ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ: ಉಗ್ರಪ್ಪ

suddionenews
1 Min Read

ಬೆಂಗಳೂರು: ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ ,ಪಕ್ಷವನ್ನ ಅಧಿಕಾರಕ್ಕೆ ತರಲು ಖರ್ಗೆ, ಡಿಕೆಶಿ, ಸಿದ್ದರಾಮಯ್ಯ ಶ್ರಮಿಸುತ್ತಿದ್ದಾರೆ ಎಂದು ಮಾಜಿ ಸಂಸದ ಉಗ್ರಪ್ಪ ಹೇಳಿದರು. ಈ ವೇಳೆ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ನಮ್ಮ ಪಕ್ಷದ ಅಧ್ಯಕ್ಷರು ಮೂರು ದಶಕಗಳಿಂದ ಅವ್ರನ್ನ ಬಲ್ಲೆ, ಕ್ರೀಯಾಶೀಲ ರಾಜಕಾರಣಿ ರೈತ ಕುಟುಂಬದಲ್ಲಿ ಹುಟ್ಟಿ ಹಿರಿಯ ನಾಯಲಕರಾಗಿ ಹೊರಹೊಮ್ಮಿದ್ದಾರೆ ಎಂದರು.

ನಿನ್ನೆ ಬೇರೆಯವರು ಏನೋ ಜೋಕ್ ಮಾಡಿದ್ರು,ಅದನ್ನ ಕೇಳಿ ನಗ್ತಾ ಬಂದು ಪ್ರೆಸ್ ಮೀಟ್ ಮಾಡ್ದೆ
ಸಲೀಂ ರವರು ಏನೋ ನನ್ನ ಕಿವಿಯಲ್ಲಿ ಗುಸುಗುಟ್ಟಿದ್ರು,
ಇರಿಗೇಶನ್ ಹಗರಣದ ಬಗ್ಗೆ ಹೇಳ್ತಿದ್ರು ಬಿಜೆಪಿಯವರು ನಮ್ಮ‌ಮೇಲೆ ಗೂಬೆ ಕೂರಿಸ್ತಾರೆ ಅಂತ ಹೇಳ್ರಿದ್ರು ಅವರು ಹೇಳಿದ್ದಕ್ಕೆ ನಾನು ಅಲ್ಲಿಗೇ ನಿಲ್ಲಿಸಿದ್ದೆ ಮಾಧ್ಯಮಗಳಲ್ಲಿ ದೊಡ್ಡದಾಗಿ‌ ಇದನ್ನ ಬಿಂಬಿತವಾಗುತ್ತಿದೆ.ಡಿಕೆಶಿ ಬಗ್ಗೆ ಮಾತನಾಡಿದ್ದಾರೆಂದು ಬಿಂಬಿತವಾಗುತ್ತಿದೆ ಎಂದರು.

ಡಿಕೆಶಿ ಬ್ಯುಸಿನೆಸ್ ನಿಂದ ಆಸ್ತಿ ಸಂಪಾದನೆ ಮಾಡಿದ್ದಾರೆ. ರಾಜಕಾರಣದಿಂದ ಅವರು ಆಸ್ತಿಗಳಿಸಿದವರಲ್ಲ.ಪಕ್ಷಕ್ಕಾಗಿ ಅವರು ಕಳೆದುಕೊಳ್ತಿದ್ದಾರೆ
ಈ ಪರ್ಸೆಂಟೇಜ್ ನಿಂದ ಅವರು ಗಳಿಸಿದ್ದಲ್ಲ. ಆಯನೂರು ಉಮೇಶ್ ಬಗ್ಗೆ ಸಲೀಂ ಹೇಳ್ರಿದ್ರು
ಮೊನ್ನೆ ಐಟಿ ರೇಡ್ ಆದ ಬಿಎಸ್ ವೈ ಆಪ್ತರ ಬಗ್ಗೆ ಹೇಳ್ತಿದ್ರು,ದಾಳಿಗೊಳಗಾದ ಉಮೇಶ್ ನಮ್ಮ ಊರಿನವರು ಎಂದಿದ್ದರು. ಇದನ್ನೇ ಮಾಧ್ಯಮಗಳಲ್ಲಿ ದೊಡ್ಡದಾಗಿ ಬಿಂಬಿಸಲಾಗ್ತಿದೆ ಈ ರೀತಿ ಬಿಂಬಿಸುವುದು ಸರಿಯಲ್ಲ
ಕಮೀಷನ್,ಭ್ರಷ್ಟಾಚಾರವಾಗಲಿ ಕಾಂಗ್ರೆಸ್ ಗೆ ದೂರ ಎಂದರು.

Share This Article
Leave a Comment

Leave a Reply

Your email address will not be published. Required fields are marked *