ದೇಶಕ್ಕಾಗಿ ಸೇವೆ ಸಲ್ಲಿಸಿ ಮರಳಿದ ವೀರಯೋಧನಿಗೆ ಅದ್ದೂರಿ ಸ್ವಾಗತ, ಸನ್ಮಾನ

suddionenews
0 Min Read

ದಾವಣಗೆರೆ : ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ 21 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ಜಗಳೂರು ತಾಲ್ಲೂಕಿನ ಬಿದರಕೆರೆ ಗ್ರಾಮಕ್ಕೆ ಮರಳಿದ ಯೋಧ ಮುರುಗೇಶ್‍ಗೆ ಬಿದರಕೆರೆ ಗೆಳೆಯರ ಬಳಗದ ವತಿಯಿಂದ ಅದ್ದೂರಿಯಾಗಿ ಸ್ವಾಗರಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಮಾಜಿ ಶಾಸಕ H P ರಾಜೇಶ್ ವಹಿಸಿದ್ದರು.

ಬಿದರಕೆರೆ ಗ್ರಾಮ ಪಂಚಾಯಿತಿಯ ಸದಸ್ಯರು, ಪಂಚಾಯಿತಿ ಅಭಿವೃದ್ದಿ ಅಧಿಕಾರಿ, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಪ್ರಕಾಶ್, ಬಸವರಾಜ, ಗೆಳೆಯರ ಬಳಗದ ಸ್ನೇಹಿತರಾದ ಸಂಜಯ್ ,ಮಹೇಶ್, ಶ್ರೀಧರ, ಕೆಂಚಪ್ಪ , ನಾಗರಾಜ, ಗೋವಿಂದರಾಜು ಮತ್ತು ಇತರರು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *