ರಾಮನಗರ: ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲೆಡೆ ಸೋತಿದೆ. ಇದು ರಾಜ್ಯ ಚುನಾವಣಾ ಮೇಲೂ ಪರಿಣಾಮ ಬೀರಬಹುದಾ ಎಂಬ ಲೆಕ್ಕಾಚಾರಗಳು ಶುರುವಾಗಿದೆ. ಸೋಲಿನ ಬಗ್ಗೆ ಸಂಸದ ಡಿ ಕೆ ಸುರೇಶ್ ಮಾತನಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಡಿ ಕೆ ಸುರೇಶ್ ಅವರು, ಚುನಾವಣೆಗಳಲ್ಲಿ ಸೋಲು ಗೆಲುವು ಸಾಮಾನ್ಯವಾಗಿರುತ್ತೆ. ಸೋಲಿನ ಕಾರಣದ ಬಗ್ಗೆ ನಮ್ಮ ನಾಯಕರು ಚರ್ಚಿಸುತ್ತಾರೆ. ಪಂಜಾಬ್ ನಲ್ಲಿ 6 ತಿಂಗಳಿನಿಂದ ಗೊಂದಲ ಸೃಷ್ಟಿಯಾಗಿತ್ತು. ಪಕ್ಷದ ಕಾರ್ಯಕರ್ತರಲ್ಲೇ ಈ ಗೊಂದಲ ಇತ್ತು. ಹೀಗಾಗಿ ನಮಗೆ ಪಂಜಾಬ್ ರಾಜ್ಯದಲ್ಲಿ ಹಿನ್ನಡೆಯಾಗಿದೆ. ಅದನ್ನ ಸರಿ ಮಾಡುವ ಕೆಲಸ ಆಗುತ್ತದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಕುಗ್ಗಿದೆ ಎಂಬುದೆಲ್ಲಾ ಸುಳ್ಳು. 2023ರ ಚುನಾವಣೆಯಲ್ಲಿ ಬದಲಾವಣೆಯಾಗುತ್ತದೆ. ದಕ್ಷಿಣ ಭಾರತ ಚುನಾವಣಾ ರೀತಿ ನೀತಿಯೇ ಬೇರೆ. ಮುಳುಗುವ ಹಡಗೋ, ಮುಳುಗುತ್ತಿರುವ ಹಡಗೋ. ಎದ್ದು ಬರುವ ಸಾಮರ್ಥ್ಯ ಕಾಂಗ್ರೆಸ್ ಗೆ ಇದೆ.
ಐಟಿ, ಸಿಬಿಐ, ಚುನಾವಣಾ ಆಯೋಗದ ದುರ್ಬಳಕೆಯಾಗುತ್ತಿದೆ. ಹೀಗಾಗಿಯೇ ಬಿಜೆಪಿ 4 ರಾಜ್ಯಗಳಲ್ಲಿ ಗೆಲುವು ಸಾಧಿಸಿದೆ. ಎಲ್ಲದಕ್ಕೂ ಒಂದು ಅಂತ್ಯ ಅನ್ನೋದು ಇರುತ್ತದೆ ಎಂದು ವಿಜಯಪುರದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಮಂಡ್ಯ: ಇತ್ತೀಚೆಗೆ ಸಾಲದಿಂದ ಮನನೊಂದು ಮೈಸೂರಿನ ವಿಶ್ವೇಶ್ವರಯ್ಯ ನಗರ ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ…
ಚಿತ್ರದುರ್ಗ ಫೆ. 24 : ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ (20 ಅಂಶಗಳ ಕಾರ್ಯಕ್ರಮಗಳೂ ಸೇರಿದಂತೆ) ಮಾ. 01…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಮಹಾತ್ಮಾ ಗಾಂಧೀಜಿ ನರೇಗಾ ಯೋಜನೆಯಡಿ ಹೊರಗುತ್ತಿಗೆ ಆಧಾರದಲ್ಲಿ ಚಿತ್ರದುರ್ಗ ತಾಲ್ಲೂಕಿನಲ್ಲಿ ತಾಂತ್ರಿಕ ಸಹಾಯಕರಾಗಿ…
ಚಿತ್ರದುರ್ಗ ಫೆ. 24 : ಜಿಲ್ಲೆಯ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕರ ವಸೂಲಾತಿ ಆದೋಲನ ಹಮ್ಮಿಕೊಂಡು, ತೆರಿಗೆ ವಸೂಲಾತಿ ಮಾಡಿ,…
ಮೈಸೂರು: ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮೈಸೂರಿಗೆ ಭೇಟಿ ನೀಡಿದ್ದಾರೆ. ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ನಡೆಸುತ್ತಿರುವ…
ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 24 : ಇಂದಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಡಲೆ, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಇತರೆ…