Connect with us

Hi, what are you looking for?

ಪ್ರಮುಖ ಸುದ್ದಿ

ಸರ್ಕಾರ ನೀಡಿದ ಆಹಾರ ತಿರಸ್ಕರಿಸಿದ ಸ್ವಾಭಿಮಾನಿ ರೈತರು ; ವಿಡಿಯೋ ನೋಡಿ !

ನವದೆಹಲಿ : ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ಮೂವರು ಸಚಿವ ನಿಯೋಗದೊಂದಿಗೆ ರೈತರ ಮಾತುಕತೆ ನಡೆಸುತ್ತಿದ್ದರೂ, ರೈತರು ಮಾತ್ರ ಹಿಂದೆ ಸರಿಯುತ್ತಿಲ್ಲ. 

ಕೇಂದ್ರ ಸಚಿವರ ನಿಯೋಗ ದೆಹಲಿಯ ವಿಜ್ಞಾನ ಭವನದಲ್ಲಿ ಇಂದು ರೈತರೊಂದಿಗೆ ಮಹತ್ವದ ಸಭೆ ನಡೆಸಿದೆ. ಮಾತುಕತೆಯಲ್ಲಿ ಮಧ್ಯಾಹ್ನದವರೆಗೂ ಯಾವುದೇ ಪ್ರಗತಿ ಕಂಡುಬಂದಿಲ್ಲ.

ಇನ್ನೂ ಮಧ್ಯಾನ್ಹದ ಭೋಜನದ ಸಮಯದಲ್ಲಿ ಸರ್ಕಾರ ಒದಗಿಸಿದ ಆಹಾರವನ್ನು ರೈತರು ನಿರಾಕರಿಸಿದ್ದಾರೆ. ಅವರೇ ತಂದ ರೊಟ್ಟಿಯನ್ನು ತಿನ್ನುತ್ತಿರುವುದನ್ನು ದೃಶ್ಯದಲ್ಲಿ ಕಾಣಬಹುದು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರೊಬ್ಬರು ಹೇಳಿದ ಪ್ರಕಾರ, ಅವರು ನಮಗೆ ಆಹಾರ, ಚಹಾ ಮತ್ತು ಕಾಫಿ ನೀಡಲು ಬಂದರು. ಆದರೆ ನಾವು ಅವರ ಉಪಚಾರವನ್ನು ತಿರಸ್ಕರಿಸಿದ್ದೇವೆ ಎಂದರು.

ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರದ ವಿರುದ್ಧ ರೈತರು ಕಳೆದ ಎಂಟು ದಿನಗಳಿಂದ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಇಂದಿನ ಸಭೆಯಲ್ಲಿ, ಕೇಂದ್ರವು ತಂದ ಹೊಸ ಕೃಷಿ ಕಾಯಿದೆಯಿಂದ ಉಂಟಾಗುವ ಅನಾನುಕೂಲಗಳನ್ನು, ಅಪಾಯಗಳನ್ನು ಮತ್ತು ನ್ಯೂನತೆಗಳನ್ನು ಕೇಂದ್ರ ಸರ್ಕಾರದ ನಿಯೋಗಕ್ಕೆ ಮನವರಿಕೆ ಮಾಡಿಕೊಟ್ಟರು.
ಈ ಸಭೆಯಲ್ಲಿ ಕೃಷಿ ಸಚಿವ ನರೇಂದ್ರ ತೋಮರ್,ಅವರ ಕ್ಯಾಬಿನೆಟ್ ಸಹೋದ್ಯೋಗಿ ಪಿಯೂಷ್ ಗೋಯಲ್ ಮತ್ತು ಕಿರಿಯ ಸಚಿವ ಸೋಮ ಪ್ರಕಾಶ್ ಭಾವಹಿಸಿದ್ದರು.

ಕೇಂದ್ರವು ಜಾರಿಗೆ ತಂದ ಹೊಸ ಕೃಷಿ ಕಾನೂನುಗಳ ಬಗ್ಗೆ ಚರ್ಚಿಸಲು ವಿಶೇಷ ಸಂಸತ್ ಅಧಿವೇಶನ ಕರೆಯಬೇಕೆಂದು ರೈತರು ಒತ್ತಾಯಿಸಿದರು. ಇದು ಸರ್ಕಾರಕ್ಕೆ ಕೊನೆಯ ಅವಕಾಶ ಎಂದು ರೈತರು ಎಚ್ಚರಿಸಿದ್ದಾರೆ.

ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿದೆ. ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದಂತೆ ಸರ್ಕಾರವು ಲಿಖಿತ ಭರವಸೆ ನೀಡುತ್ತದೆ ಎಂದು ಹೇಳಲಾಗಿದೆ.

Click to comment

Leave a Reply

Your email address will not be published. Required fields are marked *

You May Also Like

ಪ್ರಮುಖ ಸುದ್ದಿ

8 ಕೋಟಿ ಜನರು ಭಾಗವಹಿಸುವ ಸಾಧ್ಯತೆ ರೈತರ ಮಾಡಿದ ರೀತಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ದಿಗ್ಬಂಧನಗೊಳಿಸುವ ಯೋಜನೆ ಪೆಟ್ರೋಲಿಯಂ ಬೆಲೆಗಳು, ಇ-ವೇ ಬಿಲ್ ನಿಬಂಧನೆಗಳ ವಿರುದ್ಧ ಪ್ರತಿಭಟನೆ ನವದೆಹಲಿ:  ದಿನದಿಂದ ದಿನಕ್ಕೆ ಏರುತ್ತಿರುವ, ಶತಕದ...

ಪ್ರಮುಖ ಸುದ್ದಿ

ನವದೆಹಲಿ : ಯೋಗ ಗುರು ಮತ್ತು ಪತಂಜಲಿ ಸಂಸ್ಥೆಯ ಸಂಸ್ಥಾಪಕ ರಾಮದೇವ್ ಬಾಬಾ ಅವರನ್ನು ಬಂಧಿಸುವಂತೆ ಅನೇಕರು ಒತ್ತಾಯಿಸುತ್ತಿದ್ದಾರೆ.  ಕರೋನಾ ವಿಚಾರಕ್ಕೆ ಸಂಬಂಧಿಸಿದಂತೆ ಪತಂಜಲಿ ಇತ್ತೀಚೆಗೆ ‘ಕೊರೊನಿಲ್’ ಎಂಬ ಔಷಧಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಈ...

ಪ್ರಮುಖ ಸುದ್ದಿ

ಬೆಂಗಳೂರು: ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಪೋಟ ಪ್ರಕರಣ ವಿಚಾರಕ್ಕೆ ದಿನೇಶ್ ಗುಂಡೂರಾವ್ ಗರಂ ಆಗಿದ್ದಾರೆ. ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ದುರ್ಘಟನೆ ಬಳಿಕವೂ ಸರ್ಕಾರ ಎಚ್ಚೇತ್ತುಕೊಂಡಿಲ್ಲ. ಇದೀಗ ಚಿಕ್ಕಬಳ್ಳಾಪುರದಲ್ಲೂ ಈ ಘಟನೆ ನಡೆದಿದೆ. ಇದರ ಹಿಂದೆ...

ಪ್ರಮುಖ ಸುದ್ದಿ

ತುಮಕೂರು: ಇತ್ತೀಚೆಗೆ ರಾಜ್ಯದಲ್ಲಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇಂದಿನ ಪರಿಸ್ಥಿತಿ ಬಗ್ಗೆ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಾನು ಸಿಎಂ ಸ್ಥಾನದಿಂದ ಇಳಿಯುತ್ತಿದ್ದಂತೆ ಪ್ರವಾಹ ಬಂತು, ಕೊರೊನಾ ಬಂತು. ಇದೆಲ್ಲವನ್ನು...

ಪ್ರಮುಖ ಸುದ್ದಿ

ಬೆಂಗಳೂರು: ತಮಿಳುನಾಡು ಮತ್ತೆ ಕಾವೇರಿ ಕ್ಯಾತೆ ತೆಗೆದಿದೆ. ಹೆಚ್ಚುವರಿ ನೀರು ಬಿಡಬೇಕೆಂದು ಹೇಳಿದೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಅವರು ಟ್ವಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ಕಾವೇರಿಯ ಹೆಚ್ಚುವರಿ ನೀರನ್ನು ಬಳಸಿಕೊಳ್ಳಲು...

ಪ್ರಮುಖ ಸುದ್ದಿ

ವಾರದಲ್ಲಿ 87 ಸಾವಿರ ಹೊಸ ಪ್ರಕರಣಗಳು ವ್ಯಾಕ್ಸಿನೇಷನ್ ತ್ವರಿತಗೊಳಿಸಲು ರಾಜ್ಯಗಳಿಗೆ ಕೇಂದ್ರ ಪತ್ರ ಮತ್ತೊಮ್ಮೆ ಲಾಕ್‌ಡೌನ್ ನತ್ತ ಮಹಾರಾಷ್ಟ್ರ ಸರ್ಕಾರದ ಚಿತ್ತ ಜನರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದ ಆರೋಗ್ಯ ಇಲಾಖೆ ನವದೆಹಲಿ: ಕರೋನಾ...

ಕ್ರೀಡಾ ಸುದ್ದಿ

ಚೆನ್ನೈ : ಐಪಿಎಲ್ 2021 ಮಿನಿ ಹರಾಜಿನಲ್ಲಿ ಟೀಮ್ ಇಂಡಿಯಾ ವೇಗದ ಬೌಲರ್ ಉಮೇಶ್ ಯಾದವ್ ಅವರನ್ನು ಕನಿಷ್ಠ ಬೆಲೆಗೆ ಮಾರಾಟ ಮಾಡುವ ಬಗ್ಗೆ ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ ಮೌನ...

ಪ್ರಮುಖ ಸುದ್ದಿ

ವಾಟ್ಸಾಪ್ ಯಾವ ಘಳಿಗೆಯಲ್ಲಿ ಹೊಸ ಗೌಪ್ಯತೆ ನೀತಿ ನಿಯಮಗಳು ಜಾರಿ ಮಾಡಿತೋ, ಆವಾಗಿನಿಂದ ದುರದೃಷ್ಟ ವಕ್ಕರಿಸಿದಂತಿದೆ. ಒಂದೆಡೆ, ವಾಟ್ಸಾಪ್ ಅದರ ಪ್ರತಿಸ್ಪರ್ಧಿ ಅಪ್ಲಿಕೇಶನ್‌ಗಳಾದ ಸಿಗ್ನಲ್ ಮತ್ತು ಟೆಲಿಗ್ರಾಮ್ ಗಳನ್ನು ಡೌನ್‌ಲೋಡ್ ಮಾಡಲು ಮುಂದಾಗುತ್ತಿದ್ದಾರೆ....

ಪ್ರಮುಖ ಸುದ್ದಿ

ಅಪ್ಪಿ ತಪ್ಪಿ ಕಳ್ಳರ ಮುಂದೇನಾದ್ರೂ ಕ್ಯಾಮೆರಾ ಕಂಡ್ರೆ ಇನ್ನೆಲ್ಲಿ ಸಿಕ್ಕಿಬೀಳ್ತಿವೋ ಅಂತ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಕಳ್ಳ ಅದಕ್ಕೆ ವಿರುದ್ಧ, ವರದಿಗಾರನ ಹತ್ತಿರವೇ ಹಣ ದೋಚಿದ್ದಾನೆ. ಅದು ವರದಿಗಾರ ಅವರ...

error: Content is protected !!