Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಿಸರ ಕಾಳಜಿ ಹೊತ್ತು ಬರ್ತಿದೆ “ಜಲಪಾತ” ಸಿನಿಮಾ

Facebook
Twitter
Telegram
WhatsApp

 

 

ಜಲಪಾತವೆಂದೊಡನೆ ನಮಗೆ ನೆನಪಾಗುವುದು ಜೋಗ್ ಜಲಪಾತ. ಅದೇ ಹೆಸರಲ್ಲಿ ಸಿನಿಮಾ ಮಾಡಲು ಹೊರಟ ರಮೇಶ್ ಬೇಗಾರ್, ಪರಿಸರ ಕಾಳಜಿಯನ್ನು ಹೊತ್ತು ತರುತ್ತಿದ್ದಾರೆ. ಈಗಾಗಲೇ ರಮೇಶ್ ಬೇಗಾರ್ ವೈಶಂಪಾಯನ ತೀರ ಎಂಬ ಅದ್ಭುತ ಸಿನಿಮಾವನ್ನು ನಿರ್ದೇಶಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.


ಇವತ್ತಿನ ಎಲೆಕ್ಟ್ರಾನಿಕ್ ಯುಗದಲ್ಲಿ ಮಾನಸಿಕ ಒತ್ತಡ ಹೆಚ್ಚಿದ್ದು ಈ ಒತ್ತಡಕ್ಕೆ ಪರಿಹಾರ ನಿಸರ್ಗದಲ್ಲಿ ಮಾತ್ರ ಸಾಧ್ಯ. ಪ್ರಕೃತಿ, ಜನರ ಜೀವನ ಶೈಲಿ ಹಾಗೂ ಆಹಾರ ಕ್ರಮದ ಕುರಿತಾದ ಕಥೆಯೇ ಈ ಜಲಪಾತ. ೪೦ ವರ್ಷಗಳ ಹಿಂದೆ ಭಾರತದ ಆಹಾರ ಪದ್ದತಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಆರೋಗ್ಯಕರವಾಗಿತ್ತು, ಆದ್ರೆ ಈಗ ಮಣ್ಣಿನಲ್ಲಿ ಸತ್ವ ಇಲ್ಲ, ಆಹಾರದಲ್ಲಿ ಕಲಬೆರಿಕೆ ಹಾಗೂ ರಾಸಾಯನಿಕ ವಸ್ತುಗಳ ವಿಪರೀತ ಬಳಕೆಯಿಂದ ಜನರಲ್ಲಿ ಸಮಸ್ಯೆಗಳು ಹೆಚ್ಚಿವೆ. ಹೀಗಾಗಿ ಪೂರ್ವಿಕರ ಜೀವನ ಶೈಲಿ ಹಾಗೂ ಆಹಾರ ಪದ್ದತಿ ಮತ್ತೆ ಮರುಕಳಿಸ್ಬೇಕು ಅನ್ನೋ ಕಾರಣಕ್ಕೆ ಜಲಪಾತ ಸಿನಿಮಾವನ್ನು ನಿರ್ಮಾಣ ಮಾಡ್ತಿದ್ದಾರೆ ಸಾಮಾಜಿಕ ಚಿಂತಕ ಹಾಗೂ 150ಕ್ಕು ಹೆಚ್ಚು ಆರ್ಗ್ಯಾನಿಕ್ ಪ್ರಾಡೆಕ್ಟ್ ಇರುವ ಇಂಡಸ್ ಹರ್ಬ್ಸ್ ಎಂ.ಡಿ ರವೀಂದ್ರ ತುಂಬರಮನೆ”.

ಜಲಪಾತ ಚಿತ್ರಕ್ಕೆ‌ ರಜನೀಶ್ ನಾಯಕರಾಗಿ ನಟಿಸಿದ್ರೆ, ನಾಗಶ್ರೀ‌ ನಾಯಕಿಯಾಗಿ ಕಾಣಿಸಿಕೊಳ್ತಿದ್ದಾರೆ. ನೈಸರ್ಗಿಕ ಹಾಗೂ ಸಾವಯವ ಕೃಷಿ ಕಮ್ಯೂನಿಟಿ ಕಲ್ಪನೆಯ ರುವಾರಿಯೂ ಆಗಿರೋ ರವೀಂದ್ರ ತುಂಬರಮನೆ” ಅವ್ರು ಮೊನ್ನೆಯಷ್ಟೆ ಬೆಂಗಳೂರಿನಿಂದ ೯೦ ಕಿ.ಲೋ ಮೀಟರ್ ದೂರದಲ್ಲಿರೋ ಮದ್ದೂರಿನ “ಮಧುವನ”ದಲ್ಲಿ ವಸಂತೋತ್ಸವ ಕಾರ್ಯಕ್ರಮವನ್ನು ಮಾಡಲಾದ್ದು. ಯುಗಾದಿ ಹಾಗೂ ಸುಗ್ಗಿ ಹಬ್ಬದಂತೆ ವಾತಾರಣವನ್ನು ಕ್ರಿಯೇಟ್ ಮಾಡಿದ್ರು. ಈ ಜಾಗದಲ್ಲಿಯೇ ಜಲಪಾತ ಸಿನಿಮಾದ ಸಿಕ್ವೆನ್ಸ್ ಶೂಟಿಂಗ್ ಮಾಡಲಾಯ್ತು. ಬೆಂಗಳೂರಿನ ಟೆನ್ಶನ್ ಹಾಗೂ ಬ್ಯೂಸಿ ಬದುಕಿನ ಜಂಜಾಟದಲ್ಲಿದ್ದ ನೂರಾರು ಜನ ಮಧುವನಕ್ಕೆ ಭೇಟಿಕೊಟ್ಟು ಸಂಗೀತ ಹಾಗೂ ಆಟಗಳನ್ನಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈಗಾಗ್ಲೆ ಶೃಂಗೇರಿ ಸುತ್ತಮುತ್ತ ೧೮ದಿನಗಳ ಕಾಲ ಶೂಟಿಂಗ್ ನಡೆದಿದ್ದು ಸಧ್ಯ ಮಧುವನದ ವಸಂತೋತ್ಸವದಲ್ಲಿ ಚಿತ್ರೀಕರಣ ನಡೆಯುತ್ತಿದೆ. ನೈಸರ್ಗಿಕ ಹಾಗೂ ಸಾವಯವ ಕೃಷಿ ಬಗ್ಗೆ ಆಸಕ್ತಿ ಇರುವವರು ಮಧುವನಕ್ಕೆ ವಿಸಿಟ್ ಕೊಟ್ಟು ಸೇರ್ಪಡೆ ಕೂಡ ಆಗ್ಬಹುದು ಎಂದಿದ್ದಾರೆ ಜಲಪಾತ ಸಿನ್ಮಾಕ್ಕೆ ವಿಷಯ ಒದಗಿಸಿದವರು ಹಾಗೂ ಮಧುವನ ಕಲ್ಪನೆಯ ಕತೃ “ರವೀಂದ ತುಂಬರಮನೆ”.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಯಾದವ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ

  ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29 : ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬಿ.ಎನ್. ಚಂದ್ರಪ್ಪ ರವರು ಯಾದವ ಸಂಸ್ಥಾನ ಮಹಾ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶ್ರೀ ಬಸವ

28 ಕ್ಷೇತ್ರಗಳಲ್ಲೂ ಎನ್.ಡಿ.ಎ. ಮೈತ್ರಿ ಕೂಟಕ್ಕೆ ಗೆಲುವು : ಗೋವಿಂದ ಕಾರಜೋಳ

ಸುದ್ದಿಒನ್, ಹಿರಿಯೂರು, ಮಾರ್ಚ್. 29 : ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಗೆಲುವು ಸಾಧಿಸಲಿದೆ ಎಂದು ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ಗೋವಿಂದ ಕಾರಜೋಳ ಭರವಸೆ

ಚಿತ್ರದುರ್ಗ ಜಿಲ್ಲಾ ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಚಾಲನೆ

  ಚಿತ್ರದುರ್ಗ, ಮಾರ್ಚ್. 29 : ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಕ್ಟೋಬರ್ 13, 2024 ರಂದು ಮದಕರಿ ನಾಯಕ ಜಯಂತಿ ಅಂಗವಾಗಿ

error: Content is protected !!