪ್ರಶ್ನಿಸಿ ಶಾಸಕ ಕೃಷ್ಣ ಭೈರೇಗೌಡ ಬಿಜೆಪಿಗೆ ಪ್ರಶ್ನಿಸಿದ್ದಾರೆ.
ಸುಪ್ರೀಂ ಆದೇಶದ ವಿರುದ್ಧ ನಡೆಸಿದ ಒಂದು ವರ್ಷದ ಚಳುವಳಿಯನ್ನ ನೆನಪಿಸಿಕೊಳ್ಳಿ. ನಿಮ್ಮ ಪಾರ್ಟಿಯವರೇ ಬೀದಿಗಿಳಿದು ಬೃಹತ್ ಹೋರಾಟ ನಡೆಸಿದ್ರಿ. ನಾನು ಯಾವ ಧರ್ಮ, ಸಂಸ್ಥೆ ಅಂತ ಹೇಳ್ತಿಲ್ಲ. ಸಂಘರ್ಷಕ್ಕೆ ಎಡೆ ಮಾಡಿಕೊಡಬೇಡಿ ಎಂದು ಹೆಚ್ ಡಿ ಕೆ ಹೇಳಿದ್ದಾರೆ. ನಾವೆಲ್ಲಾ ಗಾಜಿನ ಮನೆಯಲ್ಲಿ ಇದ್ದೇವೆ.
ಇವತ್ತು ಕರ್ನಾಟಕದಲ್ಲಿ ಮಾಡಿದ್ದನ್ನ ನೀವೆಲ್ಲಾ ಹೇಳುತ್ತಿದ್ದೀರಿ. ಸುಪ್ರೀಂ ಕೋರ್ಟ್ ಆದೇಶವನ್ನ ಉಲ್ಲಂಘಿಸಿ ಏನೇನು ಮಾಡಿದ್ರೀ..? ಅವತ್ತು ಏನೇನು ಮಾಡಿದ್ರಿ ಅನ್ನೋದನ್ನ ನೆನಪಿಸಿಕೊಳ್ಳಿ. ಅಲ್ಲಿ ಒಂದು ನ್ಯಾಯ ಇಲ್ಲಿ ಒಂದು ನ್ಯಾಯ ಸರಿಯಲ್ಲ. ಎಲ್ಲರೂ ತಪ್ಪು ಮಾಡಿದವರೇ, ಎಲ್ಲರೂ ಉಪ್ಪು ತಿಂದವರೆ. ಅದನ್ನು ಬಿಟ್ಟು ನೆಮ್ಮದಿಯಾಗಿ ಬದುಕಿ ಎಂದು ಕೃಷ್ಣ ಭೈರೇಗೌಡ ಸಲಹೆ ನೀಡಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಹೆಚ್ಚಾಗಿದೆ. ಇದರಿಂದ ಅದೆಷ್ಟೋ ಜನ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಸಾಲ ಕೊಟ್ಟ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 07 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೇಂಗಾ, ಕಡಲೆ, ಮೆಕ್ಕೆಜೋಳ ಸೇರಿದಂತೆ ಇತರೆ…
ಬೆಂಗಳೂರು: ನಟ ಡಾಲಿ ಧನಂಜಯ್ ಮದುವೆ ಸಂಭ್ರಮದಲ್ಲಿದ್ದಾರೆ. ಚಿತ್ರದುರ್ಗದ ಅಳಿಯ ಬೇರೆ ಆಗ್ತಾ ಇದ್ದಾರೆ. ಧನ್ಯತಾ ಮೂಲತಃ ಚಿತ್ರದುರ್ಗದವರು. ಆದರೆ…
ಬೆಂಗಳೂರು: ಇಂದು ಹೈಕೋರ್ಟ್ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ನೀಡಿದೆ. ಈ…
ಈ ರಾಶಿಯವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ಒದಗಿ ಬರಲಿವೆ, ಈ ರಾಶಿಯವರಿಗೆ ಉತ್ತಮ ಸಂಗಾತಿ ಸಿಗುವರು, ಶುಕ್ರವಾರದ ರಾಶಿ ಭವಿಷ್ಯ…
144 ವರ್ಷಗಳಿಗೊಮ್ಮೆ ಬರುವ ಮಹಾಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದರೆ ಕರ್ಮ ಕಳೆಯುತ್ತದೆ ಎಂದು ನಂಬಲಾಗಿದೆ. ಹೀಗಾಗಿ ಕೋಟ್ಯಾಂತರ ಮಂದಿ…