ನಮಗೆ ಉಪಚುನಾವಣೆ ಕ್ಷೇತ್ರಗಳು ಕೂಡಾ ಸವಾಲಿನ ಕ್ಷೇತ್ರಗಳು: ಸದಾನಂದ ಗೌಡ

suddionenews
1 Min Read

ಬೆಂಗಳೂರು: ದಸರಾ ಉತ್ಸವ ಮುಗಿದ ಬಳಿಕ ಉಪಚುನಾವಣೆ ಪ್ರಚಾರಕ್ಕೆ ಹೋಗುತ್ತೇವೆ ಎಂದು ಸಂಸದ ಸದಾನಂದ ಗೌಡ ಹೇಳಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಕ್ಷದ ನಿರ್ದೇಶನದ ಪ್ರಕಾರ ಹೋಗುತ್ತೇವೆ,ಉಪಚುನಾವಣೆ ಬರೆದೇ ಇರುತ್ತಿದ್ದರೆ ಕೋರ್ ಕಮಿಟಿಯಲ್ಲಿ ನಿರ್ಧಾರ ಆದಂತೆ ರಾಜ್ಯ ಪ್ರವಾಸಕ್ಕೆ ಹೋಗ ಬೇಕಿತ್ತು.

ನಮಗೆ ಉಪಚುನಾವಣೆ ಕ್ಷೇತ್ರಗಳು ಕೂಡಾ ಸವಾಲಿನ ಕ್ಷೇತ್ರಗಳು, ಉಪಚುನಾವಣೆ ಮುಗಿದ ಬಳಿಕ ಪ್ರವಾಸದ ದಿನಾಂಕ ನಿಗದಿಯಾಗುತ್ತದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆ ಉಗ್ರಪ್ಪ ಮತ್ತು ಸಲೀಂ ಮಾತುಕತೆ ವಿಚಾರವಾಗಿ ಮಾತನಾಡಿ,
ಇದನ್ನು ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು, ಅವರ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತಾಡಲು ಇಷ್ಟಪಡಲ್ಲ
ಡಿ.ಕೆ. ಶಿವಕುಮಾರ್ ಬಗ್ಗೆ ಅವರ ಪಕ್ಷದವರೇ ಮಾತಾಡುತ್ತುರುವುದು ನೋಡಿದರೆ ಅವರ ಪಕ್ಷದಲ್ಲೇ ಷಡ್ಯಂತ್ರ ನಡೆಯುತ್ತಿರುವುದು ಗೊತ್ತಾಗುತ್ತದೆ. ಕಾಂಗ್ರೆಸ್ ಈಗಾಗಲೇ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅಂತಾ ವರ್ಟಿಕಲ್ ಆಗಿ ಡಿವೈಡ್ ಆಗಿದೆ. ಅದಕ್ಕೆ ಪ್ರೂಫ್ ಗಳು ದಿನಾ ಒಂದೊಂದು ಕಾಣ್ತಾ ಇದೆ.ಕಾಂಗ್ರೆಸ್ ಪಕ್ಷ ಈಗಾಗಲೇ ಅಧಪತನದ ಅಂಚಿಗೆ ಹೋಗಿದೆ, ಇದರ ಹಿಂದೆ ಯಾರಿದ್ದಾರೆ ಅಂತಾ ನಾನು ಹೇಳಲ್ಲ. ಪಕ್ಷದ ಕಚೇರಿಯಲ್ಲೇ ಕುಳಿತುಕೊಂಡು ಪಕ್ಷದ ನಾಯಕರ ವಿರುದ್ಧ ಮಾತಾಡಬೇಕಾದರೇ ಅದಕ್ಕೆ ಹಿಂದೆ ಸ್ವಲ್ಪ ಬಲಿಷ್ಠರಾದವರು ಯಾರಾದರೂ ಇರಲೇಬೇಕಲ್ವಾ..? ಅದು ಯಾರು ಏನು ಅಂತಾ ಅವರೇ ತಿಳಿದುಕೊಳ್ಳಲಿ ಎಂದರು.

ಬೆಂಗಳೂರು ನಗರ ಉಸ್ತುವಾರಿ ಸಚಿವರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮಂತ್ರಿ ಸ್ಥಾನ, ಉಸ್ತುವಾರಿ ಸ್ಥಾನ ಕೊಡುವುದು ಸಿಎಂ ಪರಮಾಧಿಕಾರ, ಅವರು ಆಡಳಿತದ ಕ್ಯಾಪ್ಟನ್ ಯಾರ್ಯಾರು ಬ್ಯಾಟಿಂಗ್ ಮಾಡಬೇಕು, ಬೌಲಿಂಗ್ ಮಾಡಬೇಕು, ಫೀಲ್ಡಿಂಗ್ ಮಾಡಬೇಕು, ಅವರ ಸೀರೀಸ್ ಏನು ಅಂತಾ ಸಿಎಂ ಆಲೋಚನೆ ಮಾಡುತ್ತಾರೆ.ಬೆಂಗಳೂರು ಉಸ್ತುವಾರಿ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *